ಚಿಕ್ಕಮಗಳೂರು : ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಅವರಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ. ಕಣ್ಣನ್ ಅವರಿಗೆ ನೀಡುತ್ತಿದ್ದ ವೇತನವನ್ನು ತಡೆ ಹಿಡಿಯುವುದರ ಜೊತೆಗೆ ಕಳೆದ 10 ವರ್ಷದ ಸಂಬಳವನ್ನು ವಾಪಸ್ ಮಾಡುವಂತೆ ಸೂಚನೆ ನೀಡಲಾಗಿದೆ.
ಕಲ್ಯಾಣ ಕೋದಂಡ ರಾಮ ದೇಗುಲದ ಪ್ರಧಾನ ಅರ್ಚಕರಾಗಿ ಕಳೆದ 50 ವರ್ಷಗಳಿಂದ ಕೆಲಸ ಮಾಡ್ತಿದ್ದರು, ದೇಗುಲಕ್ಕೆ ಬರುವ ಆದಾಯಕ್ಕಿಂತ ವೇತನ ಹೆಚ್ಚು ಅನ್ನೋ ಕಾರಣಕ್ಕೆ ಈ ನೋಟಿಸ್ ನೀಡಲಾಗಿದೆ.
ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು ಸಂಬಳವಾಗಿ 7,500 ರೂಪಾಯಿ ಜಮೆ ಆಗುತ್ತಿತ್ತು. ಈ 7,500 ರೂಪಾಯಿ ನೀಡಿದ ಸಂಬಳದಲ್ಲಿ 4,500 ವಾಪಸ್ ನೀಡಲು ಚಿಕ್ಕಮಗಳೂರು ತಹಶೀಲ್ದಾರ್ ಸುಮಂತ್ ಅವರು ನೋಟಿಸ್ ನೀಡಿದ್ದಾರೆ.
ದೇವಾಲಯದ ಆದಾಯ ಕಡಿಮೆ, ಸಂಬಳ ಹೆಚ್ಚು ನೀಡಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಡಳಿತ ಅರ್ಚಕರಿಗೆ ನೀಡುತ್ತಿದ್ದ ಸಂಬಳವನ್ನ ವಾಪಸ್ ಕೇಳಿದೆ. ವೇತನ ತಡೆಹಿಡಿದು ನೋಟಿಸ್ ನೀಡಲಾಗಿದ್ದು, 4,500 ರೂಪಾಯಿಯಂತೆ 10 ವರ್ಷದ ಹಣವನ್ನ ವಾಪಸ್ ನೀಡಲು ಸೂಚನೆ ನೀಡಲಾಗಿದೆ. ಅಂದ್ರೆ 4 ಲಕ್ಷ 74 ಸಾವಿರ ರೂಪಾಯಿ ವಾಪಸ್ ನೀಡುವಂತೆ ಸೂಚಿಸಲಾಗಿದೆ.
ಕನ್ನಡದ ಪಂಡಿತ, ಸಾಹಿತಿ, ವಾಗ್ಮಿ ಎಂದೇ ಹಿರೇಮಗಳೂರು ಕಣ್ಣನ್ ಅವರು ಖ್ಯಾತಿ ಪಡೆದಿದ್ದಾರೆ. ಕಳೆದ 50 ವರ್ಷಗಳಿಂದ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಕಣ್ಣನ್ ಅವರಿಗೆ ಸರ್ಕಾರದ ನೋಟಿಸ್ ಆತಂಕವನ್ನುಂಟು ಮಾಡಿದೆ. ಕಣ್ಣನ್ ವೇತನ ವಾಪಸ್ ಕೇಳಿದ್ದಕ್ಕೆ ಹಲವರಿಂದ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಹಿಟ್ ಅಂಡ್ ರನ್ ಪ್ರಕರಣ : 400 ಮೀಟರ್ನಷ್ಟು ದೂರ ಬಾನೆಟ್ ಮೇಲೆ ಎಳೆದೊಯ್ದ ಡ್ರೈವರ್..!