Download Our App

Follow us

Home » ಅಪರಾಧ » ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್​ ಪ್ರಕರಣ – SIT ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ರಾ ಸಂತ್ರಸ್ತೆಯರು?

ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್​ ಪ್ರಕರಣ – SIT ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ರಾ ಸಂತ್ರಸ್ತೆಯರು?

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದೆ. ಅಶ್ಲೀಲ ವಿಡಿಯೋ ವೈರಲ್ ಕೇಸ್​ ಬಗ್ಗೆ ಎಸ್​ಐಟಿ ತಂಡ ತನಿಖೆ ಚುರುಕುಗೊಳಿಸಿದೆ. ಈ ಕೇಸ್​ನಲ್ಲಿ ಗುರುತು ಪತ್ತೆಯಾದ ಐದು ಸಂತ್ರಸ್ತೆಯರನ್ನು ಎಸ್​ಐಟಿ ತಂಡವು ಸಿಐಡಿ ಕಚೇರಿಗೆ ಕರೆಸಿದ್ದಾರೆ. ಎಸ್​ಪಿ ಸೀಮಾ ಲಾಟ್ಕರ್ ಮುಂದೆ ಐವರು ಸಂತ್ರಸ್ತೆಯರು ಹಾಜರಾಗಿದ್ದಾರೆ.

ವಿಡಿಯೋ ಕಾಲ್​ನಲ್ಲಿ ಕೆಲ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಗುರುತು ಪತ್ತೆಯಾದ ಸಂತ್ರಸ್ತೆಯರನ್ನ ವಿಚಾರಣೆ ಕರೆಸಲಾಗಿದೆ. ಈಗ ಎಸ್​ಪಿ ಸೀಮಾ ಲಾಟ್ಕರ್ ಮುಂದೆ ಸಂತ್ರಸ್ತೆಯರು ಮಾಹಿತಿ ಬಿಚ್ಚಿಡುತ್ತಿದ್ದಾರೆ. ಸಂತ್ರಸ್ತೆಯರಿಂದ ಎಸ್​ಪಿ ಹಲವು ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡಿದ್ದಾರೆ.

ಈ ವಿಡಿಯೋವನ್ನು ಯಾವ ಉದ್ದೇಶಕ್ಕೆ ಮಾಡಿಕೊಳ್ಳಲಾಗಿತ್ತು? ವಿಡಿಯೊದಲ್ಲಿರೋದು ನೀವೇನಾ? ಮಹಿಳೆಯರ ಇಚ್ಚೆಗನುಸಾರವಾಗಿ ವಿಡಿಯೋ ಮಾಡಿಕೊಳ್ಳಲಾಗಿತ್ತಾ? ಆಮಿಷ ಅಥವಾ ಭಯ ಉಂಟು ಮಾಡಿ ವಿಡಿಯೋ ಮಾಡಿಕೊಳ್ಳಲಾಗಿತ್ತಾ? ಹೀಗೆ ಹತ್ತಾರು ಪ್ರಶ್ನೆಗಳಿಗೆ ಸಂತ್ರಸ್ತೆಯರಿಗೆ ಎಸ್​ಐಟಿ ತಂಡ ಪ್ರಶ್ನೆ ಮಾಡಿದೆ. ವಿಚಾರಣೆಯಲ್ಲಿ SIT ಮಹತ್ವದ ಮಾಹಿತಿಯನ್ನು ಕಲೆ ಹಾಕಿದೆ.  ಎಸ್​ಪಿ ಸೀಮಾ ಲಾಟ್ಕರ್ ಮುಂದೆ ಐವರು ಸಂತ್ರಸ್ತೆಯರು ಹಾಜರಾಗಿ, ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್​ ಪಕ್ಷಕ್ಕಾಗುತ್ತಿರುವ ಡ್ಯಾಮೇಜ್​ ಕಂಟ್ರೋಲ್​ಗೆ ದಳಪತಿಗಳು ಪ್ರಜ್ವಲ್​ ಉಚ್ಛಾಟನೆಗೆ ಮುಂದಾಗಿದ್ದಾರೆ. ಇತ್ತ ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೂ ಇರಿಸುಮುರಿಸು ತರಿಸಿದೆ. ಪ್ರಜ್ವಲ್​ ವಿಚಾರವನ್ನೇ ಇಟ್ಟುಕೊಂಡು ಕಾಂಗ್ರೆಸ್​ ನಾಯಕರು ಬಿಜೆಪಿ ವಿರುದ್ಧ ಮುಗಿಬೀಳುತ್ತಿದ್ದಾರೆ. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎನ್ನುವ ಬಿಜೆಪಿಯವರು, ಮೊದಲು ಹಾಸನ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಬೇಕು ಎಂದು ಬಿಜೆಪಿಗೆ ತಿರುಗೇಟು ನೀಡುತ್ತಿದ್ದಾರೆ.

ಇದನ್ನೂ ಓದಿ : ಬೌದ್ಧ ಧರ್ಮದ ಸಂಪ್ರದಾಯದಂತೆ ಇಂದು ಶ್ರೀನಿವಾಸ ಪ್ರಸಾದ್ ಅಂತ್ಯಕ್ರಿಯೆ..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here