Download Our App

Follow us

Home » ಜಿಲ್ಲೆ » ಈ ವರ್ಷ ಒಂದೆರಡು ಪ್ರಧಾನಿಗಳ ಸಾವಾಗುತ್ತೆ : ಭಯಾನಕ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮೀಜಿ..!

ಈ ವರ್ಷ ಒಂದೆರಡು ಪ್ರಧಾನಿಗಳ ಸಾವಾಗುತ್ತೆ : ಭಯಾನಕ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮೀಜಿ..!

ಗದಗ : ಈ ವರ್ಷ ದೊಡ್ಡ ಅವಘಡಗಳು ಸಂಭವಿಸುತ್ತವೆ. ಜಗತ್ತಿನಲ್ಲಿ ಒಬ್ಬ ಸಂತ ಹಾಗೂ ಒಂದೆರಡು ಪ್ರಧಾನಿಗಳು ಸಾವಿಗೀಡಾಗಲಿದ್ದಾರೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಈ ಬಗ್ಗೆ ಗದಗದಲ್ಲಿ ನಿನ್ನೆ ಶ್ರೀಗಳು ಮಾತನಾಡಿ, 2024 ರಲ್ಲಿ ಇನ್ನಷ್ಟು ಸಂಕಷ್ಟ ಎದುರಾಗಲಿದೆ. ಅಕಾಲಿಕ ಮಳೆ, ಬಾಂಬ್ ಸಿಡಿಯುವ ಸಂಭವವಿದೆ 2024 ಜಗತ್ತಿಗೆ ಕಂಟಕವಾಗಲಿದೆ ಎಂದಿದ್ದಾರೆ.

ಜಗತ್ತಿನಾದ್ಯಂತ ಒಂದೆರಡು ಪ್ರಧಾನಿಗಳ ಸಾವು:

2024ರ ವರ್ಷ ಭಯಾನಕ ಅನುಭವನ್ನು ನೀಡಲಿದೆ. ಈ ವರ್ಷ ಜಗತ್ತಿನಾದ್ಯಂತ ಒಂದೆರಡು ಪ್ರಧಾನಿಗಳ ಸಾವಾಗುವ ಲಕ್ಷಣವಿದೆ. ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ. ದೇಶದಲ್ಲಿ ಅಸ್ಥಿರತೆ, ಯುದ್ಧ ಭೀತಿ, ಅಣುಬಾಂಬ್ ಸ್ಫೋಟಗೊಳ್ಳುವ ಅವಕಾಶವಿದೆ. ಇದರೊಂದಿಗೆ ಜಗತ್ತಿಗೆ ಮತ್ತೊಮ್ಮೆ ರೋಗ ಹರಡುವ ಸಾಧ್ಯತೆ ಜೊತೆಗೆ ದೊಡ್ಡ ಸುನಾಮಿಯೊಂದು ಎದ್ದು ಜಗತ್ತಿಗೆ ಅಪಾಯವಾಗಲಿದೆ. ದೈವ ನಂಬುವುದೊಂದೇ ಪರಿಹಾರ. ದೈವದ ಮೊರೆ ಹೋಗಬೇಕು ಎಂದು ಸಲಹೆ ನೀಡಿದ್ದಾರೆ.

ರಾಮಮಂದಿರ ಒಳ್ಳೆಯ ಸೂಚನೆ :

ಭಾರತೀಯ ಪ್ರಜೆಗಳಲ್ಲಿ ಆಧ್ಯಾತ್ಮಿಕ ಚಿಂತನೆ ಉಚ್ಛವಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಶ್ರೀರಾಮನ ಜನ್ಮಸ್ಥಳದಲ್ಲಿ ಶ್ರೀರಾಮನ ಬೃಹತ್ ದೇಗುಲ ನಿರ್ಮಾಣಗೊಂಡಿರುವುದು ಧಾರ್ಮಿಕವಾಗಿ ಒಳ್ಳೆಯ ಸೂಚನೆ ಸಿಕ್ಕಂತಾಗಿದೆ. ರಾಜಕೀಯದಲ್ಲಿ ಧಾರ್ಮಿಕತೆಯನ್ನು ಬೆರೆಸುವುದು ಸೂಕ್ತವಲ್ಲ ಎಂದು ಹೇಳಿದರು.

ಹಿಂದೂಗಳು ಒಂದಾದರೆ ಒಳ್ಳೆಯದು ಅನ್ನಿಸುತ್ತೆ :

ಅಯೋಧ್ಯೆ ರಾಮಂದಿರ ವಿಷಯದಲ್ಲಿ ಹಿಂದೂಗಳು ಒಂದಾಗಬೇಕು ಎಂಬ ಉಡುಪಿಯ ಪೇಜಾವರ ಶ್ರೀಗಳ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಕೋಡಿಶ್ರೀಗಳು, ಹಿಂದೂಗಳು ಒಂದಾದ್ರೆ ಒಳ್ಳೆಯದು. ಭಾರತೀಯರು ಒಗ್ಗಟ್ಟಾದರೆ ಎಲ್ಲರಿಗೂ ಒಳ್ಳೆಯದಾಗುತ್ತೆ. ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಭಾರತೀಯರು ದೇವರು, ಧರ್ಮ, ಸತ್ಯ, ನಂಬಿಕೆ ವಿಚಾರದಲ್ಲಿ ಪ್ರಬುದ್ಧರಾಗಿದ್ದಾರೆ. ದೇಶದ ಹಲವಾರು ಕಡೆಗಳಲ್ಲಿ ದೈವಾಂಶ ಸಂಭೂತರ ಹೆಸರಿನಲ್ಲಿ ದೇವಸ್ಥಾನ, ಗುಡಿ, ಗೋಪುರಗಳನ್ನು ನಿರ್ಮಿಸಿ ಸ್ಮರಣೆ ಮಾಡುವುದು ಸಾಮಾನ್ಯವಾಗಿದೆ. ಆ. ದೆಸೆಯಲ್ಲಿ ಶ್ರೀರಾಮನ ದೇವಸ್ಥಾನ ಲೋಕಾರ್ಪಣೆಗೊಂಡಿರುವುದು ಧಾರ್ಮಿಕ ಪ್ರತೀಕವಾಗಿದೆ ಎಂದು ಹೇಳಿದರು.

ಇದನ್ನೂ ಓದಿ : ಕೊನೆಗೂ ನಿಗಮ ಮಂಡಳಿ ಪಟ್ಟಿ ಪ್ರಕಟ – 32 ಶಾಸಕರಿಗೆ ಅಧ್ಯಕ್ಷ ಸ್ಥಾನ ನೀಡಿ ಆದೇಶ..!

Leave a Comment

DG Ad

RELATED LATEST NEWS

Top Headlines

ಸ್ಟಾರ್ ನಿರ್ದೇಶಕ ಎ.ಪಿ ಅರ್ಜುನ್ ವಿರುದ್ಧ ನಡೆಯುತ್ತಿದ್ಯಾ ಪಿತೂರಿ?

ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ವಿವಾದದಲ್ಲಿ ಸಿಲುಕಿದೆ. ನಿರ್ಮಾಪಕರಿಂದ 2.5 ಕೋಟಿ ರೂಪಾಯಿ ಪಡೆದು ಡಿಜಿಟಲ್ ಟೆರೆನ್ ಸಂಸ್ಥೆ ಗ್ರಾಫಿಕ್ಸ್

Live Cricket

Add Your Heading Text Here