Download Our App

Follow us

Home » ರಾಜಕೀಯ » ಹಾವೇರಿ ಲೋಕಸಭೆ ಟಿಕೆಟ್​​ಗಾಗಿ ಬಿಜೆಪಿಯಲ್ಲಿ ಮೂವರ ಫೈಟ್​​..!

ಹಾವೇರಿ ಲೋಕಸಭೆ ಟಿಕೆಟ್​​ಗಾಗಿ ಬಿಜೆಪಿಯಲ್ಲಿ ಮೂವರ ಫೈಟ್​​..!

ಹಾವೇರಿ : ಹಾವೇರಿ ಲೋಕಸಭೆ ಟಿಕೆಟ್​​ಗಾಗಿ ಬಿಜೆಪಿಯಲ್ಲಿ ಮೂವರ ನಡುವೆ ಫೈಟ್​​ ನಡೆಯುತ್ತಿದೆ. ಕಾಂತೇಶ್​ v/s ಸಂದೀಪ್​ ಪಾಟೀಲ್​​ v/s ಬಸವರಾಜ ಬೊಮ್ಮಾಯಿ ಮಧ್ಯೆ ಲೋಕಸಭೆ ಟಿಕೆಟ್​​ಗಾಗಿ ಫೈಟ್​​ ನಡೆಯುತ್ತಿದೆ.

ಪುತ್ರ ಕಾಂತೇಶ್​​ಗೆ ಟಿಕೆಟ್ ಕೊಡಿಸೋಕೆ ಕೆ.ಎಸ್. ಈಶ್ವರಪ್ಪ ಸರ್ಕಸ್​ ಮಾಡುತ್ತಿದ್ದು, ತಾವು ಮಾಡಿರೋ ತ್ಯಾಗಕ್ಕೆ ಪ್ರತಿಫಲ ಕೊಡಿ ಅಂತಾ ಈಶ್ವರಪ್ಪ ಕೇಳಿಕೊಂಡಿದ್ದಾರೆ. ಅಸೆಂಬ್ಲಿ ಚುನಾವಣೆಯಲ್ಲಿ ಹೈಕಮಾಂಡ್ ಆದೇಶ ಪಾಲಿಸಿದ್ದೇನೆ, ಪಕ್ಷ ನಿಷ್ಠೆಗೆ ಮಗನಿಗೆ ಟಿಕೆಟ್ ಕೊಡಿ ಎಂದು ಕೆ.ಎಸ್. ಈಶ್ವರಪ್ಪ ಡಿಮ್ಯಾಂಡ್ ಮಾಡಿದ್ದಾರೆ.

ಈಶ್ವರಪ್ಪ ಡಿಮ್ಯಾಂಡ್​ ಬೆನ್ನಲ್ಲೇ ಹಾವೇರಿ ರೇಸ್​ನಲ್ಲಿ ಮತ್ತೊಬ್ಬರ ಹೆಸರು ಕೇಳಿಬಂದಿದೆ. ಆಪ್ತ ವಕೀಲ ಸಂದೀಪ್ ಪಾಟೀಲ್​ಗೆ ಟಿಕೆಟ್​ ಕೊಡಿಸಲು ವಿಜಯೇಂದ್ರ ಯತ್ನಿಸುತ್ತಿದ್ದು, ಇದೆಲ್ಲದರ ಮಧ್ಯೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಲೋಕಸಭೆ ಟಿಕೆಟ್​​ಗಾಗಿ ಪ್ರಯತ್ನಿಸುತ್ತಿದ್ದಾರೆ. ವರಿಷ್ಠರ ಒಲವು ಇದ್ದಲ್ಲಿ ಅದೂ ಆಗುತ್ತೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಪಾರ್ಲಿಮೆಂಟ್​​ ಕ್ಷೇತ್ರದಲ್ಲಿ ಕೇಸರಿ ಟಿಕೆಟ್​​ಗೆ ಜಿದ್ದಿನ ಫೈಟ್​ ನಡೆಯುತ್ತಿದ್ದು, ಲಿಂಗಾಯತ ವೋಟ್​ಬ್ಯಾಂಕ್ ಇರೋ ಹಾವೇರಿ ಟಿಕೆಟ್​ ಯಾರಿಗೆ..? ಹಾವೇರಿ ಅಖಾಡದಲ್ಲಿ ಯಾರಿಗೆ ಮಣೆ ಹಾಕುತ್ತೆ ಬಿಜೆಪಿ ಹೈಕಮಾಂಡ್..? ಈಶ್ವರಪ್ಪ ಪುತ್ರನಾ..? ವಿಜಯೇಂದ್ರ ಆಪ್ತನಾ..? ಬಸವರಾಜ ಬೊಮ್ಮಾಯಿನಾ..? ಎಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ 4 ಲಕ್ಷ ಮೌಲ್ಯದ KTM ಬೈಕ್ ಕದ್ದು ಕಿಲಾಡಿ ಕಳ್ಳ ಎಸ್ಕೇಪ್.. CCTVಯಲ್ಲಿ ದೃಶ್ಯ ಸೆರೆ..!

Leave a Comment

DG Ad

RELATED LATEST NEWS

Top Headlines

ವಾಹನ ಸವಾರರೇ ಹುಷಾರ್… ಇನ್ಮುಂದೆ 130km ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದರೆ ಬೀಳುತ್ತೆ ಎಫ್‌ಐಆರ್‌..!

ಬೆಂಗಳೂರು : ಇನ್ಮುಂದೆ ರಾಜ್ಯಾದ್ಯಂತ ಗಂಟೆಗೆ 130 ಕಿಮೀ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ಅಂತವರ ವಿರುದ್ಧ FIR ದಾಖಲಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ

Live Cricket

Add Your Heading Text Here