Download Our App

Follow us

Home » ರಾಜಕೀಯ » ಸಚಿವ ಜಮೀರ್ ಆಪ್ತ, ಕಾಂಗ್ರೆಸ್ ನಾಯಕನ ಮನೆ ಮೇಲೆ ಬೆಳ್ಳಂಬೆಳಗ್ಗೆ ಐಟಿ ರೇಡ್..!

ಸಚಿವ ಜಮೀರ್ ಆಪ್ತ, ಕಾಂಗ್ರೆಸ್ ನಾಯಕನ ಮನೆ ಮೇಲೆ ಬೆಳ್ಳಂಬೆಳಗ್ಗೆ ಐಟಿ ರೇಡ್..!

ಬೆಂಗಳೂರು : ಬೆಳ್ಳಂಬೆಳಗ್ಗೆ ಕಾಂಗ್ರೆಸ್ ನಾಯಕನಿಗೆ ಬಿಗ್ ಶಾಕ್ ಎದುರಾಗಿದೆ. ಸಚಿವ ಜಮೀರ್ ಅಹಮದ್ ಆಪ್ತ ಹಾಗೂ ಮಾಜಿ ಎಂಎಲ್ಸಿ ವೇಣುಗೋಪಾಲ್ ಮನೆ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಜೆ.ಪಿನಗರದಲ್ಲಿರುವ ವೇಣುಗೋಪಾಲ್ ಅವರ ಮನೆ ಮೇಲೆ 15 ಅಧಿಕಾರಿಗಳ ತಂಡ ದಾಳಿ ನಡೆಸಿದೆ. 3 ಇನ್ನೋವಾ ಕಾರಿನಲ್ಲಿ ಬಂದಿದ್ದ ಐಟಿ ಅಧಿಕಾರಿಗಳು ಬೆಳಗ್ಗೆ 6 ಗಂಟೆಯಿಂದಲೇ ದಾಳಿ ನಡೆಸಿ, ವಿವಿಧ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.

ಐಟಿ ಟೀಂ ಯಾವುದೇ ಸದ್ದು ಮಾಡದೇ ಮೈನ್ ಗೇಟ್​​ನಿಂದ ಒಳ ಹೋಗಿತ್ತು, ಮಾಜಿ ಎಂಎಲ್ಸಿ ವೇಣುಗೋಪಾಲ್ ನಿದ್ರೆಯಿಂದ ಮೇಲೇಳುವ ಮುನ್ನವೇ ಐಟಿ ಶಾಕ್ ನೀಡಿದೆ.

ಇದನ್ನೂ ಓದಿ : ಜೆಕೆ ಜನ್ಮದಿನದಂದೇ ‘ದಿ ವೀರ್’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್..!

Leave a Comment

DG Ad

RELATED LATEST NEWS

Top Headlines

ರಮೇಶ್ ರೆಡ್ಡಿ ನಿರ್ಮಾಣದ “ಘುಸ್ಪೈಥಿಯಾ” ಚಿತ್ರ ಆ.9ರಂದು ತೆರೆಗೆ..!

ನಿರ್ಮಾಪಕ ರಮೇಶ್ ರೆಡ್ಡಿ ಅವರು ಕನ್ನಡ ಚಿತ್ರರಂಗದಲ್ಲಿ ‘ಉಪ್ಪು ಹುಳಿ ಖಾರ’, ‘ನಾತಿಚರಾಮಿ’, ‘ಪಡ್ಡೆಹುಲಿ’, ‘100’, ‘ಗಾಳಿಪಟ 2’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಬಹು ನಿರೀಕ್ಷಿತ “45”

Live Cricket

Add Your Heading Text Here