Download Our App

Follow us

Home » ಅಪರಾಧ » ಕೊನೆಗೂ ರಿಟ್ರೀವ್​​ ಆಗಲೇ ಇಲ್ಲ ದರ್ಶನ್ ಫೋನ್​​ – ಹೈದರಾಬಾದ್ CFSLನಿಂದ ಮೊಬೈಲ್ ರಿಟರ್ನ್..!

ಕೊನೆಗೂ ರಿಟ್ರೀವ್​​ ಆಗಲೇ ಇಲ್ಲ ದರ್ಶನ್ ಫೋನ್​​ – ಹೈದರಾಬಾದ್ CFSLನಿಂದ ಮೊಬೈಲ್ ರಿಟರ್ನ್..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ತನಿಖೆ ನಡೆಸಿದ ಪೊಲೀಸರು 17 ಆರೋಪಿಗಳ ವಿರುದ್ಧ 3991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗಿದ್ದು, ಇಂಚಿಂಚು ಮಾಹಿತಿಯನ್ನು ಚಾರ್ಜ್‌ಶೀಟ್‌ನಲ್ಲಿ ಪೋಲಿಸರು ದಾಖಲಿಸಿದ್ದಾರೆ.

ರೇಣುಕಾಸ್ವಾಮಿಯನ್ನ ಭೀಕರವಾಗಿ ಥಳಿಸಿ ಹತ್ಯೆ ಮಾಡುವ ವೇಳೆ ಮೊಬೈಲ್‌ನಲ್ಲಿ ಫೋಟೋ ತೆಗೆದು ವಿಕೃತವಾಗಿ ಖುಷಿ ಅನುಭವಿಸಿದ್ದ ದರ್ಶನ್‌ ಅಂಡ್ ಗ್ಯಾಂಗ್‌ ಸಾಕ್ಷಿ ಸಿಗದಂತೆ ಎಲ್ಲವನ್ನೂ ಡಿಲೀಟ್ ಮಾಡಿತ್ತು. ಈ​ ಸಂಬಂಧ​ ಮೊಬೈಲ್ ವಶಕ್ಕೆ ಪಡೆದಿದ್ದ ಪೊಲೀಸರು ಡಿಲೀಟ್ ಆಗಿದ್ದ ಕೆಲ ಪೋಟೋಗಳನ್ನು ರಿಟ್ರೀವ್ ಮಾಡಿದೆ.

ಆದ್ರೆ ಕೊನೆಗೂ ದರ್ಶನ್ ಮೊಬೈಲ್​​​ ರಿಟ್ರೀವ್​​ ಆಗಲೇ ಇಲ್ಲ. ಹೌದು, ನಟ ದರ್ಶನ್ ಹಾಗೂ ಪವಿತ್ರಾಗೌಡ ಮೊಬೈಲ್ ಹೈದರಾಬಾದ್ CFSLನಿಂದ ವಾಪಸ್ ಆಗಿದೆ. ರಿಟ್ರೀವ್ ಆಗದೇ ದರ್ಶನ್​​, ಪವಿತ್ರಾಗೌಡ ಐಫೋನ್​ಗಳು ಒಂದೂವರೆ ತಿಂಗಳಿನಿಂದ ಹೈದರಾಬಾದ್ CSFLನಲ್ಲಿದ್ದವು. FSL ತಜ್ಞರು ಎರಡು ಐಫೋನ್​ಗಳ ರಿಟ್ರೀವ್​​ಗೆ ಹರಸಾಹಸ ಪಟ್ಟಿದ್ದರು. ಕೊನೆಗೆ ರಿಟ್ರೀವ್ ಆಗದ ಕಾರಣ ತಜ್ಞರು ಮೊಬೈಲ್​ನ್ನು​​​​​​ ವಾಪಸ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆ ಎರಡು ಐಫೋನ್​ಗಳನ್ನು ಗುಜರಾತ್​​​ನ FSL ಯೂನಿವರ್ಸಿಟಿಗೆ ಕಳುಹಿಸಲು ಪೊಲೀಸರು ಚಿಂತನೆ ನಡೆಸಿದ್ದು, FSL ವಿವಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಎಕ್ವಿಪ್​​ಮೆಂಟ್ ಇರುತ್ತವೆ. ಹಾಗಾಗಿ ಅಲ್ಲಿ ತಜ್ಞ FSL ತಂಡದಿಂದ ಎರಡೂ ಐಫೋನ್​ ರಿಟ್ರೀವ್ ಮಾಡಲು​​​ ಚಿಂತನೆ ನಡೆಸಲಾಗಿದೆ. ಶೀಘ್ರದಲ್ಲೇ ಗುಜರಾತ್ FSL ವಿಶ್ವ ವಿದ್ಯಾಲಯಕ್ಕೆ ಐಫೋನ್ ರವಾನೆ ಸಾಧ್ಯತೆಯಿದೆ.

ಇದನ್ನೂ ಓದಿ : ರಾಯಚೂರು : ಹೋಮ್​ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿನಿಗೆ ಮೈ ಚರ್ಮ ಕಿತ್ತು ಬರುವಂತೆ ಮನಸೋ ಇಚ್ಛೆ ಥಳಿಸಿದ ಶಿಕ್ಷಕಿ..!

 

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here