Download Our App

Follow us

Home » ಜಿಲ್ಲೆ » ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದ – ಉದ್ವಿಗ್ನ ಪರಿಸ್ಥಿತಿ..!

ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದ – ಉದ್ವಿಗ್ನ ಪರಿಸ್ಥಿತಿ..!

ಮಂಡ್ಯ : ಮಂಡ್ಯ ತಾಲೂಕಿನ ಕೆರಗೋಡು ಹನುಮಧ್ವಜ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮ ಧ್ವಜ ತೆರವಿಗೆ ಅಧಿಕಾರಿಗಳು ರಾತ್ರೋ ರಾತ್ರಿ ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಸಿಡಿದೆದಿದ್ದಾರೆ. ಹನುಮ ಧ್ವಜ ತೆರವು ಮಾಡದಂತೆ ನೂರಾರು ಜನರು ಜಮಾಯಿಸಿದ್ದಾರೆ.

ಕೆರೆಗೋಡು ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಮಂಡ್ಯ ಎಸಿ ಶಿವಮೂರ್ತಿ, ತಹಸಿಲ್ದಾರ್ ಶಿವಕುಮಾರ್ ಬಿರಾದರ್ ಆಗಮಿಸಿ  ಧ್ವಜ‌ ತೆರವಿಗೆ ಯತ್ನಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ಯಾಸ್ ಕಟರ್ ನಲ್ಲಿ ಧ್ವಜಕಂಬ ತೆರವಿಗೆ ಯತ್ನ ನಡೆಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ಆತಂಕದಿಂದ ಗ್ರಾಮಸ್ಥರು ಜಮಾಯಿಸಿದ್ದಾರೆ. ಜೈ ಶ್ರೀರಾಮ್, ಜೈ ಹನುಮ ಘೋಷಣೆ‌ ಕೂಗಿ ಗ್ರಾಮಸ್ಥರು ಪ್ರತಿಭಟನೆ‌ ಆರಂಭಿಸಿದ್ದಾರೆ.

ಪೊಲೀಸರ ಜೊತೆ ಗ್ರಾಮಸ್ಥರ ಮಾತಿನ ಚಕಮಕಿ ನಡೆದಿದ್ದು, ಮಹಿಳೆಯರು ಹಾಗೂ ಯುವಕರು ಧ್ವಜದ ಕಂಬದ ಬಳಿಯೇ ಕುಳಿತಿದ್ದಾರೆ. ಕೆರೆಗೋಡು ಗ್ರಾಮಸ್ಥರಿಗೆ ಸಾಥ್ ನೀಡಲು ಹಲವೆಡೆಯಿಂದ‌ ಹಿಂದೂ ಕಾರ್ಯಕರ್ತರ ಆಗಮಿಸಿದ್ದಾರೆ. ತಾಕತ್ತಿದ್ದರೇ ಹನುಮ ಧ್ವಜ ಹಾರುವುದನ್ನ‌ ತಡೆಯಲು ಬನ್ನಿ, ಧರ್ಮಕ್ಕಾಗಿ ಕುದಿಯದ ರಕ್ತ, ರಕ್ತವೇ ಅಲ್ಲ. ಕಳ್ಳರಂತೆ ಧ್ವಜ ಬಿಚ್ಚಲು ಬಂದ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದ್ದಾರೆ.
ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಶಾಸಕ, ಸಚಿವರ ಷಡ್ಯಂತ್ರದಿಂದ ವಿವಾದ ಸೃಷ್ಟಿಲಾಗಿದೆ ಎಂದು  ಆರೋಪ ಮಾಡಲಾಗಿದೆ. ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಹನುಮ ಧ್ವಜ ಇಳಿಸಲು ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಕಿಡಿ ಕಾರಿದ್ದಾರೆ.
 
ಘಟನೆಯ ವಿವರ : ಅಯೋಧ್ಯೆ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ನೆನೆಪಾಗಿ ಧ್ವಜಸ್ಥಂಭ ನಿರ್ಮಿಸಲಾತ್ತು. ಗ್ರಾಮಸ್ಥರು 108 ಅಡಿ ಧ್ವಜಸ್ಥಂಭದಲ್ಲಿ ಕೇಸರಿ ಬಣ್ಣದ ಹನುಮ ಧ್ವಜ ಹಾರಿಸಿದ್ದರು. ಕೆಲವರಿಂದ ವಿರೋಧ ಕೇಳಿ ಬಂದ ಬಳಿಕ ಧ್ವಜ ಹಾರಾಟ ಬಗ್ಗೆ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. 22 ಸದಸ್ಯ ಬಲದ ಪೈಕಿ ಹನುಮ ಧ್ವಜ ಹಾರಾಟಕ್ಕೆ 20 ಸದಸ್ಯರು ಬೆಂಬಲಿಸಿದ್ದರು. ಗ್ರಾ.ಪಂ. ಬಹುಮತ ಪಡೆದು ನಡಾವಳಿ ರಚಿಸಿ, ವಿವಾದ ಇತ್ಯರ್ಥ ಮಾಡಿತ್ತು. ಕೆಲದಿನಗಳ ನಂತರ ಧ್ವಜ ಇಳಿಸಲು ಮೇಲಧಿಕಾರಿಗಳ ಸೂಚನೆ ನೀಡಿದ್ದರು. ತಾ.ಪಂ EO ವೀಣಾ ಹಿರಿಯ ಅಧಿಕಾರಗಳ ಮೌಖಿಕ ಆದೇಶದಂತೆ ಧ್ವಜಸ್ಥಂಭ ತೆರವು ಮಾಡಲು ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಸರ್ಕಾರಿ ಜಾಗದಲ್ಲಿ ಧ್ವಜಸ್ಥಂಭ ನಿರ್ಮಾಣ ಕಾರಣ ನೀಡಿ ತೆರವು ಮಾಡಲು ಸೂಚನೆ ನೀಡಿದ್ದರು. EO ಮಾತಿಗೆ ಸಿಟ್ಟಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here