Download Our App

Follow us

Home » ರಾಜ್ಯ » ಬಿಸಿಲಿನ ತಾಪದ ಎಫೆಕ್ಟ್ : ರಾಜ್ಯದಲ್ಲಿ ಬಿಯರ್​ ಭರ್ಜರಿ ಸೇಲ್ – 11 ದಿನದಲ್ಲಿ 17.67 ಲಕ್ಷ ಲೀ.​​​ ಮಾರಟ..!

ಬಿಸಿಲಿನ ತಾಪದ ಎಫೆಕ್ಟ್ : ರಾಜ್ಯದಲ್ಲಿ ಬಿಯರ್​ ಭರ್ಜರಿ ಸೇಲ್ – 11 ದಿನದಲ್ಲಿ 17.67 ಲಕ್ಷ ಲೀ.​​​ ಮಾರಟ..!

ಬೆಂಗಳೂರು : ರಾಜ್ಯದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಬಿಯರ್‌ ಮಾರಾಟದಲ್ಲೂ ಹೆಚ್ಚಳವಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ತಣ್ಣನೆಯ ಬಿಯರ್‌ ಖರೀದಿಗೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಿರುವುದು ಇದಕ್ಕೆ ಕಾರಣವಾಗಿದೆ.

ಏ.1 ರಿಂದ 11 ರವರೆಗೂ ರಾಜ್ಯದಲ್ಲಿ ಒಟ್ಟಾರೆ 17.67 ಲಕ್ಷ ಲೀಟರ್‌ ವಿವಿಧ ಬ್ರಾಂಡ್‌ನ ಬಿಯರ್‌ ಮಾರಾಟವಾಗಿದೆ. 2021ರಲ್ಲಿ ಇದೇ ಅವಧಿಯಲ್ಲಿ 8.83 ಲಕ್ಷ ಲೀಟರ್‌, 2022ರಲ್ಲಿ 9.20 ಲಕ್ಷ ಲೀಟರ್‌, 2023ರಲ್ಲಿ 13.16 ಲಕ್ಷ ಲೀಟರ್‌ ಬಿಯರ್‌ ಮಾರಾಟವಾಗಿತ್ತು. ಆದರೆ ಈ ಬಾರಿ ಬಿಸಿನ ಝಳ ಹೆಚ್ಚಾಗಿರುವುದರಿಂದ ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಅಧಿಕ ಬಿಯರ್‌ ಬಿಕರಿಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಬರೋಬ್ಬರಿ 4.51 ಲಕ್ಷ ಲೀಟರ್‌ ಬಿಯರ್‌ ಅಧಿಕ ಸೇಲ್‌ ಆಗಿದೆ. ಸಾಮಾನ್ಯವಾಗಿ ದಿನಕ್ಕೆ ಸುಮಾರು ಒಂದು ಲಕ್ಷ ಲೀಟರ್‌ ಬಿಯರ್‌ ರಾಜ್ಯಾದ್ಯಂತ ಮಾರಾಟವಾಗುತ್ತದೆ. ಈ ಬಾರಿ ಬಿಸಿಲು ಅಧಿಕವಾಗಿರುವುದರಿಂದ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ.

ಇದನ್ನೂ ಓದಿ : ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅಬ್ಬರದ ಎದುರು ಮಂಕಾದ ಬಿಜೆಪಿ – ಚೌಟ ಪ್ರಚಾರ ವೈಖರಿಗೆ ಸ್ಥಳೀಯ ಬಿಜೆಪಿಗರೇ ಬೇಸರ..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here