Download Our App

Follow us

Home » ಅಪರಾಧ » ಬೆಂಗಳೂರಲ್ಲಿ ಮನೆಗಳ್ಳತನ ಮಾಡುತ್ತಿದ್ದ ಹೈದರಾಬಾದ್​ನ ನಟೋರಿಯಸ್ ಗ್ಯಾಂಗ್ ಅರೆಸ್ಟ್..!

ಬೆಂಗಳೂರಲ್ಲಿ ಮನೆಗಳ್ಳತನ ಮಾಡುತ್ತಿದ್ದ ಹೈದರಾಬಾದ್​ನ ನಟೋರಿಯಸ್ ಗ್ಯಾಂಗ್ ಅರೆಸ್ಟ್..!

ಬೆಂಗಳೂರು : ಬೆಂಗಳೂರಿನಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಕಳ್ಳತನ ಮಾಡ್ತಿದ್ದ ಹೈದರಾಬಾದ್ ನ ನಟೋರಿಯಸ್ ಗ್ಯಾಂಗ್ ಒಂದನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. 150ಕ್ಕೂ ಹೆಚ್ಚು ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಈ ಗ್ಯಾಂಗ್ ನ್ನು ಮಡಿವಾಳ ಪೊಲೀಸರು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿದ್ದಾರೆ.

ಹೈದರಾಬಾದ್ ಮೂಲದ ಆರೋಪಿಗಳು ಮಡಿವಾಳ ಪೊಲೀಸರು ಹಾಕಿದ ಬಲೆಗೆ ಬಿದ್ದಿದ್ದು, ಹವೇಜ್, ಅಭುತಾಲಿಕ್, ಹೈಮದ್ ನ ಬಂಧಿತ ಆರೋಪಿಗಳಾಗಿದ್ದಾರೆ. ಜನವರಿ 6 ರಂದು‌ ಮಡಿವಾಳ ಠಾಣಾ ವ್ಯಾಪ್ತಿಯ ಮಾರುತಿನಗರದ 7ನೇ ಕ್ರಾಸ್ ನ ಮನೆಯೊಂದರ ಡೋರ್ ಅನ್ನು ರಾಡ್​ನಿಂದ ಮುರಿದು ಮನೆಕಳವು ಮಾಡಿ ಖದೀಮರು ಎಸ್ಕೇಪ್ ಆಗಿದ್ದರು. 3 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಹೈದ್ರಾಬಾದ್ ಗ್ಯಾಂಗ್ ನ ಹಿಸ್ಟರಿಯೇ ಬಲು ರೋಚಕ- 2016 ರಿಂದಲೂ ಫುಲ್ ಆಕ್ಟೀವ್ ಆಗಿರೋ ಹವೇಜ್ ಮೊದಲಿಗೆ ಒಂಟಿಯಾಗಿ ಕಳ್ಳತನ‌ ಮಾಡ್ತಾ ಇದ್ದ. ಹಲವು ಬಾರಿ ಜೈಲಿಗೆ ಹೋಗಿ ಬಂದ್ರೂ ಕಳ್ಳತನ‌ವನ್ನ ಮಾತ್ರ ಈತ ಬಿಟ್ಟಿರಲಿಲ್ಲ. ಪದೇ ಪದೇ ಹೈದ್ರಾಬಾದ್ ನಲ್ಲಿ ಅರೆಸ್ಟ್ ಆಗ್ತಾ ಇದ್ದ ಬಳಿಕ, ಹುಡುಗರ ಮೂಲಕ ಕಳ್ಳತನ ಮಾಡಿಸಲು‌ ಮುಂದಾಗಿದ್ದ. ಅದ್ರಂತೆ ಅಭುತಾಲಿಕ್ ಹಾಗೂ ಹೈಮದ್ ನ ತನ್ನ ಗುಂಪಿಗೆ ಸೇರಿಸಿಕೊಂಡಿದ್ದ. ಈ ಗ್ಯಾಂಗ್ ಹೈದ್ರಾಬಾದ್ ಆದ್ರೆ ಸಿಕ್ಕಿಬೀಳ್ತೀವಿ ಅಂತ ಬೆಂಗಳೂರು ನಗರಕ್ಕೆ ಎಂಟ್ರಿ ಕೊಟ್ಟಿತ್ತು.

ಇನ್ನು ಬಂಧಿತ ಆರೋಪಿಗಳ ಮೇಲೆ ನೂರಾರು ಕೇಸ್​ಗಳು ದಾಖಲಾಗಿರುವುದು ಪತ್ತೆಯಾಗಿದೆ. MBA ಪದವೀಧರನಾಗಿರುವ ಹೈಮದ್ ಮೇಲೆ 150 ಮನೆಕಳವು ಕೇಸ್​ಗಳಿವೆ. ಅಭುತಾಲಿಕ್ ಮೇಲೆ 50 ಕ್ಕೂ ಹೆಚ್ಚು ಮನೆಕಳವು ಕೇಸ್​ಗಳಿವೆ. ಈ ಗ್ಯಾಂಗ್ ಮನೆಗಳನ್ನು ರೌಂಡಪ್ ಮಾಡಿ ಹಾಡಹಗಲೇ ಮನೆ ಡೋರ್ ಲಾಕ್ ಒಡೆದು ಕಳವು ಮಾಡುತ್ತಿದ್ದರು. ಸದ್ಯ ಈ ಮೂವರು ಆರೋಪಿಗಳನ್ನು ಮಡಿವಾಳ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ರಾಹುಲ್​ ಗಾಂಧಿ ಬೆಂಗಾವಲು ವಾಹನದ ಮೇಲೆ ಕಲ್ಲೆಸೆದ ಕಿಡಿಗೇಡಿಗಳು..

Leave a Comment

DG Ad

RELATED LATEST NEWS

Top Headlines

ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ‌ ಚಿನ್ನದ ಬಿಸ್ಕೆಟ್ SIT ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ‌ ಚಿನ್ನದ

Live Cricket

Add Your Heading Text Here