Download Our App

Follow us

Home » ರಾಜ್ಯ » ರಾಜ್ಯದ ಶ್ರೀರಾಮ‌ ಭಕ್ತರಿಗೆ ರಾಜ್ಯ ಬಿಜೆಪಿಯಿಂದ ಬಂಪರ್..!

ರಾಜ್ಯದ ಶ್ರೀರಾಮ‌ ಭಕ್ತರಿಗೆ ರಾಜ್ಯ ಬಿಜೆಪಿಯಿಂದ ಬಂಪರ್..!

ಬೆಂಗಳೂರು : ಐತಿಹಾಸಿಕ ಕ್ಷಣಕ್ಕೆ ಇನ್ನು ಎರಡು ದಿನ ಮಾತ್ರ ಬಾಕಿ ಉಳಿದಿದ್ದು, ಅಯೋಧ್ಯೆಯಲ್ಲಿ ಅಂತಿಮ ಹಂತದ ಸಿದ್ಧತೆಗಳು ಬಲು ಜೋರಾಗಿಯೇ ನಡೆಯುತ್ತಿದೆ. ರಾಮ ಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ ಜ.22ರಂದು ನಡೆಯುವ ಅಭೂತಪೂರ್ವ ರಾಮನ ಪ್ರಾಣ ಪ್ರತಿಷ್ಟಾಪನೆಯ ಬಳಿಕ ಕರ್ನಾಟಕದ ರಾಮ ಭಕ್ತರಿಗೆ ರಾಮನ ದರ್ಶನಕ್ಕೆ ಹೋಗಲು ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.

 

ಈ ಕುರಿತು ಮಾತನಾಡಿದ ಅವರು, ಎಲ್ಲರೂ ಐತಿಹಾಸಿಕ ಕ್ಷಣಕ್ಕೆ ಎದುರು ನೋಡ್ತಿದ್ದೇವೆ. ಜನವರಿ 22 ರಾಮನ ಪ್ರಾಣ ಪ್ರತಿಷ್ಟಾಪನೆ ಬಳಿಕ 60 ದಿನಗಳ ಕಾಲ ಕರ್ನಾಟಕದ ರಾಮ ಭಕ್ತರು ದರ್ಶನಕ್ಕೆ ತೆರಳಲಿದ್ದಾರೆ. ದರ್ಶನಕ್ಕೆ ತೆರಳುವವರಿಗೆ ಮೂರು ಸಾವಿರ ವೆಚ್ಚ ಆಗಲಿದ್ದು, ಅದನ್ನು ರಾಮ ಮಂದಿರಕ್ಕೆ ತೆರಳುವ ಭಕ್ತರೇ ಭರಿಸಲಿದ್ದಾರೆ. ಅದಕ್ಕೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಮಾಹಿತಿ ನೀಡಿದ್ದಾರೆ.

35 ಸಾವಿರಕ್ಕೂ ಹೆಚ್ಚು ರಾಮ ಭಕ್ತರು ಜ.22ರ ನಂತರ ಮಾರ್ಚ್​ ವರೆಗೂ ರಾಮ ಮಂದಿರಕ್ಕೆ ತೆರಳಲಿದ್ದಾರೆ. ಅದಕ್ಕಾಗಿಯೇ ರೈಲುಗಳು ಬುಕ್‌ ಆಗಿದ್ದು, ಅವರವರು ಅವರವರ ಖರ್ಚಿನಲ್ಲಿ ಹೋಗ್ತಿದ್ದಾರೆ. ಜಗದೀಶ್ ಹೀರೇಮನಿ ಅವರಿಗೆ ಇದರ ಜವಾಬ್ದಾರಿಯನ್ನು ನೀಡಿ ನೇಮಿಸಲಾಗಿದೆ. ರಾಮಭಕ್ತರಿಗೆ ವಿಶೇಷ ಕಾರ್ಡ್ ನೀಡಿದ್ದು, ಕ್ಯೂ ಆರ್ ಕೋಡ್ ಕೊಡಲಾಗಿದೆ.

ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ಯಾರು ತೆರಳುತ್ತಾರೆ ಅವರಿಗೆ ಎಲ್ಲವನ್ನು ಕನ್ನಡದಲ್ಲಿ ಅನೌನ್ಸ್ ಮೆಂಟ್ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಮಾಹಿತಿ ನೀಡಿದ್ದಾರೆ.

