ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಆಗಿರುವ ‘ಬಿಗ್ ಬಾಸ್’ ಕನ್ನಡ’ ಹತ್ತನೇ ಸೀಸನ್ ನ ಮೊದಲ ರನ್ನರ್ ಅಪ್ ಆದ ಡ್ರೋನ್ ಪ್ರತಾಪ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೇ ಹಲವಾರು ರೀತಿಯಲ್ಲಿ ಅವರ ಮೇಲೆ ಆರೋಪ ಮಾಡಲಾಗಿತ್ತು. ಡಾ.ಪ್ರಯಾಗ್ ಮಾನನಷ್ಟ ದಾವೆ ಹೂಡಿದ್ದರೆ, ಸಾರಂಗ ಎನ್ನುವವರು ಹಣಕಾಸಿನ ವಿಷಯದಲ್ಲಿ ಡ್ರೋನ್ ಪ್ರತಾಪ್ ರಿಂದ ತಮಗೆ ಮೋಸವಾಗಿದೆ ಎಂದು ಆರೋಪ ಮಾಡಿದ್ದರು.
ಈಗ ಡ್ರೋನ್ ಪ್ರತಾಪ್ ವಿರುದ್ದ ಮತ್ತೊಂದು ದೂರು ದಾಖಲಾಗಿದೆ. ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ಪ್ರತಾಪ್ ವಿರುದ್ದ ದೂರು ನೀಡಲಾಗಿದೆ. ಪರಮೇಶ್ ಎಂಬುವವರು ದೂರು ನೀಡಿದ್ದು, ಡ್ರೋನ್ ಪ್ರತಾಪ್ ನಾಗರೀಕ ವಿಮಾನಯಾನ ಇಲಾಖೆ (ಡಿಜಿಸಿಎ) ಡ್ರೋನ್ ಮಾರಾಟ ಮಾಡುತ್ತಿರೋ ಆರೋಪ ಹಿನ್ನೆಲೆ ಈ ದೂರನ್ನು ದಾಖಲಿಸಿದ್ದಾರೆ.
ಡ್ರೋನ್ ಪ್ರತಾಪ್ ನಡೆಸ್ತಿರೋ ಡ್ರೋಣಾರ್ಕ್ ಏರೋಸ್ಪೇಸ್ ಪ್ರೈ. ಲಿ ಸಂಸ್ಥೆ ಪರವಾನಗಿ ಪಡೆದಿಲ್ಲ. ಆದರೂ ಡ್ರೋನ್ ಮಾರಾಟ ಮಾಡುವ ಮೂಲಕ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಪರವಾನಗಿ ಇಲ್ಲದ ಡ್ರೋನ್ ಮಾರಾಟ ಮಾಡುತ್ತಿರೋ ಬಗ್ಗೆ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಪರಮೇಶ್ ಎಂಬುವವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಪ್ರತ್ಯೇಕ ದೇಶಕ್ಕೆ ಧ್ವನಿ ಎತ್ತಿದ ಸಂಸದ ಡಿಕೆ ಸುರೇಶ್..!