Download Our App

Follow us

Home » ರಾಷ್ಟ್ರೀಯ » ರಾಹುಲ್​ ಗಾಂಧಿ ಬೆಂಗಾವಲು ವಾಹನದ ಮೇಲೆ ಕಲ್ಲೆಸೆದ ಕಿಡಿಗೇಡಿಗಳು..!

ರಾಹುಲ್​ ಗಾಂಧಿ ಬೆಂಗಾವಲು ವಾಹನದ ಮೇಲೆ ಕಲ್ಲೆಸೆದ ಕಿಡಿಗೇಡಿಗಳು..!

ಪಶ್ಚಿಮ ಬಂಗಾಳ : ಬಿಹಾರ-ಪಶ್ಚಿಮ ಬಂಗಾಳ ಗಡಿಯಲ್ಲಿ ಅಪರಿಚಿತ ದುಷ್ಕರ್ಮಿಗಳು ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.

ರಾಹುಲ್​ ಗಾಂಧಿ ನ್ಯಾಯ ಯಾತ್ರೆ ವೇಳೆ ಈ ಘಟನೆ ನಡೆದಿದ್ದು, ರಾಹುಲ್​ ಬೆಂಗಾವಲಿನ ವಾಹನದ ಮೇಲೆ ಕಿಡಿಗೇಡಿಗಳು ಕಲ್ಲೆಸೆದು ಪರಾರಿಯಾಗಿದ್ದಾರೆ. ರಾಹುಲ್​​​ ಗಾಂಧಿ ತೆರಳುತ್ತಿದ್ದ ಕಾರಿಗೆ ಬೆಂಗಾವಲಿದ್ದ ಕಾರಿನ ಹಿಂಭಾಗದ ಗ್ಲಾಸ್​ ಸಂಪೂರ್ಣ ಪೀಸ್​, ಪೀಸ್​ ಆಗಿ ಹೋಗಿದೆ. ಹಿಂಬದಿ ಗ್ಲಾಸ್​ಗೆ ಅಳವಡಿಸಿದ್ದ ಪೆನ್ಸ್​ ಮುರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಹುಲ್​​ ಗಾಂಧಿ ಮುಂಬದಿಯ ಕಾರಿನ ಟಾಪ್​​ನಲ್ಲಿ ಕುಳಿತಿದ್ದರು. ಪಶ್ಚಿಮ ಬಂಗಾಳಕ್ಕೆ ನ್ಯಾಯ ಯಾತ್ರೆ ಎಂಟ್ರಿಗೂ ಮುನ್ನವೇ ಈ ದಾಳಿ ನಡೆದಿದೆ. ಬಂಗಾಳಕ್ಕೆ ರ್ಯಾಲಿ ಎಂಟ್ರಿ ಆಗದಂತೆ TMC ಕುತಂತ್ರ ಸೃಸ್ಟಿಸಿದ್ದಾರೆ ಎಂದು ಕಾಂಗ್ರೆಸ್​ ನಾಯಕ ಅಧೀರ್​ ರಂಜನ್​​​​ ಚೌಧರಿ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ರಾಯಚೂರು : ಟಿಪ್ಪು ಸುಲ್ತಾನ್ ನಾಮಫಲಕಕ್ಕೆ ಕಿಡಿಗೇಡಿಗಳಿಂದ ಚಪ್ಪಲಿ ಹಾರ – ಸಿರವಾರ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಉಡುಪಿ : ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆ ಸಾ*ವು..!

ಉಡುಪಿ : 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶವಿದೆ. ಹಾಗಾಗಿ ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಪಿ.ಯಶೋಧಾ ನಾರಾಯಣ ಉಪಾಧ್ಯ

Live Cricket

Add Your Heading Text Here