Download Our App

Follow us

Home » ರಾಜಕೀಯ » ಮೈಸೂರಿನಲ್ಲಿ ಮೈತ್ರಿಗೆ ಚೂರಿ ಹಾಕಿದ್ದು ಯಾರು..? : ಹೆಚ್​ಡಿಕೆಗೆ ಸಿಎಂ ಸಿದ್ದು ಪ್ರಶ್ನೆ..!

ಮೈಸೂರಿನಲ್ಲಿ ಮೈತ್ರಿಗೆ ಚೂರಿ ಹಾಕಿದ್ದು ಯಾರು..? : ಹೆಚ್​ಡಿಕೆಗೆ ಸಿಎಂ ಸಿದ್ದು ಪ್ರಶ್ನೆ..!

ಮೈಸೂರು : ಮೈಸೂರಿನಲ್ಲಿ ಮೈತ್ರಿಗೆ ಚೂರಿ ಹಾಕಿದ್ದು ಯಾರು..? ಮೈತ್ರಿ ಧರ್ಮ ಅಂದ್ರೆ ಎಲ್ಲರಿಗೂ ಒಂದೇ. ಜೆಡಿಎಸ್​ಗೆ ಬೇರೆ, ಕಾಂಗ್ರೆಸ್​ಗೆ ಬೇರೆ ಇರುತ್ತಾ..? ಮಂಡ್ಯದಲ್ಲಿ ನಿಖಿಲ್​ ಸೋಲಿಸಿ ಚೂರಿ ಹಾಕಿದ್ರು ಅಂತಾರೆ. ಹಾಗಿದ್ರೆ ಮೈಸೂರಿನಲ್ಲಿ ಇವ್ರು ಏನ್​​ ಮಾಡಿದ್ರು ನೆನಪಿಲ್ಲವೇ ಎಂದು ಮಾಜಿ ಸಿಎಂ ಹೆಚ್​ಡಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮಂಡ್ಯದಲ್ಲಿ ಮಗನನ್ನು ನಿಲ್ಲಿಸುವಾಗ ಯಾರ ಇಚ್ಛೆ ಇತ್ತು, ಈಗ ದೇವರು, ಹಾಗಿದ್ರೆ ಆಗ ಯಾರಿದ್ದರು..? ಎಂದು ಮಂಡ್ಯದ ಸ್ಪರ್ಧೆ ದೇವರ ಇಚ್ಚೆ ಎಂದ ಹೆಚ್​ಡಿಕೆ ಹೇಳಿಕೆಗೆ ಸಿಎಂ ವ್ಯಂಗ್ಯ ಮಾಡಿದ್ದಾರೆ.

ಸಿಎಂ ಮಗನೇ ಮಂಡ್ಯದಲ್ಲಿ ಸೋತಿದ್ರು, ಈ ಬಾರಿ ಜೆಡಿಎಸ್ ಮೂರಕ್ಕೆ ಮೂರರಲ್ಲೂ ಸೋಲ್ತಾರೆ. ಕಳೆದ ಬಾರಿ ನಾನು ಹೋಗಿದ್ದಕ್ಕೆ ಹಾಸನದಲ್ಲಿ ಪ್ರಜ್ವಲ್ ಗೆದಿದ್ದು, ಈ ಬಾರಿಯೂ ಹಾಸನಕ್ಕೆ ಹೋಗ್ತೇನೆ ಪ್ರಜ್ವಲ್​​ನ್ನು ಸೋಲಿಸುತ್ತೇನೆ ಎಂದು ಹೆಚ್​ಡಿಕೆ ಫ್ಯಾಮಿಲಿಗೆ ಸಿದ್ದರಾಮಯ್ಯ ಸವಾಲ್​ ಎಸೆದಿದ್ದಾರೆ.

ಇದನ್ನೂ ಓದಿ : ಚಾಮರಾಜನಗರ, ಮೈಸೂರು ಕ್ಷೇತ್ರಗಳ ಗೆಲುವಿಗೆ ಸಿಎಂ ಸಿದ್ದು ಮಾಸ್ಟರ್​ ಪ್ಲಾನ್​​..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಬೈಕ್ ಸವಾರನ ಶವವನ್ನು 18 ಕಿ.ಮೀ​ ಎಳೆದೊಯ್ದು ಪರಾರಿಯಾದ ಕಾರು ಚಾಲಕ..!

ಕಾರು ಚಾಲಕನೊಬ್ಬ ಬೈಕ್​ಗೆ ಡಿಕ್ಕಿ ಹೊಡೆದು ಸವಾರನನ್ನು ಬರೋಬ್ಬರಿ 18 ಕಿಲೋ. ಮೀಟರ್​ ದೂರಕ್ಕೆ ಎಳೆದೊಯ್ದು ಪರಾರಿಯಾಗಿರುವ ಘಟನೆ ಅನಂತಪುರದಲ್ಲಿ ನಡೆದಿದೆ. ಈ ಘಟನೆ ಭಾನುವಾರ ರಾತ್ರಿ

Live Cricket

Add Your Heading Text Here