Download Our App

Follow us

Home » ರಾಷ್ಟ್ರೀಯ » ರಾಮ ಮಂದಿರದ ಪ್ರತಿಷ್ಠಾಪನೆ ಹಾನಿಗೊಳಗಾದ ರಾಷ್ಟ್ರದ ಉತ್ಸಾಹದ ಪುನರುತ್ಥಾನವಾಗಿದೆ : ಸದ್ಗುರು..!

ರಾಮ ಮಂದಿರದ ಪ್ರತಿಷ್ಠಾಪನೆ ಹಾನಿಗೊಳಗಾದ ರಾಷ್ಟ್ರದ ಉತ್ಸಾಹದ ಪುನರುತ್ಥಾನವಾಗಿದೆ : ಸದ್ಗುರು..!

ಅಯೋಧ್ಯೆಯಲ್ಲಿ ರಾಮಮಂದಿರವನ್ನು ಸ್ವಾಗತಿಸಲು ರಾಷ್ಟ್ರವು ಸಜ್ಜಾಗುತ್ತಿರುವಾಗ ಸದ್ಗುರುಗಳು ರಾಮಮಂದಿರವು ಹೇಗೆ ನಾಗರಿಕತೆಯ ಪುನಶ್ಚೇತನದ ಸಂಕೇತವಾಗಿದೆ ಎನ್ನುವ ಕುರಿತು ಮಾತನಾಡಿದ್ದಾರೆ. “ರಾಮ ಮತ್ತು ರಾಮಾಯಣವು ಭಾರತೀಯ ಸಾಮಾಜಿಕ ಆದರ್ಶದ ಎಷ್ಟು ದೊಡ್ಡ ಭಾಗವಾಗಿದೆ ಎಂದರೆ ಅದು ಹಾನಿಗೊಳಗಾದ ರಾಷ್ಟ್ರೀಯ ಉತ್ಸಾಹದ ಪುನರುತ್ಥಾನದಂತೆ” ಎಂದು ಹೇಳಿದ್ದಾರೆ.

ಸದ್ಗುರುಗಳು, “ರಾಮನ ಸಂಪೂರ್ಣ ಜೀವನ – ಅವನ ರಾಜ್ಯ ಮತ್ತು ಹೆಂಡತಿಯನ್ನು ಕಳೆದುಕೊಳ್ಳುವುದರಿಂದ ಹಿಡಿದು, ತದನಂತರ ಎದುರಾದ ಕಷ್ಟಗಳು, ಮತ್ತೆ ತನ್ನ ಹೆಂಡತಿಯನ್ನು ಬಿಟ್ಟು ಕೊಡುವುದು ಮತ್ತುಅವನ ಸ್ವಂತ ಮಕ್ಕಳನ್ನೇ ಬಹುತೇಕ ಕೊಲ್ಲಲು ಹೊರಟಿದ್ದ ಈ ಘಟನೆಗಳನ್ನು ನೋಡಿದರೆ, ಅವು ಒಂದು ಸರಣಿ ದುರಂತವಾಗಿ ಕಾಣುತ್ತವೆ. ಇಷ್ಟೆಲ್ಲದರ ನಡುವೆಯೂ ಸಮಚಿತ್ತದಿಂದ ಉಳಿಯುವ ಅವನ ಸಾಮರ್ಥ್ಯವು ಇಂದಿಗೂ ಅವನನ್ನುಅಸಾಧಾರಣವಾಗಿಸಿದೆ” ಎಂದು ಹೇಳಿದ್ದಾರೆ.

ಈಗಿನ ಕಾಲಕ್ಕೆ ರಾಮನ ಪ್ರಸ್ತುತತೆಯ ಬಗ್ಗೆ ಮಾತನಾಡುತ್ತಾ, “ಜನರು ರಾಮನನ್ನುಆರಾಧಿಸುವುದು ಅವನ ಜೀವನದಲ್ಲಿನ ಯಶಸ್ಸನ್ನುನೋಡಿಅಲ್ಲ, ಆದರೆ ಅವನು ಅತ್ಯಂತ ಕಷ್ಟಕರವಾದ ಕ್ಷಣಗಳನ್ನುಸೊಗಸಾಗಿ ನಿಭಾಯಿಸಿದ ಕಾರಣಕ್ಕಾಗಿ” ಎಂದು ವಿವರಿಸುತ್ತಾರೆ. ಜನರ ಸ್ಥೈರ್ಯವನ್ನು ಶ್ಲಾಘಿಸುತ್ತಾ ಸದ್ಗುರುಗಳು, “ಜನರು 500 ವರ್ಷಗಳಿಂದ ರಾಮ ಮಂದಿರಕ್ಕಾಗಿ ಕಾಯುತ್ತಿದ್ದಾರೆ, ಆದ್ದರಿಂದ ದೇಶದಲ್ಲಿ ದೊಡ್ಡಉತ್ಸಾಹ ಮನೆಮಾಡಿದೆ. ಈ ಇಡೀ ಅಭಿಯಾನವನ್ನುದೇಶದ ಸಾಮಾನ್ಯ ಜನರು ನಿರ್ವಹಿಸಿದ್ದಾರೆ. ಅವರ ಪುಟಿದೇಳುವ ಉತ್ಸಾಹ, ಅವರಉಲ್ಲಾಸಮತ್ತುತಾಳ್ಮೆಯನ್ನುನೋಡಿ.” ಎಂದರು

