ಬೆಂಗಳೂರು : ಈ ಬಾರಿಯ ನೀಟ್ ಪರೀಕ್ಷೆ ಹಾಗೂ ರಿಸಲ್ಟ್ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ನೀಟ್ ಪರೀಕ್ಷೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ 67 ಜನ ವಿದ್ಯಾರ್ಥಿಗಳು 720ಕ್ಕೆ 720 ಅಂಕ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ತೀವ್ರ ಅನುಮಾನ ವ್ಯಕ್ತಪಡಿಸಿದ್ದು, ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ದೇಶಾದ್ಯಂತ ಪ್ರೊಟೆಸ್ಟ್ ನಡೆಸುತ್ತಿದ್ದಾರೆ.
ಸದ್ಯ ನೀಟ್ ಪರೀಕ್ಷೆಯ ರಿಸಲ್ಟ್ನಲ್ಲಿ ದಿನದಿನಕ್ಕೂ ಅಕ್ರಮದ ಬಣ್ಣ ಬಯಲಾಗುತ್ತಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಗುಜರಾತ್ ವಿದ್ಯಾರ್ಥಿನಿಯ ರಿಸಲ್ಟ್ ಮೇಲೆ ತೀವ್ರ ಅನುಮಾನ ವ್ಯಕ್ತವಾಗಿದೆ. PUCಯಲ್ಲಿ ಫೇಲ್ ಆದ ವಿದ್ಯಾರ್ಥಿನಿಗೆ NEETನಲ್ಲಿ 705 ಅಂಕ ಬಂದಿದೆ. ಗುಜರಾತ್ ವಿದ್ಯಾರ್ಥಿನಿ 720ಕ್ಕೆ 705 ಅಂಕ ಪಡೆದಿದ್ದಾಳೆ. PUC ಫೇಲ್ ಆದ ವಿದ್ಯಾರ್ಥಿನಿ NEETನಲ್ಲಿ ರ್ಯಾಂಕ್ ಬಂದಿದ್ದೇಗೆ? ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೆಚ್ಚುತ್ತಿದೆ.
ಈ ಹಿನ್ನೆಲೆ NEET ಪರೀಕ್ಷೆ, ರಿಸಲ್ಟ್ ಅಕ್ರಮ ಖಂಡಿಸಿ ಇಂದು ABVP ಕಾರ್ಯಕರ್ತರು ಭಾರೀ ಪ್ರತಿಭಟನೆಗೆ ಮುಂದಾಗಿದ್ದಾರೆ. ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
NEET ಮರು ಪರೀಕ್ಷೆ ನಡೆಸುವಂತೆ ಆಗ್ರಹಿಸಿ ಪ್ರೊಟೆಸ್ಟ್ ನಡೆಸಲಾಗುತ್ತಿದೆ.
- ಅನುಮಾನಗಳೇನು?
– 67 ಮಂದಿಗೆ ಫಸ್ಟ್ ರ್ಯಾಂಕ್ ಬಂದಿರೋದು
– 67 ಮಂದಿ 720ಕ್ಕೆ 720 ಅಂಕ ಪಡೆದಿದ್ದೇಗೆ ?
– 67 ವಿದ್ಯಾರ್ಥಿಗಳು ಶೇಕಡಾ 99.99 (AIR) ಪಡೆಯಲು ಸಾಧ್ಯವೇ ?
– ಒಂದೇ ಸೆಂಟರ್ನ 8 ಮಂದಿ ಟಾಪರ್ಸ್ ಆಗಿದ್ದೇಗೆ ?
– 8 ಮಂದಿಯ ರೋಲ್ ನಂಬರ್ ಒಂದೇ ಕ್ರಮಾಂಕದಲ್ಲಿದೆ
– 2307010168, 333, 403, 460, 178, 037, 186, 198 ರೋಲ್ನಂಬರ್
– ಒಂದೇ ಎಕ್ಸಾಂ ಸೆಂಟರ್ನ 8 ಮಂದಿ ಮೊದಲ ಸ್ಥಾನ ಪಡೆದಿರೋದು
– ಪ್ರತಿ ಪ್ರಶ್ನೆಗೆ ಸರಿ ಉತ್ತರ ಬರೆದ್ರೆ 720 ಅಂಕ ಬರುತ್ತೆ
– ಒಂದು ವೇಳೆ ತಪ್ಪು ಉತ್ತರ ಬರೆದ್ರೆ 716 ಅಂಕ ಬರುತ್ತೆ
– ಏಕೆಂದರೆ ಪ್ರತಿ ತಪ್ಪು ಉತ್ತರಕ್ಕೆ 4 ಅಂಕಗಳು ಕಡಿತ ಆಗುತ್ತೆ
– ತಪ್ಪು ಉತ್ತರಕ್ಕಾಗಿ ನೆಗೆಟೀವ್ ಮಾರ್ಕ್ಸ್ 715 ಬರಬೇಕು
– 719, 718, 717, 714, 709 ಅಂಕ ಸಿಗಲು ಸಾಧ್ಯವೇ ಇಲ್ಲ
– ಸಮಯದ ನಷ್ಟ ಎಂಬ ನೆಪದಲ್ಲಿ ಕೆಲವರಿಗೆ ಗ್ರೇಸ್ ಮಾರ್ಕ್ಸ್ ನೀಡಿದ್ದಾರೆ
– ಬಿಹಾರದಲ್ಲಿ ನೀಟ್ ಯುಜಿ ಪೇಪರ್ ಲೀಕ್ ಸಂಬಂಧ 10 ಮಂದಿ ಅರೆಸ್ಟ್
– ರಾಜಸ್ಥಾನದಲ್ಲಿ ವಿಭಿನ್ನ ಪ್ರಶ್ನೆಪತ್ರಿಕೆ ಕಾರಣ ಅಭ್ಯರ್ಥಿಗಳಿಗೆ ಮರು ಪರೀಕ್ಷೆ
– ಗುಜರಾತ್ನಲ್ಲಿ, ಒಡಿಶಾದಲ್ಲಿ ಪ್ರಶ್ನೆಪತ್ರಿಕೆ ಪರಿಹರಿಸಿ ಹಣ ಪಡೆದ ಶಿಕ್ಷಕರು
– ತಲಾ ಒಬ್ಬ ಅಭ್ಯರ್ಥಿಯಿಂದ 10 ಲಕ್ಷ ಪಡೆದಿರುವ ಆರೋಪ
– ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ವಿಡಿಯೋ ಒಂದು ಹರಿದಾಡಿತ್ತು
ಇದನ್ನೂ ಓದಿ : ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಲ್ಲಿ ಸಿನಿಮೀಯ ರೀತಿ ಗ್ಯಾಂಗ್ ವಾರ್ : FIR ದಾಖಲು..!