ಹಾವೇರಿ : ಲೋಕಸಭೆ ಚುನಾವಣೆಯ ಕಾವು ಈಗ ರಾಜ್ಯದ ‘ಉತ್ತರ’ ಭಾಗಕ್ಕೆ ಶಿಫ್ಟ್ ಆಗಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯು ಬೃಹತ್ ಸಮಾವೇಶಗಳ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ತಂತ್ರಗಾರಿಕೆ ರೂಪಿಸುತ್ತಿದೆ. ಒಂದೆರಡು ದಿನಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಅಭ್ಯರ್ಥಿಗಳ ಪರ ಮತಯಾಚನೆ ಮಾಡಲು ಉತ್ತರಕ್ಕೆ ಭೇಟಿ ನೀಡಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿದ್ದರು.
ಇದೀಗ ಮೋದಿ ಭೇಟಿ ಬೆನ್ನಲ್ಲೇ ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಕ್ಕೆ ಎಂಟ್ರಿಕೊಟ್ಟು, ಕೇಸರಿ ಅಭ್ಯರ್ಥಿಗಳಾದ ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ ಪರ ಮತಶಿಕಾರಿ ಮಾಡಲಿದ್ದಾರೆ.
ಮೊದಲಿಗೆ ಹಾವೇರಿ ಕ್ಷೇತ್ರದಲ್ಲಿ ಅಮಿತ್ ಶಾ ರೋಡ್ ಶೋ ನಡೆಸಲಿಸಿ, ರಾಣೆ ಬೆನ್ನೂರಿನಲ್ಲಿ ಹಾವೇರಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡಲಿದ್ದಾರೆ. ಹಾವೇರಿ ಕ್ಷೇತ್ರದ ನಂತರ ಧಾರವಾಡಕ್ಕೂ ಅಮಿತ್ ಶಾ ಭೇಟಿ ನೀಡಿ ಧಾರವಾಡ ಕ್ಷೇತ್ರದ ವಿವಿಧೆಡೆ ಪ್ರಹ್ಲಾದ್ ಜೋಶಿ ಪರ ಮತಯಾಚನೆ ಮಾಡಲಿದ್ದಾರೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ – SIT ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ರಾ ಸಂತ್ರಸ್ತೆಯರು?