Download Our App

Follow us

Home » ಅಪರಾಧ » ಬೆಂಗಳೂರಲ್ಲಿ ಹಿಟ್ ಅಂಡ್ ರನ್ ಪ್ರಕರಣ : 400 ಮೀಟರ್​​ನಷ್ಟು ದೂರ ಬಾನೆಟ್ ಮೇಲೆ ಎಳೆದೊಯ್ದ ಡ್ರೈವರ್​​..!

ಬೆಂಗಳೂರಲ್ಲಿ ಹಿಟ್ ಅಂಡ್ ರನ್ ಪ್ರಕರಣ : 400 ಮೀಟರ್​​ನಷ್ಟು ದೂರ ಬಾನೆಟ್ ಮೇಲೆ ಎಳೆದೊಯ್ದ ಡ್ರೈವರ್​​..!

ಬೆಂಗಳೂರು : ಬೆಂಗಳೂರಲ್ಲಿ ಹಿಟ್ ಅಂಡ್ ರನ್ ಪ್ರಕರಣ ನಡೆದಿದೆ. ಕಾರು ಬಾನೆಟ್​ ಮೇಲೆ ಕುಳಿತವನ ಎಳೆದೊಯ್ದು ಪುಂಡಾಟ ಮಾಡಿದ್ದಾರೆ. ಬಾನೆಟ್ ಮೇಲೆ ಮಲಗಿದ್ರೂ ಕಾರು ಚಲಾಯಿಸಿ ಹುಚ್ಚಾಟ ನಡೆಸಿದ್ದಾರೆ. ಡ್ರೈವರ್​​ 400 ಮೀಟರ್​​ನಷ್ಟು ದೂರ ಬಾನೆಟ್ ಮೇಲೆ ಎಳೆದೊಯ್ದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಾರು ಡ್ರೈವರ್​​​ ಮೊಹಮ್ಮದ್ ಮುನೀರ್ ಎಂಬಾತನಿಂದ ಈ ಕೃತ್ಯ ನಡೆದಿದ್ದು, ಕ್ಯಾಬ್ ಚಾಲಕ ಅಶ್ವತ್ಥ್​​​​ನನ್ನು ಮುನೀರ್​​ ಬಾನೆಟ್ ಮೇಲೆ ಹೊತ್ತೊಯ್ದಿದ್ದಾನೆ.  ಜನವರಿ 15ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸರ್ಕಲ್ ಮಾರಮ್ಮ ವೃತ್ತದಲ್ಲಿ ಕಿರಿಕ್​​​ ನಡೆದಿತ್ತು.

ಕಾರ್​ ನಿಲ್ಲಿಸದೇ ಎಸ್ಕೇಪ್​ ಆಗಲು ಕಾರ್​ ಡ್ರೈವರ್​​ ಯತ್ನಿಸಿದ್ದು, ಬ್ಯಾನೆಟ್ ಮೇಲೆ ಕುಳಿತು ಕ್ಯಾಬ್ ಚಾಲಕ ಅಶ್ವತ್ಥ್ ತಡೆದಿದ್ದರು. 18ನೇ ಕ್ರಾಸ್ ಸಿಗ್ನಲ್​ವರೆಗೂ ಬ್ಯಾನೆಟ್ ಮೇಲೆ ಎಳೆದೊಯ್ದಿದ್ದು, ಸಡನ್ ಆಗಿ ಬ್ರೇಕ್ ಹಾಕಿ ಕೆಳಗೆ ಬಿಳಿಸಲು ಯತ್ನಿಸಿದ್ದಾನೆ.

ಈ ವೇಳೆ ಸ್ಥಳೀಯರು ಕಾರ್​ ಅಡ್ಡಗಟ್ಟಿ ಮುನೀರ್​​ನನ್ನು ಹಿಡಿದಿದ್ದರು, ಮಲ್ಲೇಶ್ವರಂ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದು ವಶಕ್ಕೆ ಪಡೆದಿದ್ದರು. ಪೊಲೀಸರು NCR ದಾಖಲು ಮಾಡಿ ಡ್ರೈವರ್​ಗಳನ್ನು ಬಿಟ್ಟು ಕಳಿಸಿದ್ದರು.

ಇದನ್ನೂ ಓದಿ : ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : 5 ಕೋಟಿ ರೂ. ವ್ಯಾಜ್ಯ ಶುಲ್ಕವಾಗಿ ಕರ್ನಾಟಕಕ್ಕೆ ಪಾವತಿಸಲು ಆದೇಶ..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಉಡುಪಿ : ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆ ಸಾ*ವು..!

ಉಡುಪಿ : 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶವಿದೆ. ಹಾಗಾಗಿ ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಪಿ.ಯಶೋಧಾ ನಾರಾಯಣ ಉಪಾಧ್ಯ

Live Cricket

Add Your Heading Text Here