Download Our App

Follow us

Home » ಮೆಟ್ರೋ » ಲೋಕಾಯುಕ್ತ ರೇಡ್ : BBMP ಚೀಫ್​​ ಎಂಜಿನಿಯರ್​ ರಂಗನಾಥ್​ ಮನೆಯಲ್ಲಿ 549 ಗ್ರಾಂ ಚಿನ್ನ, 420 ಗ್ರಾಂ ಬೆಳ್ಳಿ, 7 ಲಕ್ಷ 98 ಸಾವಿರ ನಗದು ಪತ್ತೆ..!

ಲೋಕಾಯುಕ್ತ ರೇಡ್ : BBMP ಚೀಫ್​​ ಎಂಜಿನಿಯರ್​ ರಂಗನಾಥ್​ ಮನೆಯಲ್ಲಿ 549 ಗ್ರಾಂ ಚಿನ್ನ, 420 ಗ್ರಾಂ ಬೆಳ್ಳಿ, 7 ಲಕ್ಷ 98 ಸಾವಿರ ನಗದು ಪತ್ತೆ..!

ಬೆಂಗಳೂರು : ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಸಿದ ಆರೋಪದ ಮೇಲೆ ಬೆಂಗಳೂರು ಸೇರಿದಂತೆ ರಾಜ್ಯದ 60 ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು 13 ಮಂದಿ ಮೇಲೆ 60 ಸ್ಥಳಗಳಲ್ಲಿ ರೇಡ್​ ಮಾಡಿದ್ದಾರೆ.

ಏಕಕಾಲಕ್ಕೆ 130 ಲೋಕಾಯುಕ್ತ ಅಧಿಕಾರಿಗಳು ರೇಡ್​ ಮಾಡಿದ್ದು, ಈ ವೇಳೆ BBMP ವಲಯದ ಚೀಫ್​​ ಎಂಜಿನಿಯರ್​ ರಂಗನಾಥ್​ ಮನೆಯಲ್ಲಿ ಚಿನ್ನಾಭರಣ, ಬೆಳ್ಳಿ, ನಗದು ಹಣ ಪತ್ತೆಯಾಗಿದೆ. 549 ಗ್ರಾಂ ಗೋಲ್ಡ್, 420 ಗ್ರಾಂ ಬೆಳ್ಳಿ, 7 ಲಕ್ಷ 98 ಸಾವಿರ ನಗದು ಪತ್ತೆಯಾಗಿದೆ.

ಅಷ್ಟೇ ಅಲ್ಲದೆ ಮಂಡ್ಯ ಪಂಚಾಯ್ತಿ ಸಹಾಯಕ ಅಕೌಂಟೆಂಟ್​ ಮನೆಯಲ್ಲಿ ಚಿನ್ನದ ರಾಶಿ ಪತ್ತೆಯಾಗಿದೆ. ಮಳವಳ್ಳಿ ತಾಲೂಕು ಅಗಸನಪುರ ಪಂಚಾಯ್ತಿ SDAA ಕೃಷ್ಣೇಗೌಡ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ KRIDL EE ಸದಾಶಿವಯ್ಯ ಬಳಿ ಐಷಾರಾಮಿ ಕಟ್ಟಡದ ಮೇಲೂ ಲೋಕಯುಕ್ತ ದಾಳಿ ಮಾಡಿದೆ. ಈ ಮೂಲಕ ಎಂಜಿನಿಯರ್​ಗಳು, ARTO, RFO ಸೇರಿ ಹಲವರಿಗೆ ಲೋಕಾ ಶಾಕ್​ ನೀಡಿದೆ.

ರಾಜ್ಯಾದ್ಯಂತ ಭ್ರಷ್ಟರಿಗೆ ಲೋಕಾ ಶಾಕ್​​​..! ಯಾರ್ಯಾರ ಮೇಲೆ ನಡೆದಿದೆ ಗೊತ್ತಾ ರೇಡ್​..?

1. ರಂಗನಾಥ್​- ಬಿಬಿಎಂಪಿ ಚೀಫ್​ ಎಂಜಿನಿಯರ್​​, ಯಲಹಂಕ ಝೋನ್​​
2. ರೂಪಾ- ಉಡುಪಿ ಅಬಕಾರಿ ಡಿಸಿ
3. ಪ್ರಕಾಶ್​- ಕಾರವಾರ ಜ್ಯೂನಿಯರ್​ ಎಂಜಿನಿಯರ್​​
4. ಫಯಾಜ್​ ಅಹ್ಮದ್​- ಅಸಿಸ್ಟೆಂಟ್​ ಎಂಜಿನಿಯರ್​​, ಮೈಸೂರು
5. ಜಯಣ್ಣ- ಚೀಫ್​​ ಎಕ್ಸ್​ಕ್ಯೂಟಿವ್​ ಆಫೀಸರ್​​​​​​ ಕೊಡಗು
6. ಯತೀಶ್​- ರಾಮನಗರ ಜಿಲ್ಲೆ ಬಿಡದಿಯ ಮಾಚನಾಯನಕನಹಳ್ಳಿ PDO
7. ಮಹೇಶ್​ ಚಂದ್ರಯ್ಯ ಹಿರೇಮಠ್​, RFO, ಧಾರವಾಡ-
8. ಶಿವಕುಮಾರಸ್ವಾಮಿ- ಎಕ್ಸ್​ಕ್ಯೂಟಿವ್​ ಎಂಜಿನಿಯರ್​​, ಬೀದರ್​​
9. ನಾಗರಾಜಪ್ಪ, ಅಸಿಸ್ಟೆಂಟ್​ ಡೈರೆಕ್ಟರ್​​, ಕೋಲಾರ
10. ಷಣ್ಮುಖಪ್ಪ- ಬಾಗಲಕೋಟೆ ಜಿಲ್ಲೆ ಜಮಖಂಡಿ ARTO
11. ಸದಾಶಿವಯ್ಯ- ಅಸಿಸ್ಟೆಂಟ್​ ಎಕ್ಸ್​ಕ್ಯೂಟಿವ್​​ ಎಂಜಿನಿಯರ್​​​
12. ಕೃಷ್ಣೇಗೌಡ- ಸೆಕೆಂಡ್​ ಡಿವಿಷನ್​ ಅಕೌಂಟ್​ ಅಸಿಸ್ಟೆಂಟ್​, ಮಂಡ್ಯ
13. ಸದಾಶಿವ ಜಯಪ್ಪ- ಬೆಳಗಾವಿ ನಿಡಗುಂಡಿ PDO

ಇದನ್ನೂ ಓದಿ : ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ – ಬೆಂಗಳೂರು, ಚೆನ್ನೈ ಸೇರಿ ಹಲವೆಡೆ NIA ದಾಳಿ..!

Leave a Comment

DG Ad

RELATED LATEST NEWS

Top Headlines

ವಾಹನ ಸವಾರರೇ ಹುಷಾರ್… ಇನ್ಮುಂದೆ 130km ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದರೆ ಬೀಳುತ್ತೆ ಎಫ್‌ಐಆರ್‌..!

ಬೆಂಗಳೂರು : ಇನ್ಮುಂದೆ ರಾಜ್ಯಾದ್ಯಂತ ಗಂಟೆಗೆ 130 ಕಿಮೀ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ಅಂತವರ ವಿರುದ್ಧ FIR ದಾಖಲಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ

Live Cricket

Add Your Heading Text Here