48 ಭೋಜನಾ ಶಾಲೆ ಇದ್ದು, ಕರ್ನಾಟಕದವರಿಗೆ ಎರಡು ಭೋಜನಾ ಶಾಲೆ ಮೀಸಲಿಡಲಾಗಿದೆ. 25 ವಿಶೇಷ ರೈಲು ಮಾಡಿದ್ದು, ಪ್ರತಿಯೊಂದರಲ್ಲೂ 1,200 ಜನ ಪ್ರಯಾಣ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಮನವಿ ಮಾಡ್ತೀನಿ. ರಾಮಭಕ್ತರಿಗೆ ಯಾವುದೇ ಅಡ್ಡಿ, ಆತಂಕ ಆಗದಂತೆ ನೋಡಿಕೊಳ್ಳಬೇಕು. ಸರ್ಕಾರ ಕೂಡ ಕೈ ಜೋಡಿಸಬೇಕು. ಈಗಾಗಲೇ ಕಾಂಗ್ರೆಸ್‌ನ ಕೆಲ ಮುಖಂಡರ ಹೇಳಿಕೆ, ಕೋಲಾರದಲ್ಲಿ ಫ್ಲೆಕ್ಸ್ ಹರಿದುಹಾಕಿದ್ದು, ಹುಬ್ಬಳ್ಳಿಯಲ್ಲಿ ಕರ ಸೇವಕನ ಬಂಧನ ವಿಚಾರ ಮತ್ತೊಂದಕ್ಕೆ ತಿರುಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರ ಯಾವುದೇ ಅಹಿತಕರ ಘಟನೆ ಆಗದಂತೆ ಕ್ರಮ‌ ತೆಗೆದುಕೊಳ್ಳಬೇಕು. ಸಿಎಂ ಹಾಗೂ ಗೃಹಸಚಿವರಿಗೆ ಮನವಿ ಮಾಡ್ತೀನಿ. ಕರ್ನಾಟಕದಲ್ಲಿ 160 PVR ನಲ್ಲಿ ನೇರ ಪ್ರದರ್ಶನ ಇರಲಿದೆ. ಕನ್ನಡದ ನ್ಯೂಸ್ ಚಾನಲ್‌ಗಳು ನೇರ ಪ್ರಸಾರ ಮಾಡಲಿವೆ ಎಂದು ಹೇಳಿದ್ದಾರೆ.

ನಮ್ಮ‌ ಗ್ರಾಮದಲ್ಲಿರೋ ದೇವಸ್ಥಾನ ಸ್ವಚ್ಚಗೊಳಿಸುವುದು. 22ರ ಸಂಜೆ ಐದು ದೀಪಗಳನ್ನ ಉತ್ತರಾಭಿಮುಖವಾಗಿ ಬೆಳಗಿಸುವುದು. ಪವಿತ್ರ ಮಂತ್ರಾಕ್ಷತೆ ರಾಜ್ಯಕ್ಕೆ ಕೊಡುವ ಕಾರ್ಯಕ್ರಮ ಮಾಡಿದ್ದೆವು. ನಮ್ಮ ನಿರೀಕ್ಷೆ ಮೀರಿ ಜನರ ಸ್ಪಂದನೆ ದೊರೆತಿದೆ. ಮನೆ ಮನೆಗೂ ತಲುಪಿದೆ.

ಈಗಾಗಲೇ ಅಯೋದ್ಯೆಗೆ ಹೋಗುವವರು ಬುಕಿಂಗ್ ಮಾಡಲು ಸಂಪರ್ಕ ಮಾಡಿದ್ದಾರೆ. ಪ್ರತೀ ರೈಲಿನಲ್ಲಿ ಇಬ್ಬರು ಪ್ರಬಂಧಕರು ಇರಲಿದ್ದಾರೆ. ಭಾಷೆ ಸಮಸ್ಯೆ ಆಗದಂತೆ ಕನ್ನಡದಲ್ಲೇ ಕರೆ ನೀಡಲಾಗುವುದು. ಮೂರು ಸಾವಿರ ವೆಚ್ಚ ಆಗಲಿದ್ದು, ಅದನ್ನು ರಾಮ ಮಂದಿರಕ್ಕೆ ತೆರಳುವ ಭಕ್ತರೇ ಭರಿಸಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ರಾಮಮಂದಿರ ಉದ್ಘಾಟನೆಗೆ ನಟ ರಿಷಬ್ ಶೆಟ್ಟಿಗೆ ಆಹ್ವಾನ.. ‘ಇದು ನನ್ನ ಪೂರ್ವ ಜನ್ಮದ ಪುಣ್ಯ’ ಎಂದ ಶೆಟ್ರು..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here