ಬೆಂಗಳೂರು : ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ರಚಿನ್ ರವೀಂದ್ರ ಭರ್ಜರಿ ಶತಕ ಸಿಡಿಸಿದ್ದಾರೆ. ಬೆಂಗಳೂರಿನ ಹುಡುಗ ತವರಿನಲ್ಲೇ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ದಾರೆ.
ಇದು ರಚಿನ್ ರವೀಂದ್ರ ಅವರ ಟೆಸ್ಟ್ ವೃತ್ತಿಜೀವನದ ಎರಡನೇ ಶತಕವಾಗಿದ್ದು, ನ್ಯೂಜಿಲೆಂಡ್ ಪರ ಇತಿಹಾಸ ಸೃಷ್ಟಿಸುವಲ್ಲಿ ರಚಿನ್ ಯಶಸ್ವಿಯಾಗಿದ್ದಾರೆ. ರಚಿನ್ ಕೇವಲ 123 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದ್ದಾರೆ.
ರಚಿನ್ ರವೀಂದ್ರ ಅವರ ಶತಕದಿಂದ ನ್ಯೂಜಿಲೆಂಡ್ ತಂಡ ಬೆಂಗಳೂರು ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಿದೆ. ಇದಲ್ಲದೆ 8ನೇ ವಿಕೆಟ್ಗೆ ಟಿಮ್ ಸೌಥಿ ಅವರೊಂದಿಗೆ ರಚಿನ್ ಅಜೇಯ ಅರ್ಧಶತಕದ ಜೊತೆಯಾವನ್ನು ನಡೆಸಿದ್ದಾರೆ. ಹಾಗೆಯೇ ಭಾರತದ ನೆಲದಲ್ಲಿ ದಶಕದ ನಂತರ ಶತಕ ಸಿಡಿಸಿದ ನ್ಯೂಜಿಲೆಂಡ್ನ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ರಚಿನ್ ರವೀಂದ್ರ ಬರೆದಿದ್ದಾರೆ.
ಇದನ್ನೂ ಓದಿ : ಮೈಸೂರು ಮುಡಾ ಕಚೇರಿ ಮೇಲೆ ED ರೇಡ್ – 20ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಖಲೆ ಪರಿಶೀಲನೆ..!