ಚಿಕ್ಕಬಳ್ಳಾಪುರ : ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳು ರಾಜ್ಯಾದಂತ್ಯ ತಮ್ಮ ತಮ್ಮ ಅಖಾಡವನ್ನು ಸಿದ್ದಗೊಳಿಸುತ್ತಿವೆ. ಆದರೆ ಅಭ್ಯರ್ಥಿಗಳ ಘೋಷಣೆ ವಿಚಾರದಲ್ಲಿ ಪಕ್ಷಗಳ ನಡುವೆಯೇ ಭಿನ್ನಮತ ಸ್ಪೋಟಗೊಳ್ಳುತ್ತಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ಗೆ ಹೆಜ್ಜೆ-ಹೆಜ್ಜೆಗೂ ಬಂಡಾಯ ಬಿಸಿ ಎದುರಾಗುತ್ತಿದೆ.
ಬಿಜೆಪಿ ಹೈಕಮಾಂಡ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ಡಾ ಕೆ ಸುಧಾಕರ್ ಅವರ ಹೆಸರನ್ನು ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಶಾಸಕ ವಿಶ್ವನಾಥ್ ಹಾಗೂ ಬಿಜೆಪಿ ಕಾರ್ಯಕರ್ತರು ಶಾಸಕ ಸುಧಾಕರ್ ವಿರುದ್ಧ ಪರ ಪ್ರಚಾರ ಮಾಡಲ್ಲ ಎಂದು ತಿರುಗಿಬಿದ್ದಿದ್ದರು. ಇದೀಗ ವಿಶ್ವನಾಥ್ ಬೆನ್ನಲ್ಲೇ ಸುಧಾಕರ್ ವಿರುದ್ಧ ಪ್ರಚಾರ ಮಾಡೋದಾಗಿ ಹೂಡಿ ವಿಜಯಕುಮಾರ್ ಹೇಳಿಕೊಂಡಿದ್ದಾರೆ.
ಡಾ.ಕೆ.ಸುಧಾಕರ್ ವಿರುದ್ಧ ಪ್ರಚಾರ ಮಾಡೋದಾಗಿ ಹೇಳಿಕೆ ನೀಡಿರುವ ಹೂಡಿ ವಿಜಯಕುಮಾರ್ ಅವರು, ಕರೋನಾ ಸಾವು-ನೋವುಗಳಿಗೆ ಡಾ.ಸುಧಾಕರ್ ದುರಾಡಳಿತ ಕಾರಣ. ಕರೋನಾ ವೇಳೆ ಮೃತಪಟ್ಟವರ ಆತ್ಮಗಳಿಗೆ ಶಾಂತಿ ಸಿಗಬೇಕು ಅಂದ್ರೆ ಡಾ.ಕೆ.ಸುಧಾಕರ್ ಈ ಲೋಕಸಭೆಯಲ್ಲಿ ಸೋಲಬೇಕು ಎಂದು ಕಿಡಿಕಾರಿದ್ದಾರೆ.
2023ರ ಮಾಲೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಲು ಡಾ.ಸುಧಾಕರ್ ನೇರ ಕಾರಣ : ನನಗೆ ಟಿಕೆಟ್ ಕೈತಪ್ಪಲು, ಮಾಲೂರು ಕ್ಷೇತ್ರದಲ್ಲಿ ಬಿಜೆಪಿ ಸೋಲಲು ಡಾ.ಕೆ.ಸುಧಾಕರ್ ಕಾರಣ, ಈಗಿನ ಶಾಸಕ ಕಾಂಗ್ರೆಸ್ ನ ನಂಜೇಗೌಡ ವಿರುದ್ದ ಕೇವಲ 1000 ಮತಗಳ ಅಂತರದಲ್ಲಿ ಸೋತೆ, ಅದಕ್ಕೆ ನೇರ ಕಾರಣ ಡಾ ಸುಧಾಕರ್ ನನಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದು, ಪಕ್ಷೇತರನಾಗಿ ನಿಂತು ಸ್ಪರ್ದೆ ಮಾಡಿದ ನನಗೆ ಮಾಲೂರು ಜನ ಬೆಂಬಲ ನೀಡಿದ್ದಾರೆ.
ಹಿಂದುಳಿಗ ಸಮೂದಾಯಗಳ ಯಾರನ್ನು ಬೆಳೆಯಲು ಬಿಡಲ್ಲ ಡಾ.ಕೆ.ಸುಧಾಕರ್ : ಹಿಂದುಳಿದ ಸಮೂದಾಯಗಳ ಯುವ ನಾಯಕರನ್ನು ಹತ್ತಿರಕ್ಕು ಸೇರಿಸಿಕೊಳ್ಳಲ್ಲ ಆದ್ದರಿಂದ ಇಂತಹ ವ್ಯಕ್ತಿಗೆ ಬಿಜೆಪಿ ಹೈಕಮ್ಯಾಂಡ್ ಟಿಕೆಟ್ ಕೊಡಬಾರದಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೀಗ ಹೂಡಿ ವಿಜಯಕುಮಾರ್ ಹೇಳಿಕೆ ನೀಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ಓದಿ : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ – ಬೆಂಗಳೂರಿನಲ್ಲಿ ಇಬ್ಬರನ್ನು ವಶಕ್ಕೆ ಪಡೆದ NIA..!