Download Our App

Follow us

Home » ಸಿನಿಮಾ » ಇವತ್ತು ನಾನು ತಲೆ ಎತ್ತಿ ಓಡಾಡ್ತಿದ್ರೆ ಅಭಿಮಾನಿಗಳೇ ಕಾರಣ – ಪೊರ್ಕಿ ಅಭಿಮಾನಿಗಳಿಗೆ ಮತ್ತೆ ಗುಮ್ಮಿದ ಕಿಚ್ಚ ಸುದೀಪ್..!

ಇವತ್ತು ನಾನು ತಲೆ ಎತ್ತಿ ಓಡಾಡ್ತಿದ್ರೆ ಅಭಿಮಾನಿಗಳೇ ಕಾರಣ – ಪೊರ್ಕಿ ಅಭಿಮಾನಿಗಳಿಗೆ ಮತ್ತೆ ಗುಮ್ಮಿದ ಕಿಚ್ಚ ಸುದೀಪ್..!

ಬೆಂಗಳೂರು : ಸ್ಯಾಂಡಲ್‌ವುಡ್‌ ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿನ್ನೆಯೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬರ್ತ್​ಡೇ ಸೆಲೆಬ್ರೇಷನ್ ಜೋರಾಗಿಯೇ ಇತ್ತು. ಮನೆ ಎದುರು ಎಂದಿನಂತೆ ಅಭಿಮಾನಿಗಳು ರಾತ್ರಿನೇ ಆಗಮಿಸಿದ್ದರು. ಅಭಿಮಾನಿಗಳ ಈ ಒಂದು ಆಗಮನಕ್ಕೆ ಗೌರವ ಕೊಟ್ಟ ಕಿಚ್ಚ ಸುದೀಪ್ ಮನೆಯಿಂದಲೂ ಹೊರ ಬಂದು ಅಭಿಮಾನಿಗಳ ಪ್ರೀತಿಯ ಶುಭಾಶಯಗಳನ್ನ ಕೂಡ ಸ್ವೀಕರಿಸಿದ್ದಾರೆ.

ಕಳೆದ ವರ್ಷ ತಮ್ಮ ಮನೆಯಲ್ಲಿ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಉಂಟಾಗಿದ್ದ ಅಡ್ಡಿಯಿಂದಾಗಿ ಈ ವರ್ಷ ಇಂದು ಬೆಂಗಳೂರಿನ ಜಯನಗರದ ಎಂಇಎಸ್ ಮೈದಾನದಲ್ಲಿ ಕಿಚ್ಚ  ಸುದೀಪ್​​ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

 

ಇದೇ ವೇಳೆ ಪೊರ್ಕಿ ಅಭಿಮಾನಿಗಳಿಗೆ ಮತ್ತೆ ಗುಮ್ಮಿದ ಕಿಚ್ಚ ಸುದೀಪ್ ಅವರು, ಇವತ್ತು ನಾನು ತಲೆ ಎತ್ತಿ ಓಡಾಡ್ತಿದ್ರೆ ಅಭಿಮಾನಿಗಳೇ ಕಾರಣ. ಅಭಿಮಾನಿಗಳು ನನ್ನ ಹೆಸರಿಗೆ ಕಳಂಕ ತರುವ ಕೆಲಸವನ್ನು ಮಾಡಿಲ್ಲ, ಮಾಡೋದೂ ಇಲ್ಲ ಎಂದಿದ್ದಾರೆ.

ಇನ್ನು ವ್ಯಕ್ತಿತ್ವದಲ್ಲಿ ನಾವು ದೊಡ್ಡವರಾಗಬೇಕು, ಫ್ಯಾನ್ಸ್ ನಮ್ಮ ಪ್ರತಿಬಿಂಬ. ವ್ಯಕ್ತಿತ್ವದಲ್ಲಿ ದೊಡ್ಡವರಾಗಲು ಸಿನಿಮಾ ಮಾತ್ರ ಸಾಲದು. ನನ್ನ ಅಕ್ಕ-ಪಕ್ಕ ಇರೋವ್ರು, ಕುಟುಂಬ ಕೂಡಾ ಮುಖ್ಯವಾಗುತ್ತಿದೆ. ಅಭಿಮಾನಿಗಳು ಚೆನ್ನಾಗಿದ್ದಾರೆ, ಅದ್ಕೆ ನಾನೂ ಚೆನ್ನಾಗಿದ್ದೇನೆ. ನನ್ನ ಜೊತೆ ಇರೋವ್ರು ಜೀವನದಲ್ಲೂ ಚೆನ್ನಾಗಿದ್ದಾರೆ. ಹೀಗಾಗಿ ನನ್ನ ವ್ಯಕ್ತಿತ್ವವೂ ಚೆನ್ನಾಗಿದೆ ಎಂದು ಅಭಿನಯ ಚಕ್ರವರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ : ಧಾರಾಕಾರ ಮಳೆಗೆ ತತ್ತರಿಸಿದ ಆಂಧ್ರಪ್ರದೇಶ – 10ಕ್ಕೂ ಹೆಚ್ಚು ಮಂದಿ ಬ*ಲಿ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here