ಬೆಂಗಳೂರು : ಬೆಂಗಳೂರಲ್ಲಿ ಹಾಡಹಗಲೇ ಮಟ ಮಟ ಮಚ್ಚುಬೀಸಿ ಡೆಡ್ಲಿ ರಾಬರಿ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗನ್ ತೋರಿಸಿ ಲಾಂಗ್ ಬೀಸಿ ಪೆಪ್ಪರ್ ಸ್ಪ್ರೇ ಹಾಕಿ 15 ಲಕ್ಷ ದರೋಡೆ ಮಾಡಿದ್ದು, ಸಿಗರೇಟ್ ಡಿಸ್ಟ್ರಿಬ್ಯೂಟರ್ ನ ಅಟ್ಯಾಕ್ ಮಾಡಿ ಹಣ ದರೋಡೆ ಮಾಡಲಾಗಿದೆ.
ಕೆಂಗೇರಿಯ ಅಂಗಡಿಗಳಿಂದ ಸಿಗರೇಟ್ ಬಿಲ್ ಕಲೆಕ್ಟ್ ಮಾಡ್ಕೊಂಡು ಬರ್ತಿದ್ದ ಸಿಗರೇಟ್ ಡಿಸ್ಟ್ರಿಬ್ಯೂಟರ್ ಗೋಪಾಲ್ ಅವರು ಟಾಟಾ ಏಸ್ ವಾಹನದಲ್ಲಿದ್ದನ್ನು ಗಮನಿಸಿ ರಾಬರ್ಸ್ ವಾಹನ ಹಿಂಬಾಲಿಸಿದ್ದು, ಬಳಿಕ ನಾಗರಭಾವಿ ಪಾಪರೆಡ್ಡಿಪಾಳ್ಯಕ್ಕೆ ಬಂದಿದ್ದ ಗೋಪಾಲ್ ಬಂದ ವೇಳೆ ನಾತೂರಾಮ್ ಎಂಬುವವರ ಅಂಗಡಿ ಬಳಿ ಸಿಗರೇಟ್ ಬಿಲ್ ಕಲೆಕ್ಟ್ ಮಾಡಲಿಕ್ಕೆ ಇಳಿದಿದ್ದರು.
ಈ ವೇಳೆ ಡಿಯೋ ಬೈಕ್ ನಲ್ಲಿ ಮೂವರು ರಾಬರ್ಸ್ ಎಂಟ್ರಿ ಕೊಟ್ಟಿದ್ದು, ಮೂವರ ಪೈಕಿ ಇಬ್ಬರು ಪೆಪ್ಪರ್ ಸ್ಪ್ರೇ ಹಾಕಿ ಗನ್ ತೋರಿಸಿ ಲಾಂಗ್ ಬೀಸಿದ್ದಾರೆ. ಪ್ರಾವಿಜನ್ ಸ್ಟೋರ್ ಒಳಗೆಲ್ಲ ಗೋಪಾಲ್ ರನ್ನ ರಾಬರ್ಸ್ ಅಟ್ಟಾಡಿಸಿದ್ದಾರೆ. ಲಾಂಗ್ ಬೀಸಿದ ರಭಸಕ್ಕೆ ಹಣವಿದ್ದ ಬ್ಯಾಗ್ ಕಟ್ಟಾಗಿತ್ತು. ಕೂಡಲೇ ಹಣವಿದ್ದ ಬ್ಯಾಗನ್ನ ಆರೋಪಿಗಳು ಎತ್ತೊಯ್ದಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ನಾಗರೀಕ ವಿಮಾನಯಾನ ಇಲಾಖೆಯ ಡ್ರೋನ್ ಮಾರಾಟದ ಆರೋಪ – ಡ್ರೋನ್ ಪ್ರತಾಪ್ ವಿರುದ್ದ ಮತ್ತೊಂದು ದೂರು ದಾಖಲು..!