ಬೆಂಗಳೂರು :ಹಳೆಯ ಕೇಸ್ ಸಂಬಂಧ ಅರೆಸ್ಟ್ ಆಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಕನ್ನಡ ನಾಮಫಲಕ ಕಡ್ಡಾಯಕ್ಕೆ ಒತ್ತಾಯಿಸಿ ಪ್ರತಿಭಟನೆ ತೀವ್ರ ಸ್ವರೂಪಗೊಂಡು, ಹಲವು ಹೋಟೆಲ್, ಅಂಗಡಿಗಳ ನಾಮಫಲಕ ಧ್ವಂಸಗೊಳಿಸಿದ ಪ್ರಕರಣದಲ್ಲಿ ಜೈಲು ಸೇರಿದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಎರಡು ದಿನಗಳ ಹಿಂದಷ್ಟೇ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದರು.
ನಂತರ 2017 ರ ಆಸ್ತಿಪಾಸ್ತಿ ಹಾನಿ ಪ್ರಕರಣ ಸಂಬಂಧ ಪೊಲೀಸರು ಮತ್ತೆ ಅವರನ್ನು ವಶಕ್ಕೆ ಪಡೆದಿದ್ದರು. ನಿನ್ನೆ ನಾರಾಯಣ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 30 ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಅರ್ಜಿ ಆದೇಶವನ್ನು ಇಂದಿಗೆ ಕಾಯ್ದಿರಿಸಿ ಆದೇಶ ಹೊರಡಿಸಿತ್ತು. ಇದೀಗ ಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಜೈಲಿನಿಂದ ರಿಲೀಸ್ ಆದ ನಂತರ ಕರವೇ ನಾರಾಯಣಗೌಡರು ಪ್ರತಿಕ್ರಿಯಿಸಿ, ನನ್ನ ದೇಹದ ಕೊನೆ ಹನಿ ಇರೋವರೆಗೂ ಕನ್ನಡಕ್ಕಾಗಿ ಹೋರಾಡ್ತೀನಿ, ಕನ್ನಡಕ್ಕಾಗಿ ನನ್ನ ಪ್ರಾಣ ಸದಾ ಮುಡಿಪಾಗಿರುತ್ತೆ. ಕಾನೂನು ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.
ನಾವು, ನಮ್ಮ ಕಾರ್ಯಕರ್ತರು 15 ದಿನ ಜೈಲು ಅನುಭವಿಸಿದ್ದೇವೆ. ಇನ್ನೂ ಕೆಲವು ಕೇಸ್ಗಳಿವೆ, ಕಾನೂನು ಬದ್ದವಾಗಿ ಹೋರಾಡ್ತೀವಿ,
ಆರೋಗ್ಯ ಸಮಸ್ಯೆ ಇರೋದ್ರಿಂದ ವೈದ್ಯರ ಬಳಿ ಹೋಗಿದ್ದೆ. ನಮ್ಮ ಹೋರಾಟಕ್ಕೆ ಸಪೋರ್ಟ್ ಮಾಡಿದವರಿಗೆ ಧನ್ಯವಾದ ಎಂದು ಎಲ್ಲರಿಗೂ ಕರವೇ ನಾರಾಯಣಗೌಡರು ಧನ್ಯವಾದ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ : 2017ರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ವಿಚಾರಣಗೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ವಾರಂಟ್ ಜಾರಿಯಾಗಿತ್ತು. ಹೀಗಾಗಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ : ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸಲ್ಲ : ಕಾಂಗ್ರೆಸ್ನ ಅಧಿಕೃತ ಘೋಷಣೆ..!