ರಾಮ ರಾಜ್ಯವು ಪ್ರಪಂಚದ ಭವಿಷ್ಯ : ಸದ್ಗುರು – ಭಾರತದಲ್ಲಿ ರಾಮರಾಜ್ಯದ ಅಗತ್ಯವನ್ನು ವಿವರಿಸುತ್ತಾ ಸದ್ಗುರುಗಳು, “ರಾಮನು ಅತ್ಯುತ್ತಮ ರಾಜನೆಂದು ಪರಿಗಣಿಸಲ್ಪಟ್ಟ ಕಾರಣದಿಂದ ಅವನು ದೇವರಸ್ಥಾನಕ್ಕೆಏರಿದ” ಎಂದು ಒತ್ತಿ ಹೇಳುತ್ತಾರೆ. “ರಾಮನ ಆಡಳಿತವು ಅತ್ಯಂತ ಕರುಣೆಯಿಂದ ತುಂಬಿದ ನ್ಯಾಯಯುತವಾದ ಆಡಳಿತವಾಗಿತ್ತು. ಮತ್ತುಅನೇಕವಿಧಗಳಲ್ಲಿ, ಈ 6,000 ವರ್ಷಗಳಲ್ಲಿಈನಾಗರಿಕತೆಯನ್ನು ನಿರ್ಮಿಸುವಲ್ಲಿ ರಾಮನ ಕಾಲ ಒಂದು ರೀತಿಯ ಆಧಾರಸ್ತಂಭವಾಗಿದೆ. ಅತ್ಯುತ್ತಮ ಆಡಳಿತ ಮತ್ತು ಸಂಪೂರ್ಣ ನ್ಯಾಯಯುತರಾಷ್ಟ್ರಎಂದರೆ ಅದು “ರಾಮರಾಜ್ಯ”. ಇಂದಿಗೂ ನಾವು ರಾಮ ರಾಜ್ಯ ಎಂದು ಮಾತನಾಡಿದಾಗ, ಅದು ಅತ್ಯಂತ ನ್ಯಾಯ ಯುತವಾದ ರಾಜ್ಯ ಎಂದರ್ಥ. ಶೋಷಣೆಯರಾಜ್ಯವಲ್ಲ, ದಬ್ಬಾಳಿಕೆಯರಾಜ್ಯವಲ್ಲ, ಮತ್ತು ನಾವು ಭಾರತವನ್ನು ನಿರ್ಮಿಸಬೇಕಿರುವುದು ಹೀಗೆಯೇ, ಅದಕ್ಕಾಗಿ ರಾಮ ಮುಖ್ಯ” ಎಂದುಸದ್ಗುರುಗಳು ಮಾತು ಮುಗಿಸುತ್ತಾರೆ.

ಅಯೋಧ್ಯೆಯ ರಾಮ ಮಂದಿರದ ಪ್ರತಿಷ್ಠಾಪನೆಯ ಸಮಾರಂಭಕ್ಕೆ ಸದ್ಗುರುಗಳನ್ನು ರಾಮಜನ್ಮಭೂಮಿ ಟ್ರಸ್ಟ್ಆ ಹ್ವಾನಿಸಿದೆ. ಆದಾಗ್ಯೂ, ಅವರ ಪೂರ್ವ ಆಯೋಜಿತ ಕಾರ್ಯಕ್ರಮಗಳ ಕಾರಣದಿಂದಾಗಿ, ಅವರು ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ : ರಾಜ್ಯದ ಶ್ರೀರಾಮ‌ ಭಕ್ತರಿಗೆ ರಾಜ್ಯ ಬಿಜೆಪಿಯಿಂದ ಬಂಪರ್..!

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here