Download Our App

Follow us

Home » ಫ್ಲ್ಯಾಶ್ ನ್ಯೂಸ್ » ಯಶಸ್ವಿ ಜೈಸ್ವಾಲ್ ಭರ್ಜರಿ ದ್ವಿಶತಕ – ​ಟೀಂ ಇಂಡಿಯಾ ಪರ ಜೈಸ್ವಾಲ್‌ ವಿಶೇಷ ಸಾಧನೆ..!

ಯಶಸ್ವಿ ಜೈಸ್ವಾಲ್ ಭರ್ಜರಿ ದ್ವಿಶತಕ – ​ಟೀಂ ಇಂಡಿಯಾ ಪರ ಜೈಸ್ವಾಲ್‌ ವಿಶೇಷ ಸಾಧನೆ..!

ವಿಶಾಖಪಟ್ಟಣಂನಲ್ಲಿನ ಡಾ. ವೈಎಸ್​ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ ಪಂದ್ಯದ 2ನೇ ದಿನಕ್ಕೆ ಟೀಮ್ ಇಂಡಿಯಾ 396 ರನ್​ಗಳಿಗೆ ಆಲೌಟ್ ಆಗಿದೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಜೈಸ್ವಾಲ್ 277 ಎಸೆತಗಳಲ್ಲಿ ತಮ್ಮ ಚೊಚ್ಚಲ ಡಬಲ್ ಸೆಂಚುರಿ ಪೂರೈಸಿದ್ದಾರೆ.

ತಂಡದ ಮೊತ್ತ 40 ರನ್ ಇರುವಾಗ ರೋಹಿತ್ ಕ್ಯಾಚ್ ನೀಡಿ ಔಟ್ ಆದರು. ಗಿಲ್ 34, ಶ್ರೇಯಸ್ 27, ರಜತ್ ಪಾಟೀದರ್ 32, ಅಕ್ಷರ್ ಪಟೇಲ್ 27 ರನ್​. ಇವರಿಂದ ಉತ್ತಮ ಬ್ಯಾಟಿಂಗ್ ನಿರೀಕ್ಷೆ ಮಾಡಲು ಆಗಲಿಲ್ಲ. ಟೆಸ್ಟ್ ಪಂದ್ಯವಾದರೂ ಬಂದಷ್ಟೇ ವೇಗದಲ್ಲಿ ಪೆವಿಲಿಯನ್​ಗೆ ನಡೆದರು.

ಇತ್ತ ಕ್ರೀಸ್​ಗೆ ಕಚ್ಚಿಕೊಂಡು ಬ್ಯಾಟಿಂಗ್ ಮಾಡುತ್ತಿದ್ದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಭರ್ಜರಿಯಾಗಿ 209 ರನ್​ ಸಿಡಿಸಿ ತಂಡಕ್ಕೆ ನೆರವಾದರು. ಈ ಮೂಲಕ ತಮ್ಮ ಟೆಸ್ಟ್​ ವೃತ್ತಿ ಜೀವನದಲ್ಲಿ ಮೊಟ್ಟ ಮೊದಲ ದ್ವಿಶತಕ ಬಾರಿಸಿದರು. ಆಂಗ್ಲರ ವಿರುದ್ಧ ಬ್ಯಾಟಿಂಗ್‌ ಪ್ರಾಬಲ್ಯ ಮೆರೆದ ಯಶಸ್ವಿ ಜೈಸ್ವಾಲ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ 3ನೇ ಕಿರಿಯ ಭಾರತೀಯ ಕ್ರಿಕೆಟಿಗ ಎಂಬ ವಿಶೇಷ ಸಾಧನೆಗೆ ಪಾತ್ರರಾಗಿದ್ದಾರೆ

ಜೈಸ್ವಾಲ್ ಅವರ ಅಮೋಘ ದ್ವಿಶತಕದಾಟದಿಂದಲೇ ಟೀಮ್ ಇಂಡಿಯಾ 112 ಓವರ್​ಗಳಲ್ಲಿ 10 ವಿಕೆಟ್​​ಗೆ 396 ರನ್​ಗಳನ್ನು ಕಲೆ ಹಾಕಿತು.

ಭಾರತದ ಪರ ವಿಕೆಟ್ ಕೀಪರ್ ಶ್ರೀಕರ ಭರತ್ 17 ರನ್​ಗೆ ಔಟ್​ ಆಗಿ ಮತ್ತೊಮ್ಮೆ ಬ್ಯಾಟಿಂಗ್​​ನಲ್ಲಿ ವಿಫಲವಾದರು. ಆರ್ ಅಶ್ವಿನ್ 20, ಕುಲ್​ದೀಪ್​ 8, ಬೂಮ್ರಾ 6, ಮುಖೇಶ್ ಕುಮಾರ್ ಡಗೌಟ್​ ಆದರು. ಇಂಗ್ಲೆಂಡ್ ಪರ ಮಿಂಚಿನ ಬೌಲಿಂಗ್ ಮಾಡಿದ ಶೋಯೆಬ್ ಬಶೀರ್, ರೆಹಾನ್ ಅಹ್ಮದ್ ಹಾಗೂ ಜೇಮ್ಸ್ ಆಂಡರ್ಸನ್ ತಲಾ 3 ವಿಕೆಟ್​ಗಳನ್ನು ಕಬಳಿಸಿ ತಂಡಕ್ಕೆ ನೆರವಾದರು.

ಇದನ್ನೂ ಓದಿ : ಫೆ.7ರಂದು ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಸಮರ..!

Leave a Comment

DG Ad

RELATED LATEST NEWS

Top Headlines

ರಮೇಶ್ ರೆಡ್ಡಿ ನಿರ್ಮಾಣದ “ಘುಸ್ಪೈಥಿಯಾ” ಚಿತ್ರ ಆ.9ರಂದು ತೆರೆಗೆ..!

ನಿರ್ಮಾಪಕ ರಮೇಶ್ ರೆಡ್ಡಿ ಅವರು ಕನ್ನಡ ಚಿತ್ರರಂಗದಲ್ಲಿ ‘ಉಪ್ಪು ಹುಳಿ ಖಾರ’, ‘ನಾತಿಚರಾಮಿ’, ‘ಪಡ್ಡೆಹುಲಿ’, ‘100’, ‘ಗಾಳಿಪಟ 2’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಬಹು ನಿರೀಕ್ಷಿತ “45”

Live Cricket

Add Your Heading Text Here