Download Our App

Follow us

Home » ಅಪರಾಧ » ಆನೇಕಲ್​​ನಲ್ಲಿ ಮತ್ತೆ 14 ಪಾಕಿಸ್ತಾನ್​ ಪ್ರಜೆಗಳು ಅರೆಸ್ಟ್​​.!

ಆನೇಕಲ್​​ನಲ್ಲಿ ಮತ್ತೆ 14 ಪಾಕಿಸ್ತಾನ್​ ಪ್ರಜೆಗಳು ಅರೆಸ್ಟ್​​.!

ಆನೇಕಲ್ : ಆನೇಕಲ್​​ನಲ್ಲಿ ಮತ್ತೆ ಪಾಕ್​​ ಪ್ರಜೆಗಳನ್ನು ಜಿಗಣಿ ಪೊಲೀಸರು ಅರೆಸ್ಟ್​​​​ ಮಾಡಿದ್ದಾರೆ. ಪ್ರಕರಣದ ಕಿಂಗ್​​ಪಿನ್​​ ಪರ್ವೇಜ್​ ಅರೆಸ್ಟ್​​ ಬೆನ್ನಲ್ಲೇ 14 ಪಾಕಿಸ್ತಾನ್​ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.

14 ಮಂದಿಯ ಬಂಧನದೊಂದಿಗೆ ದೇಶದಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ ಪಾಕಿಸ್ತಾನಿ ಪ್ರಜೆಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಇವರೆಲ್ಲ ದೇಶದ ನಾನಾ ಭಾಗಗಳಲ್ಲಿ ಅಡಗಿ ಕುಳಿತಿದ್ದರು. ಪ್ರಕರಣದ ಕಿಂಗ್​ಪಿನ್ ಪರ್ವೇಜ್​​ನ ಹೆಡೆಮುರಿಕಟ್ಟಿದ ಬೆನ್ನಲ್ಲೇ ಇನ್ನಿತರರು ಪೊಲೀಸ್ ಬಲೆಗೆ ಬಿದ್ದಿದ್ದಾರೆ.

ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆಗಳು ಅರೆಸ್ಟ್ ಆದ ಬೆನ್ನಲ್ಲೇ ಪೊಲೀಸರು ಪಾಕ್ ಪ್ರಜೆಗಳ ಬಂಧನಕ್ಕೆ  ದೇಶದ ನಾನಾ ರಾಜ್ಯಗಳಿಗೆ ತೆರಳಿದ್ದರು. ಚೆನ್ನೈ, ದೆಹಲಿ, ಹೈದರಾಬಾದ್​ಗೆ ತೆರಳಿದ್ದ ಪೊಲೀಸರ ತಂಡ ಮೆಹದಿ ಫೌಂಡೇಷನ್ ಸಂಪರ್ಕದಲ್ಲಿದ್ದ ಒಟ್ಟು 22 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪಾಕ್ ಪ್ರಜೆಗಳು ವಿವಿಧ ರಾಜ್ಯಗಳಲ್ಲಿ ಧರ್ಮ ಪ್ರಚಾರ ನಡೆಸುತ್ತಿದ್ದರು. ಇದೀಗ ಧರ್ಮ ಪ್ರಚಾರ ನಡೆಸುತ್ತಿದ್ದ ಪಾಕ್ ಪ್ರಜೆಗಳನ್ನು Foreigners Registration Office ಅಧಿಕಾರಿಗಳು ಜಿಗಣಿ‌ ಪೊಲೀಸರ ವಶಕ್ಕೆ ‌ನೀಡಿದ್ದಾರೆ.

ಇದನ್ನೂ ಓದಿ : ಮುಡಾ ಕೇಸ್ ತನಿಖೆ ಚುರುಕು – ಸಿಎಂ ಬಾಮೈದಾ, ಜಮೀನು ಮಾಲೀಕನಿಗೆ ಲೋಕಾ ನೋಟಿಸ್ ಜಾರಿ..!

Leave a Comment

DG Ad

RELATED LATEST NEWS

Top Headlines

ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ದುರಂತ.. ಐಸಿಯುನಲ್ಲಿದ್ದ ಓರ್ವ ರೋಗಿ ಸಾವು..!

ಕೋಲ್ಕತ್ತಾ : ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿರುವ ಇಎಸ್‌ಐ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಐಸಿಯುನಲ್ಲಿದ್ದ ಓರ್ವ ರೋಗಿ ಸಾವನ್ನಪ್ಪಿದ್ದಾನೆ

Live Cricket

Add Your Heading Text Here