ಬೆಂಗಳೂರು : ಗುಲಾಬಿ ಬಣ್ಣದ ವಾಟ್ಸಪ್ ಬಳಸೋಕು ಮುನ್ನ ಹುಷಾರ್ ಆಗಿರಿ. ಯಾಕೆಂದರೆ ಗುಲಾಬಿ ಬಣ್ಣದ ವಾಟ್ಸಪ್ ಬಿಟ್ಟು ಸೈಬರ್ ಖದೀಮರು ವಂಚನೆಗೆ ಮುಂದಾಗಿದ್ದಾರೆ.
ಹಾಗಾಗಿ ಯಾವುದೇ ಕಾರಣಕ್ಕೂ ಗುಲಾಬಿ ಬಣ್ಣದ ವಾಟ್ಸಪ್ ಬಳಸದಂತೆ ಕರ್ನಾಟಕ ರಾಜ್ಯ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್ಅಪ್ ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಕದಿಯಲು ಇಲ್ಲವೇ ಮೊಬೈಲ್ ಹ್ಯಾಕ್ ಮಾಡಲು ಬಳಸಿಕೊಳ್ಳುತ್ತಾರೆ. ಜಾಗೃತೆಯಿಂದಿರಿ ಎಂದು ಸೋಶಿಯಲ್ ಮೀಡಿಯಾ ಮೂಲಕ ಪೊಲೀಸರು ಅಲರ್ಟ್ ಮೆಸೇಜ್ ರವಾನಿಸಿದ್ದಾರೆ.
ಗುಲಾಬಿ ಬಣ್ಣದ ವಾಟ್ಸಪ್ ಬಳಸಿದರೆ ಮೊಬೈಲ್ ಸಂಪೂರ್ಣ ಡೇಟಾ ಹ್ಯಾಕರ್ಸ್ ಕೈ ಸೇರುತ್ತೆ. ನಿಮ್ಮ ಮೊಬೈಲ್ ನಲ್ಲಿನ ಫೋಟೋ, ಬ್ಯಾಂಕ್ ಖಾತೆಗಳ ವಿವರ, ಪಾಸ್ ವರ್ಡ್, ಕಾಂಟ್ಯಾಕ್ಟ್ ಮಾಹಿತಿ ಹಾಗೂ ಮೆಸೇಜ್ ಹ್ಯಾಕರ್ ಕೈ ಸೇರುತ್ತದೆ. ಹೀಗಾಗಿ ಯಾರೂ ಕೂಡ ಈ ಪಿಂಕ್ ವಾಟ್ಸಪ್ ನ ಬಳಕೆ ಮಾಡದಂತೆ ಕರ್ನಾಟಕ ಪೊಲೀಸರು ಮಾಹಿತಿ ನೀಡಿದ್ದಾರೆ. ಒಂದು ವೇಳೆ ಯಾವುದೇ ರೀತಿಯ ಸೈಬರ್ ವಂಚನೆ ಆದ್ರೆ 1930 ಸಂಖ್ಯೆಗೆ ಕರೆ ಮಾಡಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ : ಅಯೋಧ್ಯೆಗೆ ಹರಿದುಬಂದ ಭಕ್ತ ಸಾಗರ : ಪ್ರಾಣ ಪ್ರತಿಷ್ಠಾಪನೆ ಮಾರನೇ ದಿನವೇ ರಾಮಲಲ್ಲಾನ ದರ್ಶನ ಪಡೆದ 3 ಲಕ್ಷ ಭಕ್ತರು..!