ದಾವಣಗೆರೆ : ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಜಗಳೂರು ತಾಲ್ಲೂಕಿನ ಅಸಗೋಡು ಗ್ರಾಮದಲ್ಲಿ ನಡೆದಿದೆ. 12 ವರ್ಷದ ಗಂಗೋತ್ರಿ, 10 ವರ್ಷದ ತನುಶ್ರೀ ಮೃತ ಮಕ್ಕಳು ಎಂದು ಗುರುತಿಸಲಾಗಿದೆ.
ಜಮೀನಿನಲ್ಲಿ ಆಟವಾಡುವ ವೇಳೆ ಮಕ್ಕಳು ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಕೂಡಲೇ ಪೋಷಕರು ಮಕ್ಕಳನ್ನು ರಕ್ಷಣೆ ಮಾಡಲು ಹೋಗಿದ್ದಾರೆ, ಅಷ್ಟರಲ್ಲಾಗಲೇ ಬಾಲಕಿಯರು ಮೃತಪಟ್ಟಿದ್ದಾರೆ.
ಕೃಷಿ ಹೊಂಡಗಳು ಮೃತ್ಯುಕೂಪಗಳಂತಾಗಿದ್ದು, ಮಕ್ಕಳ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ನೆಲಮಂಗಲ : ಖ್ಯಾತ ಇತಿಹಾಸ ತಜ್ಞ ಗೋಪಾಲ ರಾವ್ ವಿಧಿವಶ..!
Post Views: 29