Download Our App

Follow us

Home » ರಾಜಕೀಯ » ಕೊನೆಗೂ ನಿಗಮ ಮಂಡಳಿ ಪಟ್ಟಿ ಪ್ರಕಟ – 32 ಶಾಸಕರಿಗೆ ಅಧ್ಯಕ್ಷ ಸ್ಥಾನ ನೀಡಿ ಆದೇಶ..!

ಕೊನೆಗೂ ನಿಗಮ ಮಂಡಳಿ ಪಟ್ಟಿ ಪ್ರಕಟ – 32 ಶಾಸಕರಿಗೆ ಅಧ್ಯಕ್ಷ ಸ್ಥಾನ ನೀಡಿ ಆದೇಶ..!

ಬೆಂಗಳೂರು : ಕರ್ನಾಟಕ ಸರ್ಕಾರವು ನಿಗಮ ಮಂಡಳಿ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಗಣರಾಜ್ಯೋತ್ಸವದ ದಿನವೇ ಬಹುನಿರೀಕ್ಷಿತ ಆದೇಶ ಪ್ರಕಟವಾಗಿದೆ. ಎನ್.ಎ.ಹ್ಯಾರಿಸ್, ಕೆಎಂ ಶಿವಲಿಂಗೇಗೌಡ, ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.

32 ಶಾಸಕರ ನಿಗಮ ಮಂಡಳಿ ನೇಮಕ ಆದೇಶದಲ್ಲಿ ಸಿಎಂ ಸಿದ್ದರಾಮಯ್ಯ ಬಣದ ಶಾಸಕರ ಮೇಲುಗೈ ಎದ್ದು ಕಾಣಿಸಿದೆ. ಇಂದು ರಾಜ್ಯಕ್ಕೆ ಬರಬೇಕಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಭೇಟಿ ಮುಂದಕ್ಕೆ ಹೋಗಿದ್ದರಿಂದ ನಿಗಮ ಮಂಡಳಿ ಪಟ್ಟಿ ಬಿಡುಗಡೆ ಇನ್ನಷ್ಟು ತಡವಾಗಬಹುದು ಎನ್ನುವ ಸೂಚನೆಗಳಿದ್ದವು. ಆದರೆ ಇದೀಗ 32 ಶಾಸಕರ ಪಟ್ಟಿಯನ್ನು ಅಂತಿಮ ಮಾಡಲಾಗಿದೆ.

ಎಲ್ಲಾ ಶಾಸಕರುಗಳನ್ನು ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ಸಂಪುಟ ದರ್ಜೆಯ ಸ್ಥಾನ ಮಾನದೊಂದಿಗೆ ಅಂದರೆ, ಸಚಿವರಿಗೆ ನೀಡಲಾಗುವ ಎಲ್ಲಾ ಸೌಲಭ್ಯದೊಂದಿಗೆ  ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ನಿಗಮ ಮಂಡಳಿ ಪಟ್ಟಿ ಇಲ್ಲಿದೆ : – 

  1. ಹಂಪನಗೌಡ ಬಾದರ್ಲಿ : ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ
  2. ಅಪ್ಪಾಜಿ ಸಿ.ಎಸ್.ನಾಡಗೌಡ : ಕೆಎಸ್​ಡಿಎಲ್
  3. ಹೆಚ್.ವೈ.ಮೇಟಿ : ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ
  4. ಎಸ್.ಆರ್.ಶ್ರೀನಿವಾಸ ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
  5. ಬಸವರಾಜ ನೀಲಪ್ಪ ಶಿವಣ್ಣನವರ್ : ಅರಣ್ಯ ಅಭಿವೃದ್ಧಿ ನಿಗಮ
  6. ಬಿ.ಜಿ.ಗೋವಿಂದಪ್ಪ : ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
  7. ಹೆಚ್.ಸಿ.ಬಾಲಕೃಷ್ಣ : ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ
  8. ಜಿ.ಎಸ್.ಪಾಟೀಲ್ : ಖನಿಜ ಅಭಿವೃದ್ಧಿ ನಿಗಮ ನಿಯಮಿತ
  9. ಎನ್.ಎ.ಹ್ಯಾರಿಸ್ : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
  10. ಕೌಜಲಗಿ ಮಹಾಂತೇಶ್ ಶಿವಾನಂದ : ಹಣಕಾಸು ಸಂಸ್ಥೆ
  11. ಸಿ.ಪುಟ್ಟರಂಗಶೆಟ್ಟಿ : ಮೈಸೂರು ಸೇಲ್ಸ್ ಇಂಟರ್​ನ್ಯಾಷನಲ್ ಲಿಮಿಟೆಡ್
  12. ಬೀಳಗಿ ಶಾಸಕ ಜೆ.ಟಿ.ಪಾಟೀಲ್ : ಹಟ್ಟಿ ಚಿನ್ನದ ಗಣಿ
  13. ರಾಜಾ ವೆಂಕಟಪ್ಪ ನಾಯಕ: ಕರ್ನಾಟಕ ರಾಜ್ಯ ಉಗ್ರಾಣ ನಿಗಮ
  14. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ : ಲ್ಯಾಂಡ್ ಆರ್ಮಿ
  15. ಕೆ.ಎಂ.ಶಿವಲಿಂಗೇಗೌಡ : ಕರ್ನಾಟಕ ಗೃಹ ಮಂಡಳಿ
  16. ಅಬ್ಬಯ್ಯ ಪ್ರಸಾದ್ : ಕರ್ನಾಟಕ ರಾಜ್ಯ ಕೊಳಚೆ ಅಭಿವೃದ್ಧಿ ಮಂಡಳಿ
  17. ಬೇಳೂರು ಗೋಪಾಲಕೃಷ್ಣ : ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ
  18. ಎಸ್.ಎನ್.ನಾರಾಯಣಸ್ವಾಮಿ : ಕೆಯುಡಿಐಸಿ ಮತ್ತು ಎಫ್​ಸಿ
  19. ಪಿ.ಎಂ.ನರೇಂದ್ರಸ್ವಾಮಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
  20. ಟಿ.ರಘುಮೂರ್ತಿ : ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ
  21. ರಮೇಶ್ ಬಾಬು ಬಂಡಿಸಿದ್ದೇಗೌಡ: ಚೆಸ್ಕಾಂ
  22. ಬಿ.ಶಿವಣ್ಣ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
  23. ಎಸ್.ಎನ್.ಸುಬ್ಬಾರೆಡ್ಡಿ : ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ
  24. ವಿನಯ ಕುಲಕರ್ಣಿ : ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
  25. ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು : ಜಂಗಲ್ ಲಾಡ್ಜಸ್
  26. ಬಸನಗೌಡ ದದ್ದಲ್ : ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
  27. ಖನೀಜ್ ಫಾತಿಮಾ : ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ
  28. ವಿಜಯಾನಂದ ಕಾಶಪ್ಪನರ್ : ಕರ್ನಾಟಕ ಕ್ರೀಡಾ ಪ್ರಾಧಿಕಾರ
  29. ಶ್ರೀನಿವಾಸ ಮಾನೆ : ಡಿಸಿಎಂ ರಾಜಕೀಯ ಸಲಹೆಗಾರ
  30. ಟಿ.ಡಿ.ರಾಜೇಗೌಡ : ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ
  31. ಎಂ.ರೂಪಕಲಾ: ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ

ಇದನ್ನೂ ಓದಿ : ವಿಜಯಪುರ : ಧ್ವಜಾರೋಹಣದ ವೇಳೆ ಗುಂಡು ಹಾರಿಸಿದ ವ್ಯಕ್ತಿ – ಗ್ರಾಪಂ ಅಧ್ಯಕ್ಷೆಗೆ ಗಾಯ..!

Leave a Comment

DG Ad

RELATED LATEST NEWS

Top Headlines

ವಾಹನ ಸವಾರರೇ ಹುಷಾರ್… ಇನ್ಮುಂದೆ 130km ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದರೆ ಬೀಳುತ್ತೆ ಎಫ್‌ಐಆರ್‌..!

ಬೆಂಗಳೂರು : ಇನ್ಮುಂದೆ ರಾಜ್ಯಾದ್ಯಂತ ಗಂಟೆಗೆ 130 ಕಿಮೀ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಅಂತವರ ವಿರುದ್ಧ FIR ದಾಖಲಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ

Live Cricket

Add Your Heading Text Here