ಕಲಬುರಗಿ : ಕರ್ನಾಟಕದ ಕಲಬುರಗಿ ಮೂಲದ ಮೂರು ಯುವಕರು ಏಜೆಂಟ್ ನಂಬಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿ ಅಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಂಗತಿ ಕಂಡುಬಂದಿದೆ. ಭಾರತೀಯರನ್ನು ಅಲ್ಲಿ ರಷ್ಯಾ-ಉಕ್ರೇನ್ ಯುದ್ದಕ್ಕೆ ಬಳಕೆ ಮಾಡಿರುವ ಕುರಿತು ಯುವಕರು ವಿಡಿಯೋದ ಮೂಲಕ ಸತ್ಯ ತೆರೆದಿಟ್ಟಿದ್ದಾರೆ. ಆ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಸೈಯದ್ ಇಲಿಯಾಸ್ ಹುಸೇನಿ , ಮೊಹಮ್ಮದ್ ಸಮೀರ್ ಅಹಮದ್ , ಸೋಫಿಯಾ ಮೊಹಮ್ಮದ್ ರಷ್ಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ಯುವಕರಾಗಿದ್ದು, ಸದ್ಯ ಕಲಬುರಗಿ ಮೂಲದ ಮೂವರನ್ನು ರಷ್ಯಾ ಉಕ್ರೇನ್ ಯುದ್ದಕ್ಕೆ ಬಳಸಿಕೊಂಡ ಹಿನ್ನೆಲೆ ಯುವಕರು ಪರದಾಡುವಂತಾಗಿದೆ. ಸೆಕ್ಯು ರಿಟಿ ಕೆಲಸ ಕೊಡಿಸುವುದಾಗಿ ಹೇಳಿ ಏಜೆಂಟರು ರಷ್ಯಾಗೆ ಕಳುಹಿಸಿದ್ದಾರೆ. ಆದರೆ ಸೆಕ್ಯುರಿಟಿ ಕೆಲಸದ ಬದಲಿಗೆ ರಷ್ಯಾ ಉಕ್ರೇನ್ ಯುದ್ದಕ್ಕೆ ಅವರನ್ನು ಬಳಸಿಕೊಂಡಿದ್ದಾರೆ ಎಂದು ತಮ್ಮ ನೋವನ್ನು ಯುವಕರು ಹೇಳಿಕೊಂಡಿದ್ದಾರೆ.
ಇದರಿಂದ ನೊಂದ ಯುವಕರು ನಮ್ಮನ್ನ ವಾಪಸ್ ತಾಯ್ನಾಡಿಗೆ ಕರೆಸಿಕೊಳ್ಳುವಂತೆ ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಹಿನ್ನಲೆ ಸಂಸದ ಅಸಾದುದ್ದೀನ್ ಓವೈಸಿ ರಷ್ಯಾದಲ್ಲಿ ಸಿಲುಕಿದ ಯುವಕರನ್ನ ಸೇಫ್ ಆಗಿ ಕರೆತರುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಮೂರು ಜನರಲ್ಲಿ ಇಬ್ಬರು ಕಲಬುರಗಿ ಮಗರದ ಹಾಗರಗಾ ಬಡಾವಣೆಯವರಾಗಿದ್ದು, ಮತ್ತೊಬ್ಬ ಕಲಬುರಗಿ ನಗರದ ಮಿಜಗುರಿ ಪ್ರದೇಶ ನಿವಾಸಿಯಾಗಿದ್ದಾನೆ.
ಈ ಮೂರು ಯುವಕರು ದುಬೈ ಮೂಲದ ಬಾಬಾ ಏಜೆಂಟ್ ಮೂಲಕ ರಷ್ಯಾಕ್ಕೆ ತೆರಳಿದ್ದರು. ಬಾಬಾ ಏಜೆಂಟ್ ನವರು ಸೆಕ್ಯುರಿಟಿ ಕೆಲಸ ಕೋಡಿಸುವದಾಗಿ ಒಬ್ಬೊಬ್ಬರ ಬಳಿ ಮೂರು ಲಕ್ಷ ಹಣ ಪಡೆದುಕೊಂಡಿದ್ದರು. ಭಾರತದಿಂದ ಒಟ್ಟು ಆರು ಜನರನ್ನ ರಷ್ಯಾಗೆ ಕಳುಹಿಸಿದ್ದ ಬಾಬಾ ಏಜೆಂಟ್, ಕರ್ನಾಟಕದಿಂದ ನಾಲ್ವರನ್ನು ಕಳುಹಿಸಿಸಿತ್ತು. ಸೈಯದ್ ಇಲಿಯಾಸ್ ಹುಸೇನಿ , ಮೊಹಮ್ಮದ್ ಸಮೀರ್ ಅಹಮದ್ , ಸೋಫಿಯಾ ಮೊಹಮ್ಮದ್, ಮತ್ತೊಬ್ಬ ಯುವಕನನ್ನ ಎಲ್ಲಿ ಹಾಕಿದ್ದಾರೆ ಅಂತಾ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ : ಉಡುಪಿಯಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಚಾರಕ್ಕೆ ಬಂದವರನ್ನು ಅಟ್ಟಾಡಿಸಿಕೊಂಡು ಹೋದ ಸ್ಥಳೀಯ : ವಿಡಿಯೋ ವೈರಲ್..!