Download Our App

Follow us

Home » ಅಪರಾಧ » ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಲ್ಲಿ ಸಿನಿಮೀಯ ರೀತಿ ಗ್ಯಾಂಗ್ ವಾರ್ : FIR ದಾಖಲು..!

ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಲ್ಲಿ ಸಿನಿಮೀಯ ರೀತಿ ಗ್ಯಾಂಗ್ ವಾರ್ : FIR ದಾಖಲು..!

ಬೆಂಗಳೂರು : ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಲ್ಲಿ ಸಿನಿಮೀಯ ರೀತಿ ಗ್ಯಾಂಗ್ ವಾರ್ ನಡೆದಿದೆ. ನಟೋರಿಯಸ್ ರೌಡಿ ಕುಳ್ಳು ರಿಜ್ವಾನ್ ಗ್ಯಾಂಗ್​​ನಿಂದ ಇಟ್ಟಮಡು ಸಾಗರ್ ಅಂಡ್ ಟೀಂ ಮೇಲೆ ಹಲ್ಲೆ ನಡೆದಿದೆ.

ಕಳೆದ ಕೆಲ ತಿಂಗಳ ಹಿಂದೆ ಬುಕ್ಕಿ ಸಂತೋಷ್​​ನ್ನು ಸಾಗರ್ ಅಂಡ್ ಟೀಂ ಕಿಡ್ನ್ಯಾಪ್ ಮಾಡಿ, ಮಾರಕಾಸ್ತ್ರದಿಂದ ಹಲ್ಲೆ ಮಾಡಿತ್ತು. ಕುಳ್ಳು ರಿಜ್ವಾನ್​​ಗೆ ಮಾತ್ರ ಹಫ್ತಾ ಕೊಡ್ತೀಯ ನಮಗೆ ಕೊಡ್ತಿಲ್ಲ ಅಂತಾ ಸಂತೋಷ್​​​ನ್ನು ಕಿಡ್ನ್ಯಾಪ್ ಮಾಡಿದ್ದರು. ಇದೇ ವಿಚಾರದಲ್ಲಿ ಸಾಗರ್ ಅಂಡ್ ಟೀಂ ಜೈಲು ಸೇರಿತ್ತು, ಈ ಗ್ಯಾಂಗ್ ಕ್ವಾರೆಂಟೈನ್ ಬ್ಯಾರಕ್​​ನಿಂದ ಜೈಲು ಸೇರ್ತಿದ್ದಂತೆ ರಿಜ್ವಾನ್ ಹುಡುಗರಿಂದ ಅಟ್ಯಾಕ್ ಆಗಿದೆ.

ಕುಳ್ಳು ಶಿಷ್ಯರಾದ ವಿಶ್ವನಾಥ್, ಜಾಫರ್, ಟಿಪ್ಪು, ಮುನಿರಾಜು, ವಿಶಾಲ್ ಗೌಡ ಸೆಂದಿಲ್ ಕುಮಾರ್ ಸೇರಿದಂತೆ 9 ಜನರಿಂದ ಹಲ್ಲೆ ನಡೆದಿದ್ದು, ಜೈಲಿನ ಮೂರನೇ ಬ್ಯಾರಕ್ ಮುಂದೆ ತೇಜಸ್, ರಾಕೇಶ್, ಗುರುಪ್ರಸಾದ್ ಸೇರಿದಂತೆ 8 ಜನರ ಮೇಲೆ ಹಲ್ಲೆ ನಡೆದಿದೆ. ಕುಳ್ಳು ಶಿಷ್ಯರು ಜೈಲು ಆವರಣದಲ್ಲಿದ್ದ ಕಲ್ಲು ಇಟ್ಟಿಗೆಯಿಂದ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ. ಇಟ್ಟಮಡು ಸಾಗರ್ ಸೇರಿದಂತೆ ಹಲ್ಲೆಗೊಳಗಾದವರಿಗೆ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದ್ದು, ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ FIR ದಾಖಲಾಗಿದೆ.

ಇದನ್ನೂ ಓದಿ : ಗಿಡ ಬೆಳೆಸೋ ಭರದಲ್ಲಿ ಬಿಬಿಎಂಪಿ ಎಡವಟ್ಟು – ಬೆಂಗಳೂರಿಗೆ ಕಂಟಕವಾದ ದುಬೈ ಗಿಡ..!

Leave a Comment

RELATED LATEST NEWS

Top Headlines

ರೇಣುಕಾಸ್ವಾಮಿ ಕೇಸ್​ನಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿ – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹ..!

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಜಯೇಂದ್ರ

Live Cricket

Add Your Heading Text Here