Download Our App

Follow us

Home » ಅಪರಾಧ » ಪ್ರಜ್ವಲ್ ರೇವಣ್ಣ ಪೆನ್​​ಡ್ರೈವ್ ಕೇಸ್​ – ತನಿಖೆಗಾಗಿ ವಿಶೇಷ ತಂಡ ರಚನೆ ಮಾಡಿದ SIT ಮುಖ್ಯಸ್ಥ ಬಿ.ಕೆ.ಸಿಂಗ್..!

ಪ್ರಜ್ವಲ್ ರೇವಣ್ಣ ಪೆನ್​​ಡ್ರೈವ್ ಕೇಸ್​ – ತನಿಖೆಗಾಗಿ ವಿಶೇಷ ತಂಡ ರಚನೆ ಮಾಡಿದ SIT ಮುಖ್ಯಸ್ಥ ಬಿ.ಕೆ.ಸಿಂಗ್..!

ಹಾಸನ : ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಪೆನ್‌ಡ್ರೈವ್ ಪ್ರಕರಣ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡೀಯೋ ಕೇಸ್ ಅನ್ನು ಎಸ್ಐಟಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ಈ ಪ್ರಕರಣವನ್ನು SITಗೆ ನೀಡಿದ ಬೆನ್ನಲ್ಲೇ ತನಿಖೆ ತೀವ್ರಗೊಳಿಸಲು, SIT ಮುಖ್ಯಸ್ಥ ಬಿ.ಕೆ.ಸಿಂಗ್ ಮೂರು ತಂಡ ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದ್ದಾರೆ. ಈಗಾಗಲೇ ಸ್ಥಳೀಯ ಪೊಲೀಸರು ಕೇಸ್​ ಫೈಲ್ SITಗೆ ರವಾನೆ ಮಾಡಿದ್ದಾರೆ.

ಈ ಕೇಸ್​ಗೆ ಸಂಬಂಧಿಸಿದಂತೆ  SP ಸುಮನ್ ಡಿ ಪೆನ್ನೇಕರ್ ನೇತೃತ್ವದಲ್ಲಿ ಸಂತ್ರಸ್ಥೆಯರ ಹೇಳಿಕೆ ದಾಖಲು ಮಾಡಲಾಗಿದೆ. ಮತ್ತೊಂದು ತಂಡ ಟೆಕ್ನಿಕಲ್ ಆಗಿ ವಿಡಿಯೋಗಳ ಪರಿಶೀಲನೆ ಮಾಡಿದೆ. ಇದರ ಜೊತೆಗೆ ಹಾಸನ ಎಸ್​ಪಿ ಸೀಮಾ ಲಾಟ್ಕರ್ ಸೇರಿ ಇತರೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ, SP ಸೀಮಾ ಲಾಟ್ಕರ್ ಅವರು  ಎರಡು ಪೆನ್​ಡ್ರೈವ್​​ಗಳನ್ನು SITಗೆ ರವಾನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇಂದಿನಿಂದ SIT ತನಿಖೆ ಮತ್ತಷ್ಟು ಚುರುಕು ಪಡೆದುಕೊಳ್ಳಲಿದೆ.

ವಿಶೇಷ ತನಿಖಾ ತಂಡ ರಚನೆ : SIT ಮುಖ್ಯಸ್ಥ ಬಿ.ಕೆ.ಸಿಂಗ್ ರಚನೆ ಮಾಡಿರುವ ವಿಶೇಷ ತನಿಖೆ ತಂಡದಲ್ಲಿ ವಿವಿಧ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸ್ತಿರುವ ಪರಿಣಿತರ 18 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಇಂದಿನಿಂದಲೇ  SIT ಟೀಂ ಕಾರ್ಯಾಚರಣೆಗೆ ಧುಮುಕಿವೆ.

ವಿಶೇಷ ತನಿಖೆ ತಂಡ ಹೀಗಿದೆ :

  • ಮಾರತ್ತಹಳ್ಳಿ ACP ಪ್ರಿಯದರ್ಶಿನಿ ಈಶ್ವರ್ ಸಾಣೆಕೊಪ್ಪ
  • ಸಿಸಿಬಿ ಎಸಿಪಿ ಸತ್ಯನಾರಾಯಣ ಸಿಂಗ್
  • ಮಂಗಳೂರು ದಕ್ಷಿಣ ಎಸಿಪಿ ಧನ್ಯಾ ಎನ್ ನಾಯಕ್
  • ಕೆ.ಆರ್.ಪೇಟೆ ಠಾಣೆ ಇನ್ಸ್ಪೆಕ್ಟರ್ ಸುಮರಾಣಿ
  • ಮೈಸೂರು ಆಲನಹಳ್ಳಿ ಇನ್ಸ್ಪೆಕ್ಟರ್ ಸ್ವರ್ಣ
  • ಮಂಗಳೂರು ಉರವ ಠಾಣೆ ಇನ್ಸ್ಪೆಕ್ಟರ್ ಭಾರತಿ
  • ವೈಟ್ಫೀಲ್ಡ್ CEN ಠಾಣೆ ಇನ್ಸ್ಪೆಕ್ಟರ್ ಹೇಮಂತ್ ಕುಮಾರ್
  • ಬೆಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಜಿ.ಸಿ.ರಾಜಾ
  • ಮಲ್ಪೆ ಪಿಎಸ್ಐ ವೈಲೆಟ್ ಫ್ಲೆಮಿನಾ, ಸಿಸಿಆರ್ಬಿ PSI ವಿನುತಾ
  • ಯಳಂದೂರು PSI ನಂದೀಶ್, ಇಲವಾಲ PSI ಕುಮುದಾ
  • ಹೆಡ್ ಕಾನ್ಸ್ಟೇಬಲ್ಗಳಾದ ಸುಮತಿ, ಮನೋಹರ್, ಸುನಿಲ್
  • ಬಸವರಾಜ್, ರಂಗಸ್ವಾಮಿ, ಸಿಂಧು ಸೇರಿ 18 ಮಂದಿ ನಿಯೋಜನೆ

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್​ ಪ್ರಕರಣ – SIT ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ರಾ ಸಂತ್ರಸ್ತೆಯರು?

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here