ರಾಯಚೂರು : ಹೋಮ್ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿನಿ ಮೇಲೆ ಶಿಕ್ಷಕಿ ಕ್ರೌರ್ಯ ಮೆರೆದ ಅಮಾನವೀಯ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಶರಣಬಸವೇಶ್ವರ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ.
ಶರಣಬಸವೇಶ್ವರ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಅಕ್ಷತಾ ಮೇಲೆ ಪ್ರಿಯಾ ಎಂಬ ಶಿಕ್ಷಕಿ ಮೈ ಚರ್ಮ ಕಿತ್ತು ಬರುವಂತೆ ಮನಸೋ ಇಚ್ಛೆ ಥಳಿಸಿದ್ದಾರೆ. ಶಿಕ್ಷಕಿಯ ಮೃಗೀಯ ವರ್ತನೆ ಕಂಡು ಪೋಷಕರು ಆಕ್ರೋಶ ಹೊರಹಾಕಿದ್ದು, ಶಿಕ್ಷಕಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಒಡೆತನಕ್ಕೆ ಸೇರಿದ ಶಾಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಶಿಕ್ಷಣ ಅಧಿಕಾರಿಗಳು ಈ ಶಾಲೆಯ ವಿರುದ್ಧ ದೂರ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ತಜ್ಞರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕೈಮುಗಿದು ಬೇಡಿಕೊಳ್ತಿರುವ ರೇಣುಕಾಸ್ವಾಮಿ – ದರ್ಶನ್ ಗ್ಯಾಂಗ್ನ ಕ್ರೂರ ಕೃತ್ಯದ ಫೋಟೋ ವೈರಲ್..!
Post Views: 73