Download Our App

Follow us

Home » ರಾಜಕೀಯ » ಇಂದು ಸಂಜೆಯೇ ಕೋಲಾರ ಕ್ಲೈಮ್ಯಾಕ್ಸ್​ : ಮುನಿಯಪ್ಪ ಅಳಿಯನಿಗೆ ಕಾಂಗ್ರೆಸ್​ ಟಿಕೆಟ್​ ತಪ್ಪೋದು​ ಫಿಕ್ಸ್​..!

ಇಂದು ಸಂಜೆಯೇ ಕೋಲಾರ ಕ್ಲೈಮ್ಯಾಕ್ಸ್​ : ಮುನಿಯಪ್ಪ ಅಳಿಯನಿಗೆ ಕಾಂಗ್ರೆಸ್​ ಟಿಕೆಟ್​ ತಪ್ಪೋದು​ ಫಿಕ್ಸ್​..!

ಕೋಲಾರ :  18ನೇ ಲೋಕಸಭಾ ಚುನಾವಣೆಯ ಕಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ವೇಳೆ ಎಲ್ಲ ರಾಜಕೀಯ ಪಕ್ಷಗಳ ಚುನಾವಣಾ ಅಭ್ಯರ್ಥಿಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಆದರೆ ಕೋಲಾರ ಟಿಕೆಟ್ ಹಂಚಿಕೆ ವಿಚಾರದಲ್ಲಿ ಭಿನ್ನಮತ ಸ್ಪೋಟಗೊಂಡಿತ್ತು. ಸಚಿವ ಕೆ. ಎಚ್​. ಮುನಿಯಪ್ಪ ಅವರ ಅಳಿಯ ಚಿಕ್ಕ ಪೆದ್ದಣ್ಣ ಅವರಿಗೆ ಟಿಕೆಟ್ ನೀಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಐವರು ಕಾಂಗ್ರೆಸ್ ಶಾಸಕರು ಬೆದರಿಕೆ ಒಡ್ಡಿದ್ದರು.

ನಿನ್ನೆ ಸಚಿವ ಡಾ.ಎಂ.ಸಿ.ಸುಧಾಕರ್​ ನೇತೃತ್ವದಲ್ಲಿ ಶಾಸಕರಾದ ಕೊತ್ತೂರು ಮಂಜುನಾಥ್​​​​​, ನಾರಾಯಣಸ್ವಾಮಿ ಹಾಗೂ MLCಗಳಾದ ನಜೀರ್​​ ಅಹ್ಮದ್​, ಅನಿಲ್​​ಕುಮಾರ್ ರಾಜೀನಾಮೆ ನೀಡಲು ಬಿಗಿಪಟ್ಟು ಹಿಡಿದು, ವಿಧಾನಸೌಧಕ್ಕೂ ಭೇಟಿ ನೀಡಿದ್ದರು.

ಈ ಹಿನ್ನಲೆ ಇಂದು ಸಂಜೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮೀಟಿಂಗ್ ನಡೆಯಲಿದೆ. ಮೀಟಿಂಗ್​ನಲ್ಲಿ ಸಿಎಂ ಸಿದ್ದರಾಮಯ್ಯ ಅವರು  ರಮೇಶ್​ಕುಮಾರ್​​ ಬಣ, ಮುನಿಯಪ್ಪ ಬಣದ ಜೊತೆ ಚರ್ಚೆ ನಡೆಸಲಿದ್ದಾರೆ. MLA, MLCಗಳ ರಾಜೀನಾಮೆ ಬೆದರಿಕೆ ಎಫೆಕ್ಟ್​ನಿಂದ ಮುನಿಯಪ್ಪ ಅಳಿಯಗೆ ಕಾಂಗ್ರೆಸ್​ ಟಿಕೆಟ್​ ತಪ್ಪೋದು​ ಫಿಕ್ಸ್​ ಎಂದು ಹೇಳಲಾಗುತ್ತಿದೆ. ಬಲಗೈ ಸಮುದಾಯದ ಸಿ.ಎಂ ಮುನಿಯಪ್ಪ ಪರ ನಿಂತ ರಮೇಶ್ ಕುಮಾರ್ ಬಣ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಬದಲಿಗೆ ಸಿ.ಎಂ ಮುನಿಯಪ್ಪಗೆ ಜಾನ್ಸ್​..? ಸಿಗುತ್ತ ಅಂತ ಕಾದು ನೋಡಬೇಕಾಗಿದೆ.

ಇದನ್ನೂ ಓದಿ : ಕೊರೋನಾದಲ್ಲಿ ಸತ್ತವರ ಆತ್ಮಕ್ಕೆ ಶಾಂತಿ ಸಿಗಲು ಸುಧಾಕರ್​ ಸೋಲಬೇಕು : ಹೂಡಿ ವಿಜಯಕುಮಾರ್..!

Leave a Comment

RELATED LATEST NEWS

Top Headlines

ಮಹಾರಾಷ್ಟ್ರದಲ್ಲಿ IT ಅಧಿಕಾರಿಗಳ ಬೃಹತ್​ ರೇಡ್​ – 26 ಕೋಟಿ ನಗದು, 90 ಕೋಟಿ ಮೌಲ್ಯದ ಸಂಪತ್ತು ಜಪ್ತಿ..!

ಮಹಾರಾಷ್ಟ್ರ : ಆದಾಯ ತೆರಿಗೆ ಇಲಾಖೆ (IT) ನಿನ್ನೆ ರಾತ್ರಿ ನಾಸಿಕ್‌ನಲ್ಲಿರುವ ಪ್ರಸಿದ್ಧ ಆಭರಣ ಮಳಿಗೆಯ ಮೇಲೆ ದಾಳಿ ನಡೆಸಿ 26 ಕೋಟಿ ಹಣವನ್ನು ಜಪ್ತಿ ಮಾಡಿದೆ. ಅಕ್ರಮ

Live Cricket

Add Your Heading Text Here