ಗದಗ : ಸೈಡ್ಗೆ ಹೋಗು ಎಂದಿದ್ದಕ್ಕೆ ಯುವಕನೊಬ್ಬ ಬಸ್ಸಿನ ಗಾಜು ಪೀಸ್ ಪೀಸ್ ಮಾಡಿದ ಘಟನೆ ಗದಗದ ಲಕ್ಷ್ಮೇಶ್ವರದಲ್ಲಿ ನಡೆದಿದೆ. ಸೂರಣಗಿ ಗ್ರಾಮದ ಪಟ್ಟಪ್ಪ ಅನ್ನೋ ಯುವಕ ಈ ಕೃತ್ಯವೆಸಗಿದ್ದಾನೆ.
ಕ್ಷುಲ್ಲಕ ಕಾರಣಕ್ಕೆ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಜೊತೆ ಕಿರಿಕ್ ಮಾಡಿ ಪುಂಡಾಟ ಮೆರೆದಿದ್ದಾನೆ. ಗುತ್ತಲ ಪಟ್ಟಣದಿಂದ ಸೂರಣಗಿ ಮಾರ್ಗವಾಗಿ ಲಕ್ಷ್ಮೇಶ್ವರಕ್ಕೆ ಬರುತ್ತಿದ್ದ ಬಸ್ ಗ್ರಾಮದ ಮಧ್ಯದಲ್ಲಿ ಕಿರಿದಾದ ರಸ್ತೆಯಲ್ಲಿ ಬರಬೇಕಿತ್ತು. ಈ ವೇಳೆ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ ಯುವಕ ಪುಟ್ಟಪ್ಪ ಎಷ್ಟೇ ಹಾರ್ನ್ ಹೊಡೆದರೂ ಸೈಡ್ ಬಿಡದೇ ಕುಡಿದ ಮತ್ತಿನಲ್ಲಿ ಬಸ್ ಮೇಲೆ ಕಲ್ಲು ತೂರಿದ್ದಾನೆ.
ಸದ್ಯ ಯುವಕ ಪರಾರಿಯಾಗಿದ್ದು, ಯುವಕ ಮಾಡಿದ ತಪ್ಪಿಗೆ ಆತನ ತಂದೆಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಬಿಜೆಪಿ ಟಿಕೆಟ್ ಸಿಗದಿದ್ರೂ ಮಂಡ್ಯದಲ್ಲೇ ಸುಮಲತಾ ಸ್ಪರ್ಧೆ? ಇಂದು ಆಪ್ತರ ಜೊತೆ ಮಹತ್ವದ ಸಭೆ..!
Post Views: 376