Download Our App

Follow us

Home » ರಾಜಕೀಯ » ಬಿಜೆಪಿ ಟಿಕೆಟ್ ಸಿಗದಿದ್ರೂ ಮಂಡ್ಯದಲ್ಲೇ ಸುಮಲತಾ ಸ್ಪರ್ಧೆ? ಇಂದು ಆಪ್ತರ ಜೊತೆ ಮಹತ್ವದ ಸಭೆ..!

ಬಿಜೆಪಿ ಟಿಕೆಟ್ ಸಿಗದಿದ್ರೂ ಮಂಡ್ಯದಲ್ಲೇ ಸುಮಲತಾ ಸ್ಪರ್ಧೆ? ಇಂದು ಆಪ್ತರ ಜೊತೆ ಮಹತ್ವದ ಸಭೆ..!

ಬೆಂಗಳೂರು : ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಿಂದ ಸ್ಪರ್ಧೆಯ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಬಿಜೆಪಿ ಟಿಕೆಟ್ ಸಿಗದಿದ್ದರೂ ಸುಮಲತಾ ಮಂಡ್ಯದಲ್ಲೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಈ ಸುದ್ದಿಯ ಬೆನ್ನಲ್ಲೇ  ಇಂದು ಸಂಜೆಯೇ ಸುಮಲತಾ ಬೆಂಬಲಿಗರ ಸಭೆ ನಡೆಸುತ್ತಿದ್ದಾರೆ.

ಸುಮಲತಾ ಅವರು ಬೆಂಗಳೂರಿನಲ್ಲಿ ಬಿಜೆಪಿಯೇತರ ಬೆಂಬಲಿಗರ ಸಭೆ ಕರೆದಿದ್ದಾರೆ. ಸಂಜೆ 4 ಗಂಟೆಗೆ ಜೆ.ಪಿ.ನಗರ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಯಲಿದ್ದು, 50ಕ್ಕೂ ಹೆಚ್ಚು ಆಪ್ತರ ಜತೆ ಸುಮಲತಾ ಸಭೆ ನಡೆಸಲಿದ್ದಾರೆ. ಮಂಡ್ಯ ಸೀಟು ಜೆಡಿಎಸ್ ಪಾಲಾದ್ರೆ ಸುಮಲತಾ ಪಕ್ಷೇತರವಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಈ ಬಗ್ಗೆ ಇಂದು ಸಂಜೆ ಸುಮಲತಾ ಟೀಂ ನಿರ್ಧಾರ ಮಾಡಲಿದೆ. ಸುಮಲತಾ ಸ್ಪರ್ಧಿಸಿದ್ರೆ ಮಂಡ್ಯದಲ್ಲಿ ಜೆಡಿಎಸ್​ಗೆ ಭಾರೀ ಸಂಕಷ್ಟ ಎದುರಾಗಲಿದೆ.

ಪಕ್ಷೇತರ ಸ್ಪರ್ಧೆಯ ಬಗ್ಗೆ ಸುಮಲತಾ ಅವರ ಆಪ್ತ ಹನಕೆರೆ ಶಶಿಕುಮಾರ್ ಮಾತನಾಡಿ, ಸುಮಲತಾ ಅವರು ಮಂಡ್ಯ ಬಿಟ್ಟು ಹೋಗುವುದಿಲ್ಲ, ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿಯೇ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಸ್ಪಾ ಮೇಲೆ ಪೊಲೀಸರ ದಾಳಿ..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಬೈಕ್ ಸವಾರನ ಶವವನ್ನು 18 ಕಿ.ಮೀ​ ಎಳೆದೊಯ್ದು ಪರಾರಿಯಾದ ಕಾರು ಚಾಲಕ..!

ಕಾರು ಚಾಲಕನೊಬ್ಬ ಬೈಕ್​ಗೆ ಡಿಕ್ಕಿ ಹೊಡೆದು ಸವಾರನನ್ನು ಬರೋಬ್ಬರಿ 18 ಕಿಲೋ. ಮೀಟರ್​ ದೂರಕ್ಕೆ ಎಳೆದೊಯ್ದು ಪರಾರಿಯಾಗಿರುವ ಘಟನೆ ಅನಂತಪುರದಲ್ಲಿ ನಡೆದಿದೆ. ಈ ಘಟನೆ ಭಾನುವಾರ ರಾತ್ರಿ

Live Cricket

Add Your Heading Text Here