ರಾಯಚೂರು : ದೇವದುರ್ಗ JDS ಶಾಸಕಿ ಪುತ್ರ ಹಾಗೂ ಸಹಚರರು ಹೆಡ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದ ಪ್ರಕರಣ ಇದೀಗ ಗಂಭೀರತೆ ಪಡೆದುಕೊಂಡಿದೆ. ಹಲ್ಲೆಗೊಳಗಾದ ಪೊಲೀಸ್ ಕಾನ್ಸ್ಟೇಬಲ್ ಸೇರಿ ಮೂವರ ವಿರುದ್ಧ FIR ದಾಖಲಾಗಿದೆ.
ಪೊಲೀಸ್ ಪೇದೆಗಳಾದ ಹಣಮಂತ, ಹನುಮೇಶ್, ಮಹೇಶ್ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಈ ಬಗ್ಗೆ ದೊಂಡಂಬಳಿ ಗ್ರಾಮದ ಮೌನೇಶ್ ಎಂಬುವರಿಂದ ಕೇಸ್ ದಾಖಲಾಗಿದ್ದು, ಕಾನೂನು ಬಾಹಿರವಾಗಿ ಟ್ರ್ಯಾಕ್ಟರ್ ಜಪ್ತಿ ಮಾಡಿ, ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ದೂರು ನೀಡಿದ್ದಾರೆ.
ಹಲ್ಲೆಗೊಳಗಾದ ಹೆಡ್ ಕಾನ್ಸ್ಟೇಬಲ್ ಹಣಮಂತ್ರಾಯನ ವಿರುದ್ಧ ಶಾಸಕಿ ದೂರು ನೀಡಿ, ವಿನಾಃ ಕಾರಣ ನಮ್ಮಪುತ್ರನ ಮೇಲೆ ಹಲ್ಲೆ ಆರೋಪ ಮಾಡಿದ್ದಾರೆ. ನಾವು ಯಾವುದೇ ಮರಳು ಗಣಿಗಾರಿಕೆ ಮಾಡುತ್ತಿಲ್ಲ, ನಮ್ಮ ಹತ್ತಿರ ಯಾವುದೇ ಹಿಟಚಿ, ಟಿಪ್ಪರ್ ಇಲ್ಲ. ಹೇಗೆ ನಮ್ಮ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದೀರಾ? ಎಂದು ಹೇಳಿದ್ದರು.
ತಕ್ಷಣ ಹೆಡ್ ಕಾನ್ಸ್ ಟೇಬಲ್ ಮೇಲೆ FIR ದಾಖಲಿಸುವಂತೆ ಕರೆಯಮ್ಮ ಜಿ ನಾಯಕ ತಾಕೀತು ಮಾಡಿದ್ದರು. ಇದೀಗ ಮೌನೇಶ್ ಎಂಬವರ ದೂರಿನನ್ವಯ ಮೂವರು ಪೊಲೀಸ್ ಕಾನ್ಸ್ಟೇಬಲ್ ವಿರುದ್ಧ FIR ದಾಖಲಾಗಿದೆ.
ಪ್ರಕರಣ : ಕರ್ತವ್ಯನಿರತ ಹೆಡ್ ಕಾನ್‌ಸ್ಟೆಬಲ್ ಮೇಲೆ JDS ಶಾಸಕಿ ಪುತ್ರ ಹಲ್ಲೆ ಮಾಡಿದ್ದಾನೆ. ಅಕ್ರಮ ಮರಳಿನ ಟ್ರ್ಯಾಕ್ಟರ್ ತಡೆದಿದ್ದಕ್ಕೆ ದೇವದುರ್ಗ ಠಾಣೆ ಕಾನ್ಸ್ಟೇಬಲ್ ಹನುಮಂತ್ರಾಯ ಮೇಲೆ ಶಾಸಕಿ ಪುತ್ರ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಹೊಡಿಬೇಡಿ ನಾನೇನು ತಪ್ಪು ಮಾಡಿಲ್ಲ ಎಂದು ಕಾನ್ಸ್ಟೇಬಲ್ ಹೇಳಿದ್ರೂ ಬಿಡದೆ, ದೇವದುರ್ಗ ಐಬಿಯ ಕೋಣೆಗೆ ಬೀಗ ಜಡಿದು ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಹನುಮಂತ್ರಾಯಗೆ ಮನ ಬಂದಂತೆ ಹೊಡೆದಿದ್ದಾರೆ. ಶಾಸಕಿ ಆಪ್ತ ಸಹಾಯಕ ಇಲಿಯಾಸ್, ಜೆಡಿಎಸ್ ಮುಖಂಡರಿಂದಲೂ ಈ ಹಲ್ಲೆ ನಡೆದಿದೆ.
ಇದನ್ನೂ ಓದಿ : ಅಮೃತಹಳ್ಳಿ ಠಾಣೆ ಮೇಲೆ ಮಾನವ ಹಕ್ಕು ಆಯೋಗ ದಾಳಿ ಪ್ರಕರಣ : ಇನ್ಸ್ಪೆಕ್ಟರ್ ಅಂಬರೀಶ್ಗೆ ನಾಳೆ ವಿಚಾರಣೆಗೆ ಹಾಜರಾಗಲು ಸೂಚನೆ..!