ಹಾಸನ : ಹಾಸನದಲ್ಲಿ ಮೀನು ಹಿಡಿಯಲು ಹೋದ ನಾಲ್ವರು ಬಾಲಕರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಆಲೂರು ತಾಲ್ಲೂಕಿನ ಕದಾಳು ಸಮೀಪದ ಮುತ್ತಿಗೆಯಲ್ಲಿ ನಡೆದಿದೆ. 13 ವರ್ಷದ ಜೀವನ್, 11 ವರ್ಷದ ಸಾತ್ವಿಕ್, 12ವರ್ಷದ ವಿಶ್ವ ಮತ್ತು ಪೃಥ್ವಿ ಸಾವನ್ನಪ್ಪಿದ್ದ ಬಾಲಕರು.
ಶಾಲೆಗೆ ರಜೆ ಇರುವುದರಿಂದ ನಾಲ್ವರು ಬಾಲಕರು ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ಒಬ್ಬರನ್ನೊಬ್ಬರು ರಕ್ಷಿಸುವ ಭರದಲ್ಲಿ ಭೀಕರ ದುರಂತ ಸಂಭವಿಸಿದೆ. ಇನ್ನು ಬಾಲಕರ ಶವಗಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಸ್ಟಾರ್ ಸುವರ್ಣದಲ್ಲಿ ಬರ್ತಿದೆ ಬ್ರ್ಯಾಂಡ್ ನ್ಯೂ ಸೆಲೆಬ್ರಿಟಿ ಗೇಮ್ ಶೋ ‘Huu ಅಂತೀಯಾ…Uhuu ಅಂತೀಯಾ’..!
Post Views: 280