Download Our App

Follow us

Home » ರಾಷ್ಟ್ರೀಯ » ರಾಮಂದಿರದ ಸ್ಮರಣಾರ್ಥ ಅಂಚೆ ಚೀಟಿ ರಿಲೀಸ್ ಮಾಡಿದ ಪ್ರಧಾನಿ ಮೋದಿ..!

ರಾಮಂದಿರದ ಸ್ಮರಣಾರ್ಥ ಅಂಚೆ ಚೀಟಿ ರಿಲೀಸ್ ಮಾಡಿದ ಪ್ರಧಾನಿ ಮೋದಿ..!

ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮನ ಭವ್ಯ ಮಂದಿರದ ಉದ್ಘಾಟನೆಗೆ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಶುಭ ಮುಹೂರ್ತಕ್ಕೆ ಇನ್ನು 4 ದಿನಗಳು ಮಾತ್ರ ಬಾಕಿ ಉಳಿದಿದ್ದು, ಜನವರಿ 22 ರಂದು ರಾಮ ಮಂದಿರ ಉದ್ಘಾಟನೆಯಾಗಲಿದೆ. ಪ್ರಾಣಪ್ರತಿಷ್ಠೆ ನಂತರ ರಾಮಲಲ್ಲಾ ಮೂರ್ತಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಈ ಮಧ್ಯೆ, ಉದ್ಘಾಟನೆಗೂ ಮುನ್ನ ನರೇಂದ್ರ ಮೋದಿ ಅವರು ಗುರುವಾರ ರಾಮಮಂದಿರದ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ. ಮೋದಿ ಅವರು ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಸ್ಮರಣಾರ್ಥ ಅಂಚೆ ಚೀಟಿಯನ್ನು ಅನಾವರಣಗೊಳಿಸಿದ್ದು, ಇದರೊಂದಿಗೆ ಶ್ರೀರಾಮನ ಕುರಿತು ಪ್ರಕಟಿಸಲಾದ ಅಂಚೆಚೀಟಿಗಳ ಪುಸ್ತಕವನ್ನೂ ಬಿಡುಗಡೆ ಮಾಡಿದ್ದಾರೆ.

48 ಪುಟಗಳ ಈ ಪುಸ್ತಕವು 20 ದೇಶಗಳ ಅಂಚೆಚೀಟಿ ಒಳಗೊಂಡಿದೆ. ಇದು ರಾಮಮಂದಿರ, ಗಣೇಶ, ಹನುಮಾನ್, ಜಟಾಯು, ಕೇವತ್ರಾಜ್ ಮತ್ತು ತಾಯಿ ಶಬರಿಯನ್ನು ಒಳಗೊಂಡಿದೆ. ಒಟ್ಟು 6 ಚೀಟಿಗಳು ಇಂದು ರಿಲೀಸ್​ ಆಗಿವೆ. ಅಂಚೆಚೀಟಿಗಳು ರಾಮ ಮಂದಿರ, ಚೌಪೈ ಮಂಗಲ್ ಭವನ್ ಅಮಂಗಲ್ ಹರಿ, ಸೂರ್ಯ, ಸರಯು ನದಿ ಮತ್ತು ದೇವಾಲಯದ ಸುತ್ತಮುತ್ತಲಿನ ಪ್ರತಿಮೆಗಳನ್ನು ಚಿತ್ರಿಸುತ್ತವೆ.

ಅಂಚೆಚೀಟಿಗಳ ಬಿಡುಗಡೆ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಜಗತ್ತಿನ ವಿವಿಧ ದೇಶಗಳಲ್ಲಿ ರಾಮನಿಗೆ ಸಂಬಂಧಿಸಿದ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಗಿದೆ. ಆಲ್ಬಂ ಕೂಡ ಬಿಡುಗಡೆಯಾಗಿದೆ ಎಂದರು.

ಇದನ್ನೂ ಓದಿ : ರಾಜ್ಯದಲ್ಲಿ ಮಧ್ಯರಾತ್ರಿ 11 ಗಂಟೆಯಿಂದ ಲಾರಿ ಮುಷ್ಕರ ಆರಂಭ..!

Leave a Comment

DG Ad

RELATED LATEST NEWS

Top Headlines

ಸೆಟ್ಟೇರಿತು ‘ಅಭಿಮನ್ಯು s/o ಕಾಶಿನಾಥ್’.. ಕಾಶಿನಾಥ್ ಪುತ್ರನ ಸಿನಿಮಾಗೆ ಕೋಮಲ್ ಸಾಥ್..!

ಸ್ಯಾಂಡಲ್‌ವುಡ್​​ನ ಖ್ಯಾತ ನಟ ಮತ್ತು ನಿರ್ದೇಶಕ ಕಾಶೀನಾಥ್ ತಮ್ಮ ಸಿನಿಮಾ ಮತ್ತು ನಿರ್ದೇಶನದ ಸಿನಿಮಾಗಳಿಂದಲೇ ಜನಮನ ಗೆದ್ದಿದ್ದಾರೆ. ಈಗ ಅವರ ಪುತ್ರ ಅಭಿಮನ್ಯು ಕಾಶಿನಾಥ್ ಸಹ ಸಾಲು

Live Cricket

Add Your Heading Text Here