ಬೆಂಗಳೂರು : ಹೆಚ್ಚಿನ ಲಾಭ ಕೊಡೋದಾಗಿ ನಂಬಿಸಿ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿರುವ ಘಟನೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಕೇಸ್ ಸಂಬಂಧ 4 ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಪ್ರತಾಪ್ ರೆಡ್ಡಿ, ಒಬಳೇಶ್, ಮಣಿ ಮತ್ತು ಗೋಪಿ ಬಂಧಿತ ಅರೋಪಿಗಳಾಗಿದ್ದು, ಈ ಗ್ಯಾಂಗ್ ಕೆ.ಆರ್.ಪುರಂನಲ್ಲಿ ಎಸ್ ಫೈ ಎಸ್ ಎಂದು ಕಂಪನಿ ಮಾಡಿಕೊಂಡಿದ್ದರು. ಆಂಧ್ರ ಮತ್ತು ಕರ್ನಾಟಕದ ಜನರಿಂದ ಹೂಡಿಕೆ ಮಾಡಿಸಿಕೊಂಡಿದ್ದಾರೆ. ತನಿಖೆ ವೇಳೆ ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ.
ಒಂದು ಲಕ್ಷ ಹೂಡಿಕೆ ಮಾಡಿದ್ರೆ ತಿಂಗಳಿಗೆ ಹತ್ತೊಬ್ಬಂತು ಪರ್ಸೆಂಟ್ ಲಾಭ ಕೊಡುವುದಾಗಿ ನಂಬಿಸ್ತಿದ್ರು. ಪ್ರಾರಂಭದಲ್ಲಿ ಹಣ ವಾಪಸ್ಸು ಕೊಟ್ಟಿದ್ದು, ನಂತರ ಹಣ ಕೊಡದೆ ಹರಿಯಾಣದಲ್ಲಿ ಹೂಡಿಕೆ ಮಾಡಿ ಲಾಭ ಕೊಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಆಂಧ್ರದ ಸಂದಡಿ ನರಸಿಮ್ಮ ರೆಡ್ಡಿ ಎಂಬುವವರು ಕಾಟನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣದಲ್ಲಿ ನಾಲ್ಕು ಬ್ಯಾಂಕ್ ಅಕೌಂಟ್ಗಳ ಮೂಲಕ ಮೂವತ್ತು ಕೋಟಿ ವ್ಯವಹಾರ ಪತ್ತೆಯಾಗಿದೆ. ಸದ್ಯ ಯಾವ ಯಾವ ಅಕೌಂಟ್ಗೆ ಹಣ ಹೋಗಿದೆ ಎಂದು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ತನಿಖೆ ವೇಳೆ ಹೊರಗೆ ಇದ್ದು ಜನರ ಕೈಗೆ ಸಿಕ್ಕಿದ್ರೆ ಕಷ್ಟ ಅಂತ ಆರೋಪಿ ಪ್ರತಾಪ್ ಕೊಲಾರದಲ್ಲಿ 307 ಕೇಸ್ ಒಂದರಲ್ಲಿ ಅರೆಸ್ಟ್ ಆಗಿ ಜೈಲಿನಲ್ಲಿದ್ದ. ಸದ್ಯ ಪ್ರತಾಪ್ನನ್ನು ಬಾಡಿ ವಾರೆಂಟ್ ಮೂಲಕ ಕರೆದುಕೊಂಡು ಬಂದು ವಿಚಾರಣೆ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ವೆಂಕಟೇಶ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು.
ಹಾಗಾಗಿ ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆ ಎಂದು ವೆಂಕಟೇಶ ಆರೋಪಿಸಿದ್ದ. ಆದರೆ ನೋಟಿಸ್ ನೀಡಿಯೇ ವಿಚಾರಣೆ ನಡೆಸಿದ್ದೇವೆ ಎಂದು ಪೊಲೀಸರಿಂದ ಮಾಹಿತಿ ಲಭ್ಯವಾಗಿದೆ. ಇದೀಗ ಕಾಟನ್ ಪೇಟೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಗುಲಾಬಿ ಬಣ್ಣದ ವಾಟ್ಸಪ್ ಬಳಕೆದಾರರೇ ಹುಷಾರ್ : ಕರ್ನಾಟಕ ರಾಜ್ಯ ಪೊಲೀಸರಿಂದ ಅಲರ್ಟ್ ಸಂದೇಶ..!