ಬೆಂಗಳೂರು : ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಜಿಮ್ ಟ್ರೈನರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ ಮೂಲದ 28 ವರ್ಷದ ಅಮಿತ್ ಕುಮಾರ್ ಆತ್ಮಹತ್ಯೆಗೆ ಶರಣಾದ ದುರ್ದೈವಿ.
10 ವರ್ಷಗಳಿಂದ ಬೆಂಗಳೂರಿನಲ್ಲಿದ್ದ ಬಿಹಾರ ಮೂಲದ ಅಮಿತ್, ಜಿಮ್ ಪಕ್ಕ ಮನೆ ಮಾಡಿಕೊಂಡಿದ್ದ ಹಾಸನ ಮೂಲದ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದನು. ಆದರೆ ಮದುವೆಯಾದ ಬಳಿಕ ಪತ್ನಿ ಫ್ರೆಂಡ್ಸ್, ಮೊಬೈಲ್ ಅಂತಾ ಬ್ಯುಸಿಯಾಗಿ ಪತಿಯನ್ನು ನಿರ್ಲಕ್ಷಿಸುತ್ತಿದ್ದಳು. ಇದೇ ವಿಚಾರಕ್ಕೆ ಆಗಾಗ ಪತಿ-ಪತ್ನಿ ನಡುವೆ ಗಲಾಟೆ ನಡೆಯುತ್ತಿತ್ತು. 3 ತಿಂಗಳ ನಂತರ ವೈಮನಸ್ಸು ಜೋರಾದ ಹಿನ್ನೆಲೆಯಲ್ಲಿ ಪತಿಯನ್ನು ತೊರೆದು ಪತ್ನಿ ತವರು ಸೇರಿದ್ದಳು.
ಆದರೆ ಅಮಿತ್ ಪತ್ನಿಗೆ ಪದೇ-ಪದೇ ಕಾಲ್ ಮಾಡಿ ಮನೆಗೆ ವಾಪಸ್ ಬರಲು ಹೇಳುತ್ತಿದ್ದನು. ಅಂತೆಯೇ ನಿನ್ನೆ ಪತ್ನಿಗೆ ವಿಡಿಯೋ ಕಾಲ್ ಮಾಡಿ ಹಗ್ಗ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಲು ಯತ್ನಿಸಿದ್ದಾನೆ. ಈ ವೇಳೆ ಮೊಬೈಲ್ ಕೈಯಿಂದ ತಪ್ಪಿ ನೆಲಕ್ಕೆ ಬಿದ್ದಿದೆ. ಆಗ ಮೊಬೈಲ್ ಹಿಡಿದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಖುರ್ಚಿಯಿಂದ ಕಾಲು ಜಾರಿ ಕೈಲಿದ್ದ ಕುಣಿಕೆ ಟೈಟ್ ಆಗಿ ಅಮಿತ್ಕುಮಾರ್ ಪ್ರಾಣ ಬಿಟ್ಟಿದ್ದಾನೆ. ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ರಾಖಿ ಸಾವಂತ್ಗೆ ಕ್ಯಾನ್ಸರ್ ? ಮಾಜಿ ಪತಿ ಬಾಯ್ಬಿಟ್ರು ಅಸಲಿ ಸತ್ಯ..