ಬೆಂಗಳೂರು : ಯಾರು ತಿಮಿಂಗಿಲ ಅಂತಾ ಗೊತ್ತಿದ್ರೆ ವಿಳಂಬ ಯಾಕೆ..? ತಿಮಿಂಗಿಲ ಯಾರು ಅಂತಾ ಕುಮಾರಸ್ವಾಮಿ ಅವ್ರೇ ಹೇಳಲಿ. ಕೇಸ್ ಹಿಂದೆ ಯಾರೇ ಇದ್ರೂ ಹೊರ ಬರಲೇಬೇಕಲ್ವಾ..? ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೆಚ್.ಡಿಕೆ ಹೇಳಿಕೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, SIT ಇದೆ ಎಲ್ಲವನ್ನೂ ಗಮನಿಸಿ ತನಿಖೆ ಮಾಡ್ತಿದೆ. ಪ್ರಜ್ವಲ್ ಬರ್ತಾರೋ.. ಬರಲ್ವೋ.. ಬರ್ತೀನಿ ಅಂತಾ ಹೇಳಿದ್ದಾರಾ..?
SIT ತನಿಖೆ ಮಾಡುತ್ತಿದೆ, ಈಗಲೇ ಏನನ್ನೂ ಹೇಳಲು ಆಗಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಜ್ಞಾವಂತ ನಾಗರಿಕರು ಪತ್ರ ಬರೆದ ಬಗ್ಗೆ ಮಾತನಾಡಿದ ಅವರು, ಸಾಹಿತಿಗಳು ಸಿಎಂಗೆ ಬರೆದ ಪತ್ರವನ್ನು ನಾನು ನೋಡಿಲ್ಲ. ಆದರೆ ಸಾಹಿತಿ, ಚಿಂತಕರು ಸಮಾಜದ ಆಗುಹೋಗು ಗ್ರಹಿಸುವವರು. ಸಾಹಿತಿಗಳು ಬರೆದ ಪತ್ರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಈ ಬಗ್ಗೆ ಸಿಎಂ, ಡಿಸಿಎಂ ಜೊತೆ ಸಾಕಷ್ಟು ಚರ್ಚೆ ಕೂಡ ಆಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಇದನ್ನೂ ಓದಿ : ಸರ್ಕಾರಿ ಕೆಲಸ ಕೊಡಿಸೋದಾಗಿ ಲಕ್ಷ-ಲಕ್ಷ ಮೋಸ : CIDಯ ಸೆಕ್ಷನ್ ಸೂಪರಿಂಟೆಂಡ್ ಸೇರಿ ಇಬ್ಬರು ಅರೆಸ್ಟ್..!