ಆಂಧ್ರಪ್ರದೇಶ : ಧಾರಾಕಾರ ಮಳೆಗೆ ಇಡೀ ಆಂಧ್ರಪ್ರದೇಶ ತತ್ತರಿಸಿಹೋಗಿದೆ. 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬಿರುಮಳೆ ಸುರಿದಿದ್ದು ಪ್ರವಾಹ ಸೇರಿದಂತೆ ಮಳೆ ಅನಾಹುತಗಳಲ್ಲಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಭಾರಿ ಮಳೆಯಿಂದಾಗಿ ಆಂಧ್ರಪ್ರದೇಶದ ವಿಜಯವಾಡ ನಗರವಂತೂ ಬಹುತೇಕ ನೀರಿನಲ್ಲಿ ಮುಳುಗಿದೆ. ಖುದ್ದು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ ಚಂದ್ರಬಾಬು ನಾಯ್ಡು ಅವರು, ರಬ್ಬರ್ ಬೋಟ್ಗಳಲ್ಲಿ ತೆರಳಿ ಸ್ಥಳ ಪರಿಶೀಲನೆ ಮಾಡಿ, ಸ್ಥಳೀಯರಿಗೆ ಧೈರ್ಯ ತುಂಬಿದರು.
ಬುದಮೇರು ವಾಗು ನದಿಯಲ್ಲಿ ಪ್ರವಾಹ ಸೃಷ್ಟಿಯಾಗಿ ವಿಜಯವಾಡ ಸಂಪೂರ್ಣ ಮುಳುಗಿದೆ. ಕಮ್ಮಂ, ಪ್ರಕಾಶಂ, ಕರ್ನೂಲ್, ನೆಲ್ಲೂರು ಜಿಲ್ಲೆಗಳಲ್ಲಿ ಮಳೆ ಅನಾಹುತದಿಂದ ಜನರು ತತ್ತರಿಸಿ ಹೋಗಿದ್ದಾರೆ. ಪ್ರಕಾಶಂ ಬ್ಯಾರೇಜ್ನಿಂದ ಸುಮಾರು 11 ಲಕ್ಷ ಕ್ಯೂಸೆಕ್ ನೀರು ಹೊರ ಹೋಗ್ತಿದ್ದು ನೂರಾರು ಗ್ರಾಮಗಳು ಮುಳುಗಡೆಯಾಗ್ತಿವೆ.
ಇದನ್ನೂ ಓದಿ : ಕ್ರಿಶ್ಚಿಯನ್ ಸಂಪ್ರದಾಯದಂತೆ ಮಂಗಳೂರಿನಲ್ಲಿ ತರುಣ್-ಸೋನಲ್ ಚರ್ಚ್ ವೆಡ್ಡಿಂಗ್ – ಫೋಟೋಸ್ ಇಲ್ಲಿವೆ ನೋಡಿ..!
Post Views: 78