ಬೆಂಗಳೂರು : ನೆಮ್ಮದಿಯಾಗಿ ಮಲಗಿದ್ದ ಬೀದಿ ನಾಯಿಯ ಮೇಲೆ ಚಾಲಕನೊಬ್ಬ ಕಾರು ಹರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಯುನಿಟಿ ಬಿಲ್ಡಿಂಗ್, ಸಿಲ್ವರ್ ಜೂಬ್ಲಿ ಬ್ಲಾಕ್ ಮಿಷನ್ ರೋಡ್ ಬಳಿ 25 ನೇ ತಾರೀಖಿನಂದು ಈ ಘಟನೆ ನಡೆದಿದ್ದು, ಚಾಲಕ ನಾಯಿ ಮೇಲೆ ಕಾರು ಹತ್ತಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶ್ವಾನವು ನರಳಾಡಿ ನರಳಾಡಿ ಕೊನೆಯುಸಿರೆಳೆದಿದೆ. ಪಾರ್ಕಿಂಗ್ ಜಾಗದಲ್ಲಿ ನಾಯಿ ತನ್ನ ಪಾಡಿಗೆ ಮಲಗಿತ್ತು. ಕಾರಿನ ಮುಂದಿನ ಟಯರ್ ನಾಯಿಯ ಮೇಲೆ ಹರಿದಿದೆ. ಕಾರು ಹತ್ತಿ ಸ್ವಲ್ಪ ಸಮಯದಲ್ಲೇ ನಾಯಿ ಪ್ರಾಣ ಬಿಟ್ಟಿದೆ. ಈ ಬಗ್ಗೆ ಸದ್ಯ ಯಾವುದೇ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ : ಬೆಂಗಳೂರು : ಬನಶಂಕರಿ ಸರ್ಕಾರಿ ಹಾಸ್ಟೆಲ್ನ ಆಹಾರದಲ್ಲಿ ಜಿರಳೆ ಪತ್ತೆ..!
Post Views: 238