ಬೆಳಗಾವಿ : ಚುನಾವಣೆ ಹೊತ್ತಲ್ಲೇ ಬೆಳಗಾವಿಯಲ್ಲಿ ಅನ್ನದಾತರ ಕಿಚ್ಚು ಭುಗಿಲೆದ್ದಿದೆ. ಬರ ಪರಿಹಾರ, ಸಾಲ ಮನ್ನಾ ಮಾಡುವಂತೆ ರೈತ ಹೋರಾಟಗಾರರು ಏಕಾಏಕಿ ಡಿಸಿ ಕಚೇರಿಗೆ ನುಗ್ಗಿದ್ದಾರೆ. ಜಿಲ್ಲಾಧಿಕಾರಿ ಗೇಟ್ ಬಂದ್ ಮಾಡಿದ್ದಕ್ಕೆ ರೈತರು ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ರೈತರು ಗೇಟ್ ಹಾರಿ ಡಿಸಿ ಕಚೇರಿಗೆ ನುಗ್ಗಿದ್ದು, ರೈತರು ಮತ್ತು ಪೊಲೀಸರ ನಡುವೆ ತಳ್ಳಾಟ, ನೂಕಾಟ ನಡೆದಿದೆ. ಗಲಾಟೆ ವೇಳೆ ಡಿಸಿಪಿ ರೋಹನ್ ಜಗದೀಶ್ ಅವರು ರೈತ ಮುಖಂಡರನ್ನ ತಳ್ಳಿದ್ದಾರೆ. ಹಾಗಾಗಿ ರೈತರು ಬ್ಯಾರಿಕೆಡ್ ಎತ್ತಿ ಆಕ್ರೋಶ ಹೊರ ಹಾಕಿದ್ದಾರೆ. ಪೊಲೀಸರು ದಬ್ಬಾಳಿಕೆ ಮಾಡ್ತಿದ್ದಾರೆಂದು ಆರೋಪಿಸಿ ರೈತರು ರಸ್ತೆ ತಡೆದಿದ್ದಾರೆ.
ಡಿಸಿ ಕಚೇರಿ ಮುಂಭಾಗದ ಮುಖ್ಯ ರಸ್ತೆ ತಡೆದು ರೈತರು ಪ್ರೊಟೆಸ್ಟ್ ನಡೆಸಿದ್ದಾರೆ. ಈ ವೇಳೆ ರೈತರ ಮನವೊಲಿಕೆಗೆ ಡಿಸಿ ಮತ್ತು ಡಿಸಿಪಿ ಹರಸಾಹಸ ಪಟ್ಟಿದ್ದಾರೆ.
ಇದನ್ನೂ ಓದಿ : ಮೈಸೂರಿನಲ್ಲಿ ಮೈತ್ರಿಗೆ ಚೂರಿ ಹಾಕಿದ್ದು ಯಾರು..? : ಹೆಚ್ಡಿಕೆಗೆ ಸಿಎಂ ಸಿದ್ದು ಪ್ರಶ್ನೆ..!
Post Views: 154