Download Our App

Follow us

Home » ರಾಜ್ಯ » ದೆಹಲಿ ಚಲೋಗೆ ಹೊರಟಿದ್ದ ಕರ್ನಾಟಕದ ರೈತರು ಅರೆಸ್ಟ್..!

ದೆಹಲಿ ಚಲೋಗೆ ಹೊರಟಿದ್ದ ಕರ್ನಾಟಕದ ರೈತರು ಅರೆಸ್ಟ್..!

ದೆಹಲಿ : ದೆಹಲಿಗೆ ತೆರಳುತ್ತಿದ್ದ ಕರ್ನಾಟಕದ ರೈತರನ್ನು ಮಧ್ಯಪ್ರದೇಶದಲ್ಲಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ದೆಹಲಿ ಚಲೋಗೆ ಹೊರಟಿದ್ದ ಕರ್ನಾಟಕದ ರೈತರನ್ನು ಅರೆಸ್ಟ್​ ಮಾಡಿ, ಉಜ್ಜೈನಿಗೆ ಶಿಫ್ಟ್​ ಮಾಡಿದ್ದಾರೆ.

ಪೊಲೀಸರು ಎರಡು ಬಸ್ಸುಗಳಲ್ಲಿ ಉಜ್ಜೈನಿಗೆ ಕರೆದೊಯ್ದಿದ್ದು, ದೆಹಲಿಗೆ ಹೋಗಲು ಬಿಡದೇ ರೈತರಿಗೆ ಪೊಲೀಸರು ತಡೆ ಹೇರಿದ್ದಾರೆ. ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈಲಿನಲ್ಲಿ ಭೋಪಾಲ್​​ ತಲುಪುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಚಲೋ ಹೋರಾಟ ಕಾವೇರುತ್ತಿದೆ. ದೆಹಲಿಯ ದಿಕ್ಕು-ದಿಕ್ಕುಗಳಲ್ಲೂ ಪೊಲೀಸ್​ ಸರ್ಪಗಾವಲಿದ್ದು, ಪಂಜಾಬ್​​, ಹರ್ಯಾಣ ರಾಜ್ಯಗಳ ಗಡಿಯಲ್ಲಿ ರೈತರು ಜಮಾಯಿಸಿದ್ದಾರೆ. ರೈತರು ನೂರಾರು ಟ್ರ್ಯಾಕ್ಟರ್​​ಗಳ ಸಮೇತ ಬಂದಿದ್ದು, ಕಬ್ಬಿಣದ ಗೇಟ್​, ಕಾಂಕ್ರಿಟ್​ ಬ್ಲಾಕ್ಸ್​, ಮುಳ್ಳು ತಂತಿಗಳ ಬೇಲಿ ನಿರ್ಮಾಣವಾಗಿದೆ.

ದೆಹಲಿಯಲ್ಲಿ ಮಾರ್ಚ್​ 12ರವರೆಗೂ ನಿಷೇಧಾಜ್ಞೆ ಜಾರಿಯಾಗಿದ್ದು, ಪ್ರಮುಖ ರಸ್ತೆಗಳನ್ನು ಮುಚ್ಚಿ ಸರ್ವಿಸ್​ ರಸ್ತೆಗಳಲ್ಲಿ ಅವಕಾಶ ಕಲ್ಪಿಸಿದ್ದಾರೆ. ದೆಹಲಿಯಲ್ಲಿ ಬೆಳಗ್ಗೆಯಿಂದಲೇ ಭಾರೀ ಟ್ರಾಫಿಕ್​​ ಜಾಮ್​​​ ಆಗಿದ್ದು, 200ಕ್ಕೂ ಹೆಚ್ಚು ರೈತ ಸಂಘಟನೆಯ ಸಾವಿರಾರು ರೈತರು ಪ್ರೊಟೆಸ್ಟ್ ನಡೆಸುತ್ತಿದ್ದಾರೆ.

ಪಂಜಾಬ್, ಕರ್ನಾಟಕ​​ ಸೇರಿ 9 ರಾಜ್ಯಗಳ ರೈತ ಸಂಘಟನೆಗಳ ಬಲವಿದ್ದು, ದೆಹಲಿ ಸುತ್ತ 10 ಪ್ಯಾರಾ ಮಿಲಿಟರಿ ಸೇರಿ ಪೊಲೀಸ್​ ಕೋಟೆ ಸೃಷ್ಟಿಯಾಗಿದೆ. MSP(ಕನಿಷ್ಟ ಬೆಂಬಲ ಬೆಲೆ) ಕಾಯ್ದೆ ಸೇರಿ ವಿವಿಧ ಬೇಡಿಕೆಗೆ ರೈತರು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ : ಅಧಿವೇಶನದಲ್ಲಿ ಆರ್​​.ಅಶೋಕ್​ ಮತ್ತು ಸಚಿವ ಪರಮೇಶ್ವರ್​ ನಡುವೆ ವಾಕ್​ಸಮರ..!

Leave a Comment

DG Ad

RELATED LATEST NEWS

Top Headlines

ಬಸ್ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ – 7 ಮಂದಿ ದಾರುಣ ಸಾವು..!

ಮುಂಬೈ : ಬಸ್‌ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿರೋ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ. ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಬಸ್

Live Cricket

Add Your Heading Text Here