Download Our App

Follow us

Home » ಜಿಲ್ಲೆ » ಸಿನಿಮಾ ಸ್ಟೈಲ್​​ನಲ್ಲಿ ನಟೋರಿಯಸ್ ರೌಡಿಯನ್ನ ಹಿಡಿದ ಕಾನ್ಸ್​ಟೇಬಲ್​​ಗೆ ಪ್ರಶಂಸೆಗಳ ಸುರಿಮಳೆ..!

ಸಿನಿಮಾ ಸ್ಟೈಲ್​​ನಲ್ಲಿ ನಟೋರಿಯಸ್ ರೌಡಿಯನ್ನ ಹಿಡಿದ ಕಾನ್ಸ್​ಟೇಬಲ್​​ಗೆ ಪ್ರಶಂಸೆಗಳ ಸುರಿಮಳೆ..!

ಬೆಂಗಳೂರು : ಸಿನಿಮಾ ಸ್ಟೈಲ್​​ನಲ್ಲಿ ನಟೋರಿಯಸ್ ರೌಡಿಯನ್ನ ಹಿಡಿದ ಕಾನ್ಸ್​ಟೇಬಲ್​​ಗೆ ಪ್ರಶಂಸೆಗಳ ಸುರಿಮಳೆಯೇ ಹರಿದು ಬಂದಿದೆ. 10ಕ್ಕೂ ಹೆಚ್ಚು ರಾಬರಿ ಕೇಸ್​ಗಳಲ್ಲಿ ವಾಂಟೆಡ್ ಆಗಿದ್ದ ಮಂಜ ಅಲಿಯಾಸ್ ಹೊಟ್ಟೆ ಮಂಜನ ಪೊಲೀಸ್ ಪೇದೆ ಹಿಡಿದಿದ್ದರು.

ಬೆಂಗಳೂರಿನಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಹೊಟ್ಟೆ ಮಂಜ, ಗುರುತು ಸಿಗದಂತೆ ಫುಲ್ ಹೆಲ್ಮೆಟ್ ಧರಿಸಿ ಓಡಾಡುತ್ತಿದ್ದ. ಈತನ ಮಾಹಿತಿ ಕಲೆ ಹಾಕಿದಾಗ ಸದಾಶಿವನಗರ, ಎಂ.ಎಸ್ ರಾಮಯ್ಯ ರೂಟ್​ನಲ್ಲಿ ಬೈಕ್​ ಸುಳಿವು ಸಿಕ್ಕಿತ್ತು. ಬಳಿಕ ANPR ಕ್ಯಾಮೆರಾ ಮೂಲಕ  ಈತನ ಬೈಕ್ ಚಲನವಲನ ಪತ್ತೆ ಮಾಡಲಾಗಿತ್ತು.

ಬೆಂಗಳೂರಿನ ಟ್ರಾಫಿಕ್​​​​ ಪೊಲೀಸರು ಕೊಟ್ಟ ಕ್ಲೂನಿಂದ ಕೊರಟಗೆರೆ ಕಾನ್ಸ್​ಟೇಬಲ್​​​ ದೊಡ್ಡಲಿಂಗಯ್ಯ ಒಂದು ವಾರದಿಂದ ಕಾದಿದ್ದರು. ಇನ್ನು ಹೊಟ್ಟೆ ಮಂಜ ಬರುತ್ತಿದ್ದಂತೆ ಸದಾಶಿವನಗರ ಠಾಣೆ ಮುಂಭಾಗ ದೊಡ್ಡಲಿಂಗಯ್ಯ ಪ್ರಾಣದ ಹಂಗು ತೊರೆದು ಹೊಟ್ಟೆ ಮಂಜನ ಲಾಕ್ ಮಾಡಿದ್ದಾರೆ. ಇನ್ನು ನಟೋರಿಯಸ್​ ರೌಡಿ ಹಿಡಿದ ಕಾನ್ಸ್​ಟೇಬಲ್​​​ ದೊಡ್ಡಲಿಂಗಯ್ಯಗೆ ಹಾಗೂ ಕೊರಟಗೆರೆ PSI ಚೇತನ್​​ಗೆ ತುಮಕೂರು SP ಅಶೋಕ್ ಪ್ರಶಂಸಾ ಪತ್ರ ನೀಡಿದ್ದಾರೆ.

ಇದನ್ನೂ ಓದಿ : ಅದ್ದೂರಿಯಾಗಿ ಸೆಟ್ಟೇರಿದ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ..!

Leave a Comment

DG Ad

RELATED LATEST NEWS

Top Headlines

ಬೇನಾಮಿ, ನಕಲಿ ವ್ಯಕ್ತಿಗಳ ಹೆಸರಲ್ಲಿ ಮುಡಾ ಸೈಟ್ ಹಂಚಿಕೆ.. 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?

ಬೆಂಗಳೂರು : ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನ ಜಪ್ತಿ ಮಾಡಿದೆ. ಮೈಸೂರು ಲೋಕಾಯುಕ್ತ ದಾಖಲಿಸಿದ FIR

Live Cricket

Add Your Heading Text Here

00:59