ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ ಬಂದಿದೆ. ಸಲ್ಲು ನೀವು ಜೀವಂತವಾಗಿ ಇರ್ಬೇಕಾ ಐದು ಕೋಟಿ ಹಣ ಕೊಡಿ ಇಲ್ಲವಾದರೆ ಬಾಬಾ ಸಿದ್ದಿಕಿಗಿಂತ ಭಯಾನಕ ಸಾವು ನಿಮ್ಮದಾಗುತ್ತದೆ ಎಂದು ಮುಂಬೈ ಟ್ರಾಫಿಕ್ ಪೊಲೀಸರಿಗೆ ಬೆದರಿಕೆ ಸಂದೇಶ ಬಂದಿದೆ.
ಬೆದರಿಕೆ ಸಂದೇಶ ಕಳಿಸಿರುವ ಅನಾಮಧೇಯರು, ‘ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದರೆ ಮತ್ತು ಲಾರೆನ್ಸ್ ಬಿಷ್ಣೋಯ್ ಅವರೊಂದಿಗಿನ ದ್ವೇಷವನ್ನು ಕೊನೆಗೊಳಿಸಲು ಬಯಸಿದರೆ, ಕೂಡಲೇ 5 ಕೋಟಿ ರೂಪಾಯಿಗಳನ್ನು ಪಾವತಿಸಬೇಕು. ಇದನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಒಂದು ವೇಳೆ ಲಘುವಾಗಿ ತೆಗೆದುಕೊಂಡು ಹಣ ನೀಡದೇ ಇದ್ದರೆ ಸಲ್ಮಾನ್ ಖಾನ್ ಅವರ ಪರಿಸ್ಥಿತಿ ಬಾಬಾ ಸಿದ್ಧಕಿಗಿಂತಾ ಘೋರವಾಗುತ್ತೆ ಎಂದು ಬರೆಯಲಾಗಿದೆ.
ಸದ್ಯ ಈ ಬೆದರಿಕೆ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು, ಫೋನ್ ನಂಬರ್ ಪತ್ತೆಗೆ ಇಳಿದಿದ್ದಾರೆ. ಅಂದಹಾಗೆ, ಸಲ್ಮಾನ್ ಖಾನ್ ಅವರ ಆತ್ಮೀಯ ಸ್ನೇಹಿತ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ರನ್ನು ಅಕ್ಟೋಬರ್ 12 ರಂದು ಮುಂಬೈನ ಬಾಂದ್ರಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇನ್ನು ಸಿದ್ಧಕಿ ಹತ್ಯೆ ನಂತರ ಸಲ್ಮಾನ್ ಖಾನ್ ಮನೆಗೆ ಬಿಗಿ ಭದ್ರತೆ ನೀಡಲಾಗಿದೆ.
ಇದನ್ನೂ ಓದಿ : ಮೈಸೂರು ಮುಡಾ ಕಚೇರಿ ಮೇಲೆ ED ರೇಡ್ – 20ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಖಲೆ ಪರಿಶೀಲನೆ..!