ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ತನಿಖೆ ನಡೆಸಿದ ಪೊಲೀಸರು 17 ಆರೋಪಿಗಳ ವಿರುದ್ಧ 3991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗಿದ್ದು, ಇಂಚಿಂಚು ಮಾಹಿತಿಯನ್ನು ಚಾರ್ಜ್‌ಶೀಟ್‌ನಲ್ಲಿ ಪೋಲಿಸರು ದಾಖಲಿಸಿದ್ದಾರೆ.
ರೇಣುಕಾಸ್ವಾಮಿಯನ್ನ ಭೀಕರವಾಗಿ ಥಳಿಸಿ ಹತ್ಯೆ ಮಾಡುವ ವೇಳೆ ಮೊಬೈಲ್‌ನಲ್ಲಿ ಫೋಟೋ ತೆಗೆದು ವಿಕೃತವಾಗಿ ಖುಷಿ ಅನುಭವಿಸಿದ್ದ ದರ್ಶನ್ ಅಂಡ್ ಗ್ಯಾಂಗ್ ಸಾಕ್ಷಿ ಸಿಗದಂತೆ ಎಲ್ಲವನ್ನೂ ಡಿಲೀಟ್ ಮಾಡಿತ್ತು. ಈ ಸಂಬಂಧ ಮೊಬೈಲ್ ವಶಕ್ಕೆ ಪಡೆದಿದ್ದ ಪೊಲೀಸರು ಡಿಲೀಟ್ ಆಗಿದ್ದ ಕೆಲ ಪೋಟೋಗಳನ್ನು ರಿಟ್ರೀವ್ ಮಾಡಿದೆ.
ಆದ್ರೆ ಕೊನೆಗೂ ದರ್ಶನ್ ಮೊಬೈಲ್ ರಿಟ್ರೀವ್ ಆಗಲೇ ಇಲ್ಲ. ಹೌದು, ನಟ ದರ್ಶನ್ ಹಾಗೂ ಪವಿತ್ರಾಗೌಡ ಮೊಬೈಲ್ ಹೈದರಾಬಾದ್ CFSLನಿಂದ ವಾಪಸ್ ಆಗಿದೆ. ರಿಟ್ರೀವ್ ಆಗದೇ ದರ್ಶನ್, ಪವಿತ್ರಾಗೌಡ ಐಫೋನ್ಗಳು ಒಂದೂವರೆ ತಿಂಗಳಿನಿಂದ ಹೈದರಾಬಾದ್ CSFLನಲ್ಲಿದ್ದವು. FSL ತಜ್ಞರು ಎರಡು ಐಫೋನ್ಗಳ ರಿಟ್ರೀವ್ಗೆ ಹರಸಾಹಸ ಪಟ್ಟಿದ್ದರು. ಕೊನೆಗೆ ರಿಟ್ರೀವ್ ಆಗದ ಕಾರಣ ತಜ್ಞರು ಮೊಬೈಲ್ನ್ನು ವಾಪಸ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆ ಎರಡು ಐಫೋನ್ಗಳನ್ನು ಗುಜರಾತ್ನ FSL ಯೂನಿವರ್ಸಿಟಿಗೆ ಕಳುಹಿಸಲು ಪೊಲೀಸರು ಚಿಂತನೆ ನಡೆಸಿದ್ದು, FSL ವಿವಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಎಕ್ವಿಪ್ಮೆಂಟ್ ಇರುತ್ತವೆ. ಹಾಗಾಗಿ ಅಲ್ಲಿ ತಜ್ಞ FSL ತಂಡದಿಂದ ಎರಡೂ ಐಫೋನ್ ರಿಟ್ರೀವ್ ಮಾಡಲು ಚಿಂತನೆ ನಡೆಸಲಾಗಿದೆ. ಶೀಘ್ರದಲ್ಲೇ ಗುಜರಾತ್ FSL ವಿಶ್ವ ವಿದ್ಯಾಲಯಕ್ಕೆ ಐಫೋನ್ ರವಾನೆ ಸಾಧ್ಯತೆಯಿದೆ.
ಇದನ್ನೂ ಓದಿ : ರಾಯಚೂರು : ಹೋಮ್ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿನಿಗೆ ಮೈ ಚರ್ಮ ಕಿತ್ತು ಬರುವಂತೆ ಮನಸೋ ಇಚ್ಛೆ ಥಳಿಸಿದ ಶಿಕ್ಷಕಿ..!