ಬೆಂಗಳೂರು : ಸ್ಯಾಂಡಲ್‌ವುಡ್ ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿನ್ನೆಯೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬರ್ತ್ಡೇ ಸೆಲೆಬ್ರೇಷನ್ ಜೋರಾಗಿಯೇ ಇತ್ತು. ಮನೆ ಎದುರು ಎಂದಿನಂತೆ ಅಭಿಮಾನಿಗಳು ರಾತ್ರಿನೇ ಆಗಮಿಸಿದ್ದರು. ಅಭಿಮಾನಿಗಳ ಈ ಒಂದು ಆಗಮನಕ್ಕೆ ಗೌರವ ಕೊಟ್ಟ ಕಿಚ್ಚ ಸುದೀಪ್ ಮನೆಯಿಂದಲೂ ಹೊರ ಬಂದು ಅಭಿಮಾನಿಗಳ ಪ್ರೀತಿಯ ಶುಭಾಶಯಗಳನ್ನ ಕೂಡ ಸ್ವೀಕರಿಸಿದ್ದಾರೆ.
ಕಳೆದ ವರ್ಷ ತಮ್ಮ ಮನೆಯಲ್ಲಿ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಉಂಟಾಗಿದ್ದ ಅಡ್ಡಿಯಿಂದಾಗಿ ಈ ವರ್ಷ ಇಂದು ಬೆಂಗಳೂರಿನ ಜಯನಗರದ ಎಂಇಎಸ್ ಮೈದಾನದಲ್ಲಿ ಕಿಚ್ಚ ಸುದೀಪ್ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಇದೇ ವೇಳೆ ಪೊರ್ಕಿ ಅಭಿಮಾನಿಗಳಿಗೆ ಮತ್ತೆ ಗುಮ್ಮಿದ ಕಿಚ್ಚ ಸುದೀಪ್ ಅವರು, ಇವತ್ತು ನಾನು ತಲೆ ಎತ್ತಿ ಓಡಾಡ್ತಿದ್ರೆ ಅಭಿಮಾನಿಗಳೇ ಕಾರಣ. ಅಭಿಮಾನಿಗಳು ನನ್ನ ಹೆಸರಿಗೆ ಕಳಂಕ ತರುವ ಕೆಲಸವನ್ನು ಮಾಡಿಲ್ಲ, ಮಾಡೋದೂ ಇಲ್ಲ ಎಂದಿದ್ದಾರೆ.
ಇನ್ನು ವ್ಯಕ್ತಿತ್ವದಲ್ಲಿ ನಾವು ದೊಡ್ಡವರಾಗಬೇಕು, ಫ್ಯಾನ್ಸ್ ನಮ್ಮ ಪ್ರತಿಬಿಂಬ. ವ್ಯಕ್ತಿತ್ವದಲ್ಲಿ ದೊಡ್ಡವರಾಗಲು ಸಿನಿಮಾ ಮಾತ್ರ ಸಾಲದು. ನನ್ನ ಅಕ್ಕ-ಪಕ್ಕ ಇರೋವ್ರು, ಕುಟುಂಬ ಕೂಡಾ ಮುಖ್ಯವಾಗುತ್ತಿದೆ. ಅಭಿಮಾನಿಗಳು ಚೆನ್ನಾಗಿದ್ದಾರೆ, ಅದ್ಕೆ ನಾನೂ ಚೆನ್ನಾಗಿದ್ದೇನೆ. ನನ್ನ ಜೊತೆ ಇರೋವ್ರು ಜೀವನದಲ್ಲೂ ಚೆನ್ನಾಗಿದ್ದಾರೆ. ಹೀಗಾಗಿ ನನ್ನ ವ್ಯಕ್ತಿತ್ವವೂ ಚೆನ್ನಾಗಿದೆ ಎಂದು ಅಭಿನಯ ಚಕ್ರವರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ : ಧಾರಾಕಾರ ಮಳೆಗೆ ತತ್ತರಿಸಿದ ಆಂಧ್ರಪ್ರದೇಶ – 10ಕ್ಕೂ ಹೆಚ್ಚು ಮಂದಿ ಬ*ಲಿ..!