Download Our App

Follow us

Home » ಅಪರಾಧ » ಹಣ ಡಬಲ್ ಮಾಡೋ ಆಮಿಷ : ಕೋಟಿ-ಕೋಟಿ ಕಲೆಕ್ಟ್ ಮಾಡಿ ದಂಪತಿ ಎಸ್ಕೇಪ್..!

ಹಣ ಡಬಲ್ ಮಾಡೋ ಆಮಿಷ : ಕೋಟಿ-ಕೋಟಿ ಕಲೆಕ್ಟ್ ಮಾಡಿ ದಂಪತಿ ಎಸ್ಕೇಪ್..!

ಕಲಬುರಗಿ : ಹಣ ಡಬಲ್​​ ಮಾಡೋ ಆಸೆ ತೋರಿಸಿ 30 ಕೋಟಿ ವಂಚನೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಒಂದು ವರ್ಷದಲ್ಲಿ ಹಣ ಡಬಲ್ ಮಾಡೋ ಆಮಿಷವೊಡ್ಡಿ ಕೋಟಿ-ಕೋಟಿ ಕಲೆಕ್ಟ್ ಮಾಡಿ ದಂಪತಿ ಎಸ್ಕೇಪ್​ ಆಗಿದ್ದಾರೆ. ರೋಜಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ವಂಚನೆ ನಡೆದಿದೆ.

ಉತ್ಕರ್ಷ ಹಾಗೂ ಸಾವಿತ್ರಿ ಎಂಬುವರಿಂದ ಮಹಾ ವಂಚನೆ ನಡೆದಿದ್ದು, ಕ್ಯಾಪಿಟಲ್ ಗ್ರೋ ಲನ್೯ ಗ್ರೌತ್ ಪ್ಲಸ್ ಕಂಪನಿ ಹೆಸರಲ್ಲಿ ವಂಚನೆ ಮಾಡಿದ್ದಾರೆ. ಯುವಕ, ಯುವತಿಯರನ್ನೇ ಟಾರ್ಗೆಟ್ ಮಾಡಿ ಹಣ ವಂಚನೆ ಮಾಡುತ್ತಿದ್ದರು. ಬರೋಬ್ಬರಿ 500ಕ್ಕೂ ಅಧಿಕ ಜನರಿಗೆ ದಂಪತಿ ವಂಚಿಸಿದ್ದು, ತಲಾ 25 ಲಕ್ಷದಿಂದ 1 ಕೋಟಿವರೆಗೂ ಹಣ ಸಂಗ್ರಹ ಮಾಡಿದ್ದಾರೆ. ವಂಚನೆ ಗೊತ್ತಾಗಿ ಜನರು ಪೊಲೀಸರಿಗೆ ದೂರು ನೀಡಿದ್ದು, ದೂರು ಕೊಡ್ತಿದ್ದಂತೆ ಅಪಾಟ್೯ಮೆಂಟ್​ನಿಂದ ದಂಪತಿ ಎಸ್ಕೇಪ್​​ ಆಗಿದ್ದಾರೆ.

ಸುನೀಲ್ ಹುದಗಿ ಎಂಬುವರ ಕಾರಿನಲ್ಲಿ ಎಸ್ಕೇಪ್​​ ಆಗಿರುವ ಆರೋಪ ಕೇಳಿಬಂದಿದ್ದು, ಸುಧಾ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬರೋಬ್ಬರಿ 100 ಕೋಟಿಗೂ ಅಧಿಕ ವಂಚನೆ ಮಾಡಿರುವ ಆರೋಪ ವ್ಯಕ್ತವಾಗಿದೆ. ಇದೀಗ ರೋಜಾ ಪೊಲೀಸ್ ಠಾಣೆಗೆ ನೂರಾರು ದೂರುಗಳು ಬರ್ತಿವೆ.

ಇದನ್ನೂ ಓದಿ : ಮೋದಿ ಮತ್ತೆ ಗೆದ್ದರೆ ತಮ್ಮ ದೇಗುಲವನ್ನು ತಾವೇ ಕಟ್ಟಿಸ್ತಾರೆ : ಸಚಿವ ಶಿವರಾಜ್​ ತಂಗಡಗಿ..